ಇಂದು ಶ್ರೀಗಳಿಂದ ಪುಸ್ತಕ ಲೋಕಾರ್ಪಣೆ
ಹೊಸನಗರ: ತಾಲೂಕಿನ ಗುಬ್ಬಿಗಾ ರಮೇಶ ಹೆಗಡೆ ಗುಂಡುಮನೆ ಮನೆ ಆವರಣದಲ್ಲಿ ಶ್ರೀರಾಮಾರ್ಪಣ ಕಲಾವೇದಿಕೆ ಮಾ.28ರಂದು ಹಮ್ಮಿಕೊಂಡಿರುವ ಕಿರೀಟ ಪೂಜೆ ಅಂಗವಾಗಿ ಸಂಪ ನಿನಾದ ಪುಸ್ತಕವನ್ನು ರಾಘವೇಶ್ವರ ಸ್ವಾಮೀಜಿಗಳು ಪುಸ್ತಕ ಲೋಕಾರ್ಪಣೆ ಗೊಳಿಸಲಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಿದ್ವಾನ್ ಜಗದೀಶ ಶರ್ಮ ಉಪಸ್ಥಿತರಿರುತ್ತಾರೆ ಎಂದು ವೇದಿಕೆಯ ಸನ್‌ಟೈಂ ವಿಶೇಶ್ವರ ಹೆಗಡೆ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: 2010-11, 2011-12 ಹಾಗೂ 2012-13ನೇ ಸಾಲಿನಲ್ಲಿ ಡಿ. ಲಿಬ್, ಬಿ.ಲಿಬ್, ಎಂ.ಲಿಬ್ (ಉ.ಔ್ಝಛಿ.ಖ್ಛ., ಇ.ಔ್ಝಛಿ.ಖ್ಛ., ಂ.ಔ್ಝಛಿ.ಖ್ಛ) ಉತ್ತೀರ್ಣರಾದ ಅಭ್ಯರ್ಥಿಗಳಿಂದ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಕುವೆಂಪು ವಿಶ್ವವಿದ್ಯಾನಿಲಯ ಗ್ರಂಥಾಲಯವು ಅರ್ಜಿ ಆಹ್ವಾನಿಸಿದೆ. ಅಪ್ರೆಂಟಿಸ್ ಕಾಯ್ದೆಯ ನಿಯಮಾನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತರಬೇತಿ ಭತ್ಯೆ ನೀಡಲಾಗುವುದು. ಆಸಕ್ತರು ತಮ್ಮ ಸ್ವ-ವಿವರದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 12ರೊಳಗಾಗಿ ಕುವೆಂಪು ವಿವಿ ಗ್ರಂಥಪಾಲಕರ ವಿಳಾಸಕ್ಕೆ ಸಲ್ಲಿಸಬೇಕು.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕುಂಸಿಯ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಾ.28ರಂದು ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಪ್ರಯುಕ್ತ ಈ ಕೇಂದ್ರದ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕುಂಸಿ, ಆಯನೂರು, ಹಾರ್ನಳ್ಳಿ, ಚೋರಡಿ, ತುಪ್ಪೂರು, ಸನ್ನಿವಾಸ, ಹೊರಬೈಲು, ಶೆಟ್ಟಿಕೆರೆ, ಶಾಂತಿಕೆರೆ, ಮಲ್ಲಾಪುರ, ರಾಮನಗರ, ತ್ಯಾಜವಳ್ಳಿ, ಮುದುವಾಲ, ಹಿಟ್ಟೂರು, ಬೈರನಕೊಪ್ಪ, ಸಿರಿಗೆರೆ, ತಮ್ಮಡಿಹಳ್ಳಿ, ವೀರಣ್ಣನ ಬೆನವಳ್ಳಿ, ಬಾಳೇಕೊಪ್ಪ, ರೇಚಿಕೊಪ್ಪ, ಮಂಡಘಟ್ಟ, ರಾಗಿಹೊಸಳ್ಳಿ, ದ್ಯಾವಿನಕೆರೆ, ಆಯನೂರು ಕೋಟೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಕಾಂಗ್ರೆಸ್: ಸಂಭ್ರಮ
ಶಿರಾಳಕೊಪ್ಪ: ಶಾಂತವೀರಪ್ಪ ಗೌಡರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಶಿರಾಳಕೊಪ್ಪ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ವಿಧಾನಪರಿಷತ್ ಸದಸ್ಯ ಶಾಂತವೀರಪ್ಪಗೌಡರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕಿರುವದು ಸಂತಸ ಉಂಟು ಮಾಡಿದೆ. ಎಲ್ಲರೂ ಸೇರಿ ಅವರನ್ನು ಬೆಂಬಲಿಸಿಸುವದಾಗಿ ಪಪಂ ಸದಸ್ಯ ಸಮಿಉಲ್ಲಾ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

