ಶಿವಮೊಗ್ಗ

ರಂಗಾಸಕ್ತಿಯಿಂದ ಮನೋವಿಕಾಸ ಸಾಧ್ಯ

Published On :

ಕ.ಪ್ರ.ವಾರ್ತೆ, ಸಾಗರ, ಮಾ.29 ರಂಗಾಸಕ್ತಿಯಿಂದ ಮನಸ್ಸು ವಿಕಸನಗೊಳ್ಳುತ್ತದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನಾ. ಸತ್ಯ ಹೇಳಿದರು.
  ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಕಾಗೋಡು ರಂಗಮಂಚ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 3 ದಿನದ ನಾಟಕೋತ್ಸವ ಉದ್ಘಾಟಿಸಿ, ಅರಿವು, ಸಂಸ್ಕೃತಿ  ಹಾಗೂ ಅಭಿನಯ ರಂಗಭೂಮಿಯ ಕೊಡುಗೆಯಾಗಿದೆ ಎಂದರು.
  ಇತ್ತೀಚಿನ ಟಿವಿ ಕಾರ್ಯಕ್ರಮ, ಚಲನಚಿತ್ರಗಳಲ್ಲಿ ಬರುವ ಹಿಂಸಾವಳಿಗಳಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಜನರು ರಂಗಭೂಮಿಯ ಬಗ್ಗೆ ಪುನಃ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಸಂದೇಶ ಕೊಡುವ  ಒಳ್ಳೆಯ ನಾಟಕಗಳನ್ನು ರಂಗದ ಮೇಲೆ ತಂದರೆ ಜನರು ಖಂಡಿತಾ ಸ್ವೀಕರಿಸುತ್ತಾರೆ. ಈ ನಿಟ್ಟಿನಲ್ಲಿ ರಂಗತಂಡಗಳು ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ರಂಗಾಸಕ್ತಿ ಬೆಳೆಯಲಿ: ಪೋಷಕರು ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದ ಅವರು, ರಂಗಾಯಣದಿಂದ ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಮಕ್ಕಳಿಗೆ ರಂಗ ತರಬೇತಿ ಶಿಬಿರ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದು, ಮುಂದಿನ ವರ್ಷ ರಂಗ ಸಹಸ್ರ ಕಾರ್ಯಕ್ರಮದ ಮೂಲಕ ಸಾವಿರ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶ ಹೊಂದಲಾಗಿದೆ ಎಂದರು.
 ರಂಗಮಂಚ ಅಧ್ಯಕ್ಷ ಕಾಗೋಡು ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾಪುರ ರಂಗ ಸೌಗಂಧದ ಶ್ರೀಧರ ಹೆಗಡೆ ಹುಲಿಮನೆ ಹಾಜರಿದ್ದರು. ನಂತರ ಸಿದ್ದಾಪುರದ ರಂಗ ಸೌಗಂಧ ತಂಡದಿಂದ ವರದಕ್ಷಿಣೆ ನಾಟಕ ಪ್ರದರ್ಶನಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.