ಕಿಮ್ಮನೆ ಗೆಲವು ಸುಮ್ಮನೆಯಲ್ಲ...
ಶಿವಮೊಗ್ಗ: ವಿಶೇಷ ಜನಪ್ರತಿನಿಧಿ ಎಂಬ ಪ್ರಭಾವ ಹೊಂದಿರುವ ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಗೆಲವು ಸುಮ್ಮನೆಯಲ್ಲ.
ಒಂದು ಕಡೆ ತೀವ್ರ ಹಣಾಹಣಿ, ಮತ್ತೊಂದೆಡೆ ತಮ್ಮ ಮೇಲೆ ಜನರಿಟ್ಟ ನಂಬಿಕೆ ಉಳಿಸಿಕೊಳ್ಳುವ ಸವಾಲು. ಇವೆರಡನ್ನೂ ಸವಾಲಾಗಿ ಸ್ವೀಕರಿಸಿ ಕಿಮ್ಮನೆ ಗೆದ್ದುಬಂದಿದ್ದಾರೆ. ಕೊನೆಯ ಸುತ್ತುಗಳಲ್ಲಿ ಮೇಲುಗೈ ಸಾಧಿಸಿದ ಅವರು, ಅಂತಿಮವಾಗಿ ಗೆಲುವಿನ ನಗೆ ಬೀರಿದರು.
ಕಿಮ್ಮನೆಯವರು ಈ ಕ್ಷೇತ್ರವನ್ನು ಪ್ರತಿನಿಧಿಸಿ, ವಿಧಾನಸಭೆಯ ಪೂರ್ಣ ಕಲಾಪಗಳಲ್ಲಿ ಪಾಲ್ಗೊಂಡು, ಕ್ಷೇತ್ರದ ಸಮಸ್ಯೆಯನ್ನು ಸದನದಲ್ಲಿ ಸಮರ್ಥವಾಗಿ ಬಿಂಬಿಸಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದದ್ದು, ಈ ಅನುದಾನಗಳ ಸಮರ್ಥ ನಿರ್ವಹಣೆ ಆಗುವಂತೆ ನಿಗಾವಹಿಸಿದ್ದು, ಜನರ ಗಮನ ಸೆಳೆದಿದೆ.
ಈ ಬಾರಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜ್ಯ ನಾಯಕರಾದ ಎಸ್.ಎಂ. ಕೃಷ್ಣ ಅವರು ಬಂದು, ಕಿಮ್ಮನೆಯವರ ಕಾರ್ಯದಕ್ಷತೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದು ಕಿಮ್ಮನೆ ಗೆಲವಿಗೆ ಪ್ಲಸ್ ಪಾಯಿಂಟ್ ಆಗಿದೆ. ಇದು ಕಿಮ್ಮನೆಯವರ ಸತತ ಎರಡನೇ ಗೆಲುವು.
ಕಿಮ್ಮನೆ ಗೆದ್ದಾಗಿದೆ, ಆದರೆ ಎದುರಿನ ಸವಾಲುಗಳು ಸುಲಭವಿಲ್ಲ. ಅತಿ ಮಳೆಬೀಳುವ ಆಗುಂಬೆ ಪ್ರದೇಶದಲ್ಲೇ ್ಲ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯಿಂದ ಗಾಮಸ್ಥರು ಬಳಲುತ್ತಿದ್ದು, ಇದಕ್ಕೆ ತುರ್ತಾಗಿ ಗಮನ ಹರಿಸಬೇಕಾಗಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ.
ಬಗರ್ ಹುಕುಂ ರೈತರ ಬವಣೆ ಹೇಳತೀರದು. ಕ್ಷೇತ್ರ ಅಡಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಹುಡುಕಬೇಕಾಗಿದೆ. ಗೋರಕ್ ಸಿಂಗ್ ವರದಿ ಅನುಷ್ಠಾನವೂ ಈಗ ಹೆಚ್ಚಿನ ಮಹತ್ವ ಪಡೆಯಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

