ವಸುದೇವ ಭೂಪಾಳಂ ಸಾಹಿತ್ಯ ಉಪನ್ಯಾಸ
ಕ.ಪ್ರ.ವಾರ್ತೆ, ಸಾಗರ, ಮಾ.24
ಬಹುಪಾಲು ಜನರು ನಂಬಿಕೊಂಡಿರುವ ಸಂಗತಿಯನ್ನು ವೈಚಾರಿಕವಾಗಿ ಚರ್ಚಿಲು ದಿಟ್ಟತನ ಅಗತ್ಯ. ವಸುದೇವ ಭೂಪಾಳಂ ದೇವರ ಕುರಿತು ವೈಚಾರಿಕ ನೆಲೆಯಲ್ಲಿ ಆಲೋಚಿಸಿ ದಿಟ್ಟತನ ಮೆರೆದಿದ್ದಾರೆ ಎಂದು ಉಪನ್ಯಾಸಕ ಜಿ. ಯೋಗೀಶ್ ಹೇಳಿದರು.
ಇಲ್ಲಿನ ತಾಲೂಕು ಕಸಾಪ ಏರ್ಪಡಿಸಿದ್ದ ವಸುದೇವ ಭೂಪಾಳಂ ಸಾಹಿತ್ಯ ಕುರಿತು ಭೂಪಾಳಂ ಚಂದ್ರಶೇಖರ್ ನೀಡಿರುವ ದತ್ತಿ ಉಪನ್ಯಾಸದಲ್ಲಿ ಅವರು ಉಪನ್ಯಾಸ ನೀಡಿದರು.
ಸಾಹಿತ್ಯ ಕೃತಿಯನ್ನು ರಚಿಸುವಾಗ ಸಮಾಜ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತದೆ. ಸೃಜಶೀಲ ಪ್ರಕಾರಗಳಾದ ಕತೆ, ಕಾದಂಬರಿ, ಕವನಗಳಲ್ಲಿ ಹೇಳಬಹುದಾದ ಸೈದ್ಧಾಂತಿಕ ವಿಚಾರಗಳು ಅನೇಕ ಸಂದರ್ಭದಲ್ಲಿ ಒತ್ತು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ವಸುದೇವ ಭೂಪಾಳಂ ಇಂತಹ ಹಲವು ಸಮಸ್ಯೆಗಳನ್ನು ಸಾಹಿತ್ಯಿಕ ಕೃಷಿಯಲ್ಲಿ ತೊಡಗಿದ್ದಾಗ ಅನುಭವಿಸಿದ್ದಾರೆ ಎಂದು ಹೇಳಿದರು.
ಸ್ವತಂ ಕಾದಂಬರಿಕಾರರಾದರೂ ದೇವರ ಕುರಿತಾದ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಗದ್ಯಶೈಲಿಯಾದ ಪ್ರಬಂಧವನ್ನೇ ಅವಲಂಬಿಸಿರುವುದು ವಸುದೇವ ಭೂಪಾಳಂ ವಿಶಿಷ್ಟತೆ. ಭೂಪಾಳಂ ಅವರ ಅನೇಕ ಕೃತಿಗಳಲ್ಲಿ ಮೂಢನಂಬಿಕೆ, ಮಾನವೀಯ ಮೌಲ್ಯ ನಾಶವಾಗುತ್ತಿರುವುದು ಇನ್ನಿತರ ವಿಷಯಗಳು ಚರ್ಚಿತವಾಗಿವೆ. ವಸುದೇವ ಭೂಪಾಳಂ ಬರೆದಿರುವ ಸಾಹಿತ್ಯದ ಕುರಿತು ಇನ್ನಷ್ಟು ಅಧ್ಯಯನ ಅಗತ್ಯ ಎಂದು ಹೇಳಿದರು. ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಸಿ.ಪರಶುರಾಮಪ್ಪ, ಡಾ. ಪ್ರಭಾಕರ್, ಆಶಾ ಬೇಗಂ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

