ಶಿವಮೊಗ್ಗ

ಕೌಟುಂಬಿಕ ನೆಲೆಗಟ್ಟು ಗಟ್ಟಿಯಾಗಲಿ

Published On :

ಕ.ಪ್ರ.ವಾರ್ತೆ, ನರಸಿಂಹರಾಜಪುರ, ಮಾ.23
ಇಂದು ಬೌದ್ಧಿಕವಾಗಿ ಬೆಳವಣಿಗೆ ಹೊಂದಿದಂತೆ ಕೌಟುಂಬಿಕ ಸಂಬಂಧಗಳು ಮಾತ್ರ ದೂರವಾಗುತ್ತಿರುವುದು ವಿಷಾದಕರ ಬೆಳವಣಿಗೆಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ. ಉಮೇಶ್ ಅಭಿಪ್ರಾಯಪಟ್ಟರು.
  ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಶುಕ್ರವಾರ ನಡೆದ ಭಾವ ನಮನ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
 ಕೌಟಂಬಿಕ ನೆಲೆಗಟ್ಟು ಗಟ್ಟಿಯಾದಾಗ ಮಾತ್ರ ಸಾಮಾಜಿಕ ನೆಲಗಟ್ಟು ಗಟ್ಟಿಯಾಗಲು ಸಾಧ್ಯ. ಮಕ್ಕಳು ತಮ್ಮ ತಂದೆ, ತಾಯಿಗೆ ಗೌರವ ನೀಡಬೇಕು. ಅವರನ್ನು ಕೇಂದ್ರೀಕರಿಸೊಕಂಡು ಕುಟಂಬದ ಎಲ್ಲಾ ಸಂಬಂಧಗಳನ್ನು ಒಗ್ಗೂಡಿಸುವ ಅವಶ್ಯಕತೆ ಇದೆ ಎಂದರು.
ಭಾವ ನಮನ: ಕಾಲೇಜಿನ ಕನ್ನಡ ಉಪನ್ಯಾಸಕ ಅಣ್ಣಪ್ಪ ಮಳೀಮಠ ಮಾತನಾಡಿ, ಪ್ರೇಮಿಗಳ ದಿನ ಆಚರಿಸುವ ಬದಲು ತಂದೆ, ತಾಯಿಗೆ ಗೌರವ ಸೂಚಿಸುವ ಭಾವ ನಮನ ಕಾರ್ಯಕ್ರಮ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಜಾರಿಗೊಳಿಸಿರುವ ಭಾವ ನಮನ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದೆ ಎಂದರು.
 ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಕೆ. ಪೂರ್ಣೇಶ್ ಮಾತನಾಡಿ, ತಂದೆ, ತಾಯಿಯ ಪ್ರೀತಿಯನ್ನು ಹಣ ನೀಡಿ ಪಡೆಯಲು ಸಾಧ್ಯವಿಲ್ಲ. ಮಕ್ಕಳು ತಮ್ಮ ಪೋಷಕರೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು  ಎಂದರು.
  ಕನ್ನಡ ಉಪನ್ಯಾಸಕಿ ರೇಷ್ಮಾ ಮಾತನಾಡಿ, ತಂದೆ, ತಾಯಿ ಸಂಬಂಧ ಕೇವಲ ಅಂಕಿ, ಅಂಶಗಳ ಸಂಬಂಧವಾಗಿರಬಾರದು. ಅದು ಭಾವಾನಾತ್ಮಕ ಸಂಬಂಧವಾಗಿರಬೇಕು ಎಂದರು.
 ಮೋನಿಕ ಪ್ರಾರ್ಥಿಸಿದರು. ಅರುಣ್ ಸ್ವಾಗತಿಸಿದರು. ರಾಜೀವ್ ಕಾರ್ಯಕ್ರಮ ನಿರೂಪಿಸಿದರು. ಸುಬ್ರಮಣ್ಯ ವಂದಿಸಿದರು.
ಭಾವನಮನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ತಂದೆ, ತಾಯಿ ಬಗ್ಗೆ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.