ರಾಜಧಾನಿಯಲ್ಲಿ ಜಿಲ್ಲಾ 'ಕೈ' ರಾಜಕೀಯ
ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಶಿವಮೊಗ್ಗ್ಣ ಮಾ.28
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಶನಿವಾರ ತಳಮಳದ ದಿನ.
ಬಹುತೇಕ ಎಲ್ಲಾ ಮುಖಂಡರೂ, ಜತೆಗೆ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದಾರೆ. ಮುಖಂಡರನ್ನು ಭೇಟಿ ಮಾಡುವ, ಅವರನ್ನು ಓಲೈಸುವ ಕೆಲಸದಲ್ಲಿ ತೊಡಗಿದ್ದಾರೆ.
ಶನಿವಾರ ಸಂಜೆ ಬೆಂಗಳೂರಲ್ಲಿ ನಡೆಯುವ ಕಾಂಗ್ರೆಸ್ ಮುಖಂಡರ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ನಡುವೆ ಕಾಂಗ್ರೆಸ್ ಕರ್ನಾಟಕ ರಾಜ್ಯಕ್ಕಾಗಿ ಕೆಲವು ರಿಯಾಯಿತಿ ತೋರಿರುವುದು ಯಾರಿಗೆ ಅನುಕೂಲವಾಗುತ್ತದೆ ಎಂಬ ಚರ್ಚೆಯೂ ಬಿಸಿಏರಿದೆ.
ಸತತ ಮೂರು ಚುನಾವಣೆಯಲ್ಲಿ ಸೋಲನುಭವಿಸಿದವರು ಹಾಗೂ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದವರಿಗೆ ಈ ಚುನಾವಣೆಯಲ್ಲಿ ಟಿಕೆಟ್ ಇಲ್ಲ ಎಂಬ ಎಐಸಿಸಿ ನಿರ್ಧಾರ ಯಾರ ಮೇಲೆ ಪರಿಣಾಮ ಬೀರಲಿದೆ ಎಂಬುದೂ ಸಹ ಶನಿವಾರ ಸಂಜೆಯ ಸಭೆಯಲ್ಲಿ ಚರ್ಚೆಯಾಗಿಲಿದೆ.
ಕಾಗೋಡು ನಿರಾಳ
ಎಐಸಿಸಿಯ ಹೊಸ ಪರಿಷ್ಕೃತ ನಿಯಮದ ಮೊದಲ ಫಲಾನುಭವಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ. ಈ ಬಾರಿ ಅವರು ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ನೆಚ್ಚಿನ ಅಭ್ಯರ್ಥಿ. ತೀವ್ರ ಹಣಾಹಣಿಯ ನಡುವೆ ಅವರು 2004 ಹಾಗೂ 2008ರ ಚುನಾವಣೆಯಲ್ಲಿ ತಮ್ಮ ಅಳಿಯ ಬೇಳೂರು ಗೋಪಾಲಕೃಷ್ಣ ಅವರಿಂದ ಸೋಲನುಭವಿಸಿದ್ದರು. 2008ರ ಚುನಾವಣೆಯಲ್ಲಿ ಇವರ ಸೋಲಿನ ಅಂತರ 2,845 ಮಾತ್ರ. ಹಾಗಾಗಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಸಾಗರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ.
ಕರಿಯಣ್ಣ ಆತಂಕ
ಮಾಜಿ ಶಾಸಕ ಕರಿಯಣ್ಣ ಅವರ ಆತಂಕ ಮುಂದುವರಿದಿದೆ. ಇವರು ಸತತ ಮೂರು ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. 1999, 2004, 2008ರ ಚುನಾವಣೆಯಲ್ಲಿ ಕರಿಯಣ್ಣ ಅವರಿಗೆ ಗೆಲವು ಸಾಧ್ಯವಾಗಿಲ್ಲ. ಇನ್ನು 2008ರ ಚುನಾವಣೆಯಲ್ಲಿ ಇವರ ಸೋಲಿನ ಅಂತರ 24,265. ಕಾಂಗ್ರೆಸ್ ನಿಯಮಗಳನ್ನು ಕಠಿಣವಾಗಿ ಪಾಲಿಸಿದರೆ ಇದೇ ಕ್ಷೇತ್ರದ ಕಾಂಗ್ರೆಸ್ನ ಇನ್ನೊಬ್ಬ ಆಕಾಂಕ್ಷಿ, ಯುವಮುಖಂಡ ರವಿಕುಮಾರ್ ಅವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.
