ಶಿವಮೊಗ್ಗ

ನೋಟಿಸ್ ನೀಡಿದ ನಂತರವೂ ಹೆಚ್ಚುವರಿ ಶುಲ್ಕ ವಸೂಲಿ

Published On :

ಕ.ಪ್ರ.ವಾರ್ತೆಶಿವಮೊಗ್ಗ ಮಾ.23
ಪ.ಪೂ. ಶಿಕ್ಷಣ ಇಲಾಖೆಯು ನೋಟಿಸ್ ನೀಡಿದ ನಂತರವೂ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಿ ಅಕ್ರಮ ಪಾಠ ಮಾಡಲಾಗುತ್ತಿದೆ ಎಂದು ಆರೋಪಿ ಡಿವಿಎಸ್ ಸ್ವತಂತ್ರ ಪ.ಪೂ. ಕಾಲೇಜಿನ ಎದುರು  ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ. ದೇವೇಂದ್ರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಡಿವಿಎಸ್ ಆಡಳಿತ ಮಂಡಳಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದಾಖಲಾತಿ ಸಂದರ್ಭದಲ್ಲಿ ಮಾಹಿತಿ ಪುಸ್ತಕದಲ್ಲಿ ಉತ್ತಮ ಉಪನ್ಯಾಸಕರಿಂದ ಪ್ರವಚನ, ಉಚಿತ ವಿವಿಧ ಕೋರ್ಸ್‌ಗಳ ಅಧ್ಯಯನ ಎಂದು ಮಾಹಿತಿ ನೀಡಿ, ಹತ್ತಾರು ಸಾವಿರ ಹಣ ವಸೂಲಿ ಮಾಡಿಕೊಂಡು ಈಗ ಅದೇ ವಿದ್ಯಾರ್ಥಿಗಳಿಗೆ ವಿಶೇಷ ಪ್ರವಚನ ಎಂದು ಕ್ರ್ಯಾಷ್ ಕೋರ್ಸ್ ಹೆಸರಿನಲ್ಲಿ ಪ್ರತೀ ವಿದ್ಯಾರ್ಥಿಗಳಿಂದ ರು. 10,000 ಹಣ ವಸೂಲಿ ಮಾಡುತ್ತಿದ್ದಾರೆ. ಡಿವಿಎಸ್ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿ 3 ತಿಂಗಳ ಹಿಂದೆ ಸಂಬಂಧಪಟ್ಟ ಪದವಿಪೂರ್ವ  ಶಿಕ್ಷಣ ಇಲಾಖೆಗೆ ನಮ್ಮ ಸಂಘಟನೆ ದಾಖಲೆ ಸಮೇತ ಮನವಿ ಮಾಡಿದ್ದು ಆ ಮನವಿಗೆ ಪೂರಕವಾಗಿ ಆಡಳಿತ ಮಂಡಳಿಗೆ ಇಲಾಖೆ ಎಚ್ಚರಿಕೆ ನೋಟಿಸ್ ನೀಡಿತ್ತು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಇಲಾಖೆ ಅಧಿಕಾರಿ ಉಮೇಶ್ ಪ್ರತಿಭಟನಾಕಾರರು ಮತ್ತು ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಕಾಂಗ್ರೆಸ್ ಕಾರ್ಮಿಕ ವಿಭಾಗದ ನಗರ ಅಧ್ಯಕ್ಷ ಹುಸೇನ್, ಅಣ್ಣಪ್ಪ ಎಂ.ಜಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ  ನಜಾಂ ಉಲ್ಲಾಖಾನ್, ಗಾಜನೂರು ಗಣೇಶ್, ಈಶ್ವರ್, ಎನ್‌ಎಸ್‌ಯುಐ ಕುವೆಂಪು ವಿವಿ ಘಟಕದ ಅಧ್ಯಕ್ಷ  ಮಧುಸೂಧನ್, ಜಿಲ್ಲಾ ಅಧ್ಯಕ್ಷ ಚೇತನ್, ವಿಕಾಸ್, ಶ್ರೀಜಿತ್, ಶ್ರೀಕಾಂತ್. ಪಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.