ವಸತಿ ಯೋಜನೆ ಜಾರಿ ವಿಳಂಬ: ಪ್ರತಿಭಟನೆ
ಕ.ಪ್ರ.ವಾರ್ತೆಸೊರಬ ಮಾ.23
ಬಸವ ವಸತಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬ ನೀತಿ ಖಂಡಿಸಿ, ಹಳೇಸೊರಬ ಗ್ರಾಪಂ ವ್ಯಾಪ್ತಿಯ ಜಯಂತಿ ಗ್ರಾಮ, ರಾಜೀವ ನಗರ, ಹೊಸಪೇಟೆ ಬಡಾವಣೆಯವರು ಶನಿವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹಳೇಸೊರಬ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ 516 ಮನೆಗಳು ಮಂಜೂರಾಗಿದ್ದು, ಸುಮಾರು 100 ಕುಟುಂಬಗಳಿಗೆ ಮಂಜೂರಾತಿ ಪತ್ರವಿದ್ದರೂ ದಾಖಲಾತಿ ಸರಿ ಇಲ್ಲ ಎಂದು ಅರ್ಜಿ ವಜಾಗೊಳಿಸಲಾಗಿದೆ. ನಿವೇಶನ ಕುಟುಂಬದ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ದಾಖಲಾತಿ ಇದ್ದರೂ ಸಾಕು ಉಪ ನೋಂದಣಿ ಕಚೇರಿಯಲ್ಲಿ ಗ್ರಾಪಂ ಅಧಿಕಾರಿಗಳು ಖುದ್ದು ನಿಂತು ರಿಜಿಸ್ಟ್ರರ್ ಮಾಡಿಸಿಕೊಡಬೇಕು ಎಂದು ಈ ಹಿಂದೆ ಹಾಲಪ್ಪ ಶಾಸಕರಿದ್ದಾಗ ಗ್ರಾಪಂ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದರು.
ವಾಸ್ತವವಾಗಿ ವಜಾಗೊಂಡಿರುವ ನೂರು ಕುಟುಂಬಗಳು ರೆವಿನ್ಯೂ ಜಾಗೆಯಲ್ಲಿ ವಾಸವಾಗಿದ್ದು, ಜಾಗದ ಹಕ್ಕು ಉಳ್ಳವರಾಗಿದ್ದಾರೆ. ಕಂದಾಯವನ್ನು ಕಟ್ಟಿದ್ದಾರೆ. ಹೀಗಿದ್ದರೂ ಸಹಾ ಅಧಿಕಾರಿಗಳು ಉಳ್ಳವರಿಗೆ ಮನೆ ನೀಡಿ ಕಡು ಬಡವರಿಗೆ ಅನ್ಯಾಯವೆಸಗಿದ್ದಾರೆ ಎಂಬ ಆರೋಪ ಪ್ರತಿಭಟನಾಕಾರರಿಂದ ವ್ಯಕ್ತವಾಯಿತು. ಈ ತಾರತಮ್ಯ, ವಂಚನೆ ಕುರಿತಂತೆ ಶೀಘ್ರ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಸರ್ಕಾರದ ಆದೇಶವನ್ನು ಪಾಲಿಸಿ, ಅರ್ಹರಿಗೆ ಮನೆ ಮಂಜೂರು ಮಾಡಿ ಎಂದು ಆಗ್ರಹಿಸಿದರು.
ಅಭಿವೃದ್ಧಿ ಅಧಿಕಾರಿ ನೀಲಕಂಠಪ್ಪ ಪ್ರತಿಕ್ರಿಯಿಸಿ, ಮನೆಗಾಗಿ ಅರ್ಜಿ ಸಲ್ಲಿಸಿದವರು ಅಗತ್ಯದಾಖಲೆಗಳನ್ನು ನೀಡಿಲ್ಲ, ನಿವೇಶನ ಬೇರೆಯವರ ಹೆಸರಲ್ಲಿದ್ದವರು ಫಲಾನುಭವಿಯ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಳ್ಳ ಬೇಕಾಗಿರುವುದು ಖಡ್ಡಾಯವಾಗಿದೆ. ಹಾಗಾಗಿ ಸಮರ್ಪಕ ದಾಖಲಾತಿ ಇಲ್ಲದ ಅರ್ಜಿಗಳನ್ನು ವಜಾ ಗೊಳಿಸಲಾಗಿದೆ. ಕೂಡಲೆ ಅಗತ್ಯ ದಾಖಲೆ ಒದಗಿಸಿದರೆ ಹಣ ಬಿಡುಗಡೆ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಪಂ ಸದಸ್ಯ ಗುರುಕುಮಾರ ಪಾಟೀಲ್, ಪಪಂ ಸದಸ್ಯ ಎಂ.ಡಿ. ಉಮೇಶ್, ಗ್ರಾಪಂ ಸದಸ್ಯೆ ಅನಸೂಯಮ್ಮ, ಗ್ರಾಪಂ ಮಾಜಿ ಸದಸ್ಯ ಮೋಹನ್, ಗೌರಿ, ಮಂಜುಳ, ರಂಗನಾಥ್, ಸುರೇಶ್, ಬಂದಿಗೆ ಬಸವರಾಜ್ ಶೇಠ್, ಹಬೀಬುಲ್ಲಾ, ಅಸ್ಲಾಂ, ಶರೀಫ್, ಶಫಿ ಅಹ್ಮದ್, ನಾಗರತ್ನ, ಮುನಿರಾಭಿ, ರಂಜನ್, ಶಾರೂಕ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

