ಶಿವಮೊಗ್ಗ

ಕವಿಯ ಅಂತಃಕರಣ ತಿಳಿದು ಹಾಡಬೇಕು

Published On :

ಕ.ಪ್ರ.ವಾರ್ತೆ,ತೀರ್ಥಹಳ್ಳಿ೤ ಮಾ.25
ಕವಿಯ ಅಂತಃಕರಣವನ್ನು ತಿಳಿದು ಹಾಡುವ ಸಾಮರ್ಥ್ಯ ಹಾಗೂ  ಸಾಹಿತ್ಯದ, ಸಾಹಿತಿಗಳ ಬಗ್ಗೆ ಆಳವಾದ ಜ್ಞಾನ ಸುಗಮ ಸಂಗೀತ ಕಲಾವಿದರಿಗೆ ಇರಬೇಕು ಎಂದು  ಡಾ. ಸರ್ಫಾಜ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು.
  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದೇವಂಗಿ ಟಿ. ಚಂದ್ರಶೇಖರ್ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು, ಸುಗಮ ಸಂಗೀತ ವಿಶಾಲ ದೃಷ್ಟಿಕೋನ ಹೊಂದಿದೆ. ಭಿನ್ನವಾದ ಭಾವನೆಗಳನ್ನೂ ಹೊಂದಿದೆ ಎಂದರು.
 ಜನಸಾಮಾನ್ಯರನ್ನು ಕಾವ್ಯ ತಈ ಪ್ರಾಕಾರಕ್ಕೆ ಸ್ಪಷ್ಟತೆ ಮತ್ತು ತಾತ್ವಿಕತೆಯೊಂದಿಗೆ  ವ್ಯಾಪ್ತಿಯನ್ನು ವಿಸ್ತರಸಿದ್ದು ಖ್ಯಾತ ಗಾಯಕರಾದ ಸಿ. ಅಶ್ವಥ್ ಪಿ. ಕಾಳಿಂಗರಾವ್, ಪದ್ಮಚರಣ ಮತ್ತು ಹೆಚ್.ಕೆ. ನಾರಾಯಣ ಎಂದರು. ಕುಮಾರಸ್ವಾಮಿ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ನೆಂಪೆ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.    ದೇವಂಗಿ ಚೈತನ್ಯದೇವ, ಶಿವಾನಂದ ಕರ್ಕಿ, ಮುನ್ನೂರು ಮೋಹನ ಶೆಟ್ಟಿ, ವಾಗ್ದಾವಿ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಬಾಲಚಂದ್ರ ಮಡಿವಾಳ ಇತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.