ಶಿವಮೊಗ್ಗ

30ರಿಂದ ವಾರ್ಷಿಕ ರಥೋತ್ಸವ ಪ್ರಾರಂಭ

Published On :

ಶಿವಮೊಗ್ಗ: ಶ್ರೀ ಹೊಂಬುಜ ಜೈನ ಮಠವು ಮಾರ್ಚ್ 30ರಿಂದ ಏಪ್ರಿಲ್ 4 ರವರೆಗೆ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಅವರ ವಾರ್ಷಿಕ ರಥೋತ್ಸವವನ್ನು ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.
      ಮಾರ್ಚ್ 30 ರಂದು ಧ್ವಜಾರೋಹಣ, ನಾಗವಾಹನೋತ್ಸವ, ಮಾರ್ಚ 31ರಂದು ಸಿಂಹವಾಹನೋತ್ಸವ, ಎಪ್ರಿಲ್ 1ರಂದು ಪುಷ್ಪ ರಥೋತ್ಸವ, ಏ.2 ರಂದು ಮಹಾರಥೋತ್ಸವ, ಏ.3ರಂದು ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ 108 ಕಲಶಗಳ ಮಹಾಭಿಷೇಕ, ಸಂಘ ಪೂಜೆ, ಏ.4ರಂದು ಕುಂಕುಮೋತ್ಸವ ಹಾಗೂ ಧ್ವಜಾರೋಹಣದೊಂದಿಗೆ ಸಂಪನ್ನಗೊಳ್ಳಲಿದೆ.
   ಮಾ. 27 ರಿಂದ 29 ರವರೆಗೆ ಶ್ರೀ ಕ್ಷೇತ್ರದಲ್ಲಿ ವಿವಿಧ ಬಸದಿಗಳಲ್ಲಿ ವಿಶೇಷ ಆರಾಧನೆ ನಡೆಯಲಿದೆ. ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಜಗದ್ಗುರು ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮಿ ವಹಿಸಲಿದ್ದಾರೆ.
   ಮುಖ್ಯಅತಿಥಿಯಾಗಿಗಿ ಉದ್ಯಮಿ ವಿಜಯ ಪಾಟ್ನಿ, ಆರ್.ಕೆ. ಜೈನ್, ಎಸ್.ಎನ್. ಅಶೋಕ ಕುಮಾರ್ ಪಾಲ್ಗೊಳ್ಳಲಿದ್ದು, ಹಿರಿಯ ವಿದ್ವಾಂಸ ಡಾ.ಎಂ.ಎ. ಜಯಚಂದ್ರ ಅವರಿಂದ ಧಾರ್ಮಿಕ ಉಪನ್ಯಾಸ, ಮೈಸೂರಿನ ಪ್ರೊ. ಕೃಷ್ಣೇಗೌಡ ಅವರಿಂದ ನಗೆಜಾತ್ರೆ ಏರ್ಪಡಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.