ಶೇ.3ರ ಬಡ್ಡಿದರದಲ್ಲಿ ಹೊಸ ಸಾಲ
ಕ.ಪ್ರ.ವಾರ್ತೆ, ಭದ್ರಾವತಿ, ಮಾ.24
ಮಾ.31, 2004ರ ಹಿಂದೆ ರೈತರು ಪಡೆದ ಸಾಲ ಯಾವುದೇ ಬಡ್ಡಿ ರಿಯಾಯಿತಿ ಯೋಜನೆಗಳಿಗೆ ಒಳಪಡದೇ ಇರುವ ಕಾರಣ ಇಂತಹ ಸುಸ್ತಿ ಸಾಲಗಾರರ ಖಾತೆಯಲ್ಲಿರುವ ಫೆ.28, 2011ರ ವರೆಗಿನ ಮುಂದುವರೆದ ಬಡ್ಡಿಯನ್ನು ಪ್ರಾಥಮಿಕ ಹಾಗೂ ರಾಜ್ಯ ಬ್ಯಾಂಕುಗಳು ಸೇರಿ ಸಮಾನಾಂತರವಾಗಿ ಭರಿಸಿಕೊಂಡು ರಿಯಾಯಿತಿಯನ್ನು ನೀಡಲು ಉದ್ದೇಶಿಸಿರುತ್ತವೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಕಟಿಸಿದೆ.
ಈ ಅಂತಿಮ ಅವಕಾಶವನ್ನು ಮಾ.30, 2013ರ ವರೆಗೆ ವಿಸ್ತರಿಸಲಾಗಿದ್ದು ಸುಸ್ತಿ ಸಾಲಗಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಋಣಮುಕ್ತರಾಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯೋಜನೆಯಲ್ಲಿ ಸಾಲ ತೀರುವಳಿ ಮಾಡಿದ ರೈತರಿಗೆ ಅರ್ಹತೆ ಮಿತಿಗೊಳಪಟ್ಟು ಶೇ.3ರ ಬಡ್ಡಿ ದರದಲ್ಲಿ ಕೂಡಲೇ ಹೊಸ ಸಾಲ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