ಏಕೈಕ ಹೆಸರು
ಸೊರಬ ಕ್ಷೇತ್ರದಿಂದ ಮಾಜಿ ಸಚಿವ ಕುಮಾರ್ಬ್ಂಗಾರಪ್ಪ ಅವರ ಏಕೈಕ ಹೆಸರು ಜಿಲ್ಲಾ ಘಟಕದಿಂದ ಶಿಫಾರಸು ಆಗಿದೆ. ಇವರು 2004ರ ಚುನಾವಣೆಯಲ್ಲಿ ಗೆಲವು ಪಡೆದಿದ್ದರು. ಆದರೆ, 2008ರ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಅವರ ಎದುರು ಸೋಲನುಭವಿಸಿದ್ದರು. ಈ ಅಂತರ 21,053 ಮತಗಳು. ಮತಗಳ ಅಂತರ ಹೆಚ್ಚಿದ್ದರೂ ಸೊರಬ ಕ್ಷೇತ್ರದ ಕಾಂಗ್ರೆಸ್ನ ನೆಚ್ಚಿನ ಅಭ್ಯರ್ಥಿ ಇವರೇ ಆಗಿರುವುದರಿಂದ ಇವರಿಗೇ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು.
ಭದ್ರಾವತಿ
ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಕೆಂದು ತೀರ್ಮಾನಿಸಿದರೆ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್ ಅವರಿಗೇ ಟಿಕೆಟಟ್ಸಿಗಬೇಕು. ಆದರೆ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಈ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದರು. ಭದ್ರಾವತಿಗೆ ಬಂದು ಗೆಳೆಯರೊಂದಿಗೆ ಒಂದೆರಡು ಸುತ್ತಿನ ಸಭೆಯನ್ನೂ ನಡೆಸಿದ್ದರು. ಸದ್ಯ ಕಾಂಗ್ರೆಸ್ಪ್ಕ್ಷವು ಇಬ್ರಾಹಿಂ ಅವರನ್ನು ಚುನಾವಣಾ ಕಾರ್ಯತಂತ್ರ ರೂಪಿಸುವ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಜಿ ಸಮಾಧಾನಿಸುವ ಪ್ರಯತ್ನ ಮಾಡಿದೆ.
ಆದರೆ ಅಂತಿಮವಾಗಿ ಭದ್ರಾವತಿ ಕ್ಷೇತ್ರದಲ್ಲಿ ಟಿಕೆಟಟ್ಯಾರಿಗೆ ಸಿಗುತ್ತದೆಂದು ಹೇಳುವುದು ಅಸಾಧ್ಯ.
ಶಿಕಾರಿಗೆ ಯಾರು..?
ಕಾಂಗ್ರೆಸ್ಗೆ ಸವಾಲಾಗಿರುವುದು ಶಿಕಾರಿಪುರ ಕ್ಷೇತ್ರ. ಇದು ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸ್ವಕ್ಷೇತ್ರ. 1999ರಲ್ಲಿ ಇಂತಹ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ನ ಮಹಾಲಿಂಗಪ್ಪ ಅವರು ಸೋಲಿಸಿದ್ದನ್ನು ಹೊರತುಪಡಿಸಿದರೆ 1977ರಿಂದ ಇವರೇ ಆಳ್ವಿಕೆ ನಡೆಸಿದ್ದಾರೆ.
ಈ ನಡುವೆ ಯಡಿಯೂರಪ್ಪ ಅವರು ಗುರುವಾರದಂದು ತಮ್ಮ ಪ್ರತಿಸ್ಪರ್ಧಿ ಮಹಾಲಿಂಗಪ್ಪ ಅವರ ಮನೆಗೆ ಭೇಟಿ ನೀಡಿ ಗೌಪ್ಯವಾಗಿ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ಇಲ್ಲಿ ಕಾಂಗ್ರೆಸ್ನ ಇನ್ನೊಬ್ಬ ಆಕಾಂಕ್ಷಿ ವಿಧಾನಪರಿಷತ್ನ ಮಾಜಿ ಸದಸ್ಯ ಶಾಂತವೀರಪ್ಪಗೌಡ. ಮತ್ತೊಬ್ಬರು ಪಕ್ಷದ ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ನಿಂತು ಗದ್ದಲವೆಬ್ಬಿಸುವ ನಗರದ ಮಹದೇವಪ್ಪ. ಯಡಿಯೂರಪ್ಪರಿಗೆ ಸವಾಲು ಹಾಕುವರ್ಯಾರೆಂದು ಪಕ್ಷ ಇನ್ನೂ ಭಾರಿ ಚರ್ಚೆಯಲ್ಲಿಯೇ ತೊಡಗಿದೆ.
ನಗರಾಕಾಂಕ್ಷಿ
ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಪ್ರತಿನಿಧಿಸುತ್ತಿರುವ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಭಾರಿ ಪೈಪೋಟಿ ಎದುರಾಗಿದೆ. ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ನಗರಸಭಾ ಸದಸ್ಯ ಕೆ.ಬಿ. ಪ್ರಸನ್ನಕುಮಾರ್, ಎಚ್.ಸಿ. ಯೋಗೀಶ್, ಕಳೆದ ತಿಂಗಳು ಕಾಂಗ್ರೆಸ್ ಸೇರಿದ ಕೆ. ದಿವಾಕರ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಈ ಕ್ಷೇತ್ರವೂ ಸಹ ಪಕ್ಷಕ್ಕೆ ತಲೆನೋವಾಗಿರುವ ಕ್ಷೇತ್ರ. ಚರ್ಚೆಗೆಡೆಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

