'ಬಿಎಸ್ವೈಯಿಂದ ಪ್ರತಿಫಲ ಪಡೆಯಲಿಲ್ಲ'
ಕ.ಪ್ರ.ವಾರ್ತೆ ಶಿರಾಳಕೊಪ್ಪ ಮೇ 2
ಬಿಜೆಪಿಯಲ್ಲಿದ್ದಾಗ ಪಕ್ಷದ ಕಾರ್ಯನಿರ್ವಹಿಸಿರುವ ನಾನು ಯಡಿಯೂರಪ್ಪನವರಿಂದಾಗಲಿ ಸಂಸದ ರಾಘವೇಂದ್ರ ಅವರಿಂದಾಗಲಿ ಯಾವುದೇ ಪ್ರತಿಫಲ ಪಡೆಯದೇ ಕಾರ್ಯನಿರ್ವಹಿಸಿದ್ದೇನೆ.ಅವರಿಂದ ಯಾವುದೇ ಕೆಲಸವು ನನಗೆ ಆಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಫಕ್ಕೀರಪ್ಪ ಹೇಳಿದರು.
ಶಿರಾಳಕೊಪ್ಪದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿಯಲ್ಲಿದ್ದು, ಫಕ್ಕೀರಪ್ಪ ಹಲವು ಪ್ರಯೋಜನ ಪಡೆದು ಈಗ ಪಕ್ಷ ಬಿಟ್ಟಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಹನುಮಂತಪ್ಪನವರ ಹೇಳಿಕೆಯಿಂದ ತೀವ್ರನೋವಾಗಿದೆ. ಅವರು ತಮ್ಮ ಸ್ವಾರ್ಥ ಸಾಧನೆಗೆ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೆಲವಿನಲ್ಲಿ ಪಾತ್ರ: ಹನುಮಂತಪ್ಪ ಎಪಿಎಂಸಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆಗೆ ನಿಂತಾಗ ನಾನು ಹನುಮಂತಪ್ಪನವರ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದೆ. ಪಕ್ಷದ ಪರ ಕಾರ್ಯನಿರ್ವಹಿಸಿದರೆ ಅದು ಸಮಯ ಸಾಧಕ ತನವೇ ಎಂದು ಪ್ರಶ್ನಿಸಿದರು.
ಹನುಮಂತಪ್ಪನವರು ಬೋವಿ ಸಮಾಜದ ಅಧ್ಯಕ್ಷರಾಗಿದ್ದು, ಅವರು ಒಂದು ಪಕ್ಷದ ಪರವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿ ಹೇಳಿಕೆ ಕೊಡುವ ಮೊದಲು ಸಮಾಜಕ್ಕೆ ರಾಜಿನಾಮೆ ನೀಡಲಿ ನಂತರ ಅವರು ಪಕ್ಷದವರವಾಗಿ ಮಾತನಾಡಲಿ ಎಂದರು. .
ಗಂಗ್ಯಾನಾಯ್ಕ ಕಾಂಗ್ರೆಸ್ಗೆ: ಈ ಹಿಂದೆ ಬಿಎಸ್ಆರ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಗಂಗ್ಯಾನಾಯ್ಕಾ ಕಾಂಗ್ರೆಸ್ ಸೇರಿದ್ದಾಗಿ ಪತ್ರಿಕೆಗೆ ತಿಳಿಸಿದ್ದಾರೆ. ಫಕ್ಕೀರಪ್ಪ ಮತ್ತು ಇತರ ನಾಯಕರು ಈ ಪಕ್ಷದಲ್ಲಿ ಇರುವುದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

