ವಿಪ್ರರನ್ನು ಒಗ್ಗೂಡಿಸುವಿಕೆ ಸಂಘದ ಗುರಿಯಾಗಿರಲಿ
ಕ.ಪ್ರ.ವಾರ್ತೆ,ಜೋಗ್ಫಾಲ್ಸ್, ಮಾ.31
ವಿಪ್ರರನ್ನು ಒಗ್ಗೂಡಿಸುವುದು ಮಾತ್ರ ಸಂಘಟನೆಗಳ ಗುರಿಯಾಗಬೇಕು. ಆದರೆ ವಿಪ್ರರ ಸಂಘಟನೆ ಯಾರ ವಿರುದ್ಧವಾಗಲೀ, ಯಾವುದರ ವಿರುದ್ಧವಾಗಲೀ ಅಲ್ಲ. ಅದು ಕೇವಲ ರಾಜ್ಯದ, ರಾಷ್ಟ್ರದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ ಎಂದು ಗಮಕ ವಿದ್ವಾಂಸ ಡಾ. ಎ.ವಿ. ಪ್ರಸನ್ನ ತಿಳಿಸಿದರು.
ಕಾರ್ಗಲ್ನ ರಾಮಮಂದಿರದಲ್ಲಿ ಜೋಗ್ ಕಾರ್ಗಲ್ ವಿಪ್ರಕೂಟದಿಂದ ಭಾನುವಾರ ನಡೆದ ವಿಪ್ರರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಾತ್ಯರ ಪ್ರಭಾವ: ವಿಪ್ರರು ಎಂದಿಗೂ ಹಣದ ಹಿಂದೆ ಬೀಳದೇ ತಮ್ಮ ಬುದ್ಧಿಮತ್ತೆ ಪ್ರದರ್ಶಿಸುವ ಮೂಲಕ ಇತರರಿಗೆ ಮಾರ್ಗದರ್ಶಕರಾಗಿರಬೇಕು. ಎಲ್ಲಾ ವಿಪ್ರರಿಗೂ ಚಾಣಕ್ಯ, ಸರ್.ಎಂ. ವಿಶ್ವೇಶ್ವರಯ್ಯ ಮಾರ್ಗದರ್ಶಕರಾಗಿರಬೇಕು ಎಂದು ಅವರು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಿಪ್ರ ನೌಕರರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ಅಚ್ಯುತರಾವ್ ಮಾತನಾಡಿ, ವಿಪ್ರ ವಧುವರರ ವಿವಾಹಕ್ಕಾಗಿ ವಿಪ್ರ ವಿವಾಹ.ಕಾಮ್ ಎಂಬ ವೆಬ್ಸೈಟನ್ನು ಸಹ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಮೂಲಕ ವಿಪ್ರರ ಸಕಲ ಸಮಸ್ಯೆ ನಿವಾರಣೆಗೆ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.
ಸಂಘಟನೆ ಬಲಗೊಳಿಸಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಮಾ.ಸ.ನಂಜುಂಡಸ್ವಾಮಿ ಮಾತನಾಡಿ, ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸುವಾಗಲೂ ಒಂದಲ್ಲಾ ಒಂದು ಹುಳುಕು, ಟೀಕೆ-ಟಿಪ್ಪಣಿ ಸಾಮಾನ್ಯವಾಗಿದ್ದು, ಅವುಗಳ ಬಗ್ಗೆ ಚಿಂತಿಸದೇ ಸಂಘಟನೆಗಳ ಬಲಗೊಳಿಸುವಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಹೆಗಡೆ ವಹಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್ ಜೋಷಿ, ಶಿಕಾರಿಪುರ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಗಣಪತಿ ಭಟ್, ಸೊರಬ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕಟ್ಟಿನಕೆರೆ ಸೀತಾರಾಮಯ್ಯ, ಸಾಗರ ನಗರಸಭಾ ಸದಸ್ಯ ಸುರೇಶ್ ಬಾಬು, ಲಕ್ಷ್ಮೀನಾರಾಯಣ್ ಛಾಯಾಪತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

