ಶಿವಮೊಗ್ಗ

ಇಂದು ಔಷಧಿ ವ್ಯಾಪಾರ ವಹಿವಾಟು ಬಂದ್

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮೇ.9
ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಕರೆ ಅನ್ವಯ ಮೇ 10ರಂದು ಶಿರಾಳಕೊಪ್ಪ ಹಾಗೂ ಈ ಭಾಗದ ಔಷಧಿ ವ್ಯಾಪಾರ ವಹಿವಾಟುದಾರರು ಒಂದು ದಿನ ಬಂದ್ ಮಾಡಲು ನಿರ್ಧರಿಸಿದ್ದಾರೆ.
  ಕೇಂದ್ರ ಸರ್ಕಾರದ ಔಷಧಿ ವ್ಯಾಪಾರಿ ವಿರೋಧಿ ನೀತಿ ಮತ್ತು ಕೆಲವೊಂದು ಕಾನೂನುಗಳ ಮೂಲಕ ಔಷಧಿ ವ್ಯಾಪಾರಿ ಸಮುದಾಯಕ್ಕೆ ಅನ್ಯಾಯವೆಸಗಲು ಹೊರಟಿರುವ ಕೇಂದ್ರ ಸರ್ಕಾರದ ವಿರೋಧಿ ನೀತಿ ಖಂಡಿಸಿ ತಮ್ಮ ವಹಿವಾಟು ಬಂದ್ ಮಾಡಿ ಪ್ರತಿಭಟಿಸುತ್ತಿರುವದಾಗಿ ಹೇಳಿ ಇಲ್ಲಿಯ ನಾಡಕಚೇರಿಯಲ್ಲಿ ತಹಸೀಲ್ದಾರ್ ಅವರಿಗೆ ವರ್ತಕರು  ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

ತಾಲೂಕಿಗೆ ಶೇ.74.96 ಫಲಿತಾಂಶ
ಸೊರಬ: ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಬಾರಿ ಇಳಿಮುಖ ಕಂಡಿದ್ದು ಶೇ.74.96 ಸಾಧನೆ ಆಗಿದೆ. ಕಳೆದ ಬಾರಿ 81.02 ಸಾಧಿಸಿತ್ತು.
ತಾಲೂಕು ನಿಸರಾಣಿ ವಿಸಂ ಪ್ರೌಢಶಾಲೆ, ಎಸ್ವಿಆರ್‌ಎಚ್‌ಎಸ್ ಬಿಳುವಾಣಿ, ಹಿರೇಮಾಗಡಿ ಮೊರಾರ್ಜಿ ದೇಸಾಯಿ ಶಾಲೆಗಳು ಶೇ.100 ಸಾಧಿಸಿವೆ. ಹೊಸಬಾಳೆ ಶಕುಂತಲಾ ಪ್ರೌಢಶಾಲೆ ಶೇ.97.67, ಸೊರಬದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಶೇ.95.24 ಸಾಧನೆ ಕಂಡಿವೆ.
ನಿಸರಾಣಿ ವಿಸಂ ಪ್ರೌಢಶಾಲೆ ವಿದ್ಯಾರ್ಥಿ ಬಿ.ಪಿ. ಶಶಾಂಕ ಶೇ.97.60 ಗಳಿಸಿ ತಾಲೂಕಿನ ಪ್ರಥಮ ಸ್ಥಾನದಲ್ಲಿದ್ದಾರೆ. ಅಮರ ಜ್ಯೋತಿ ಪ್ರೌಢಶಾಲೆಯ ಎಂ.ಸೌಮ್ಯ 96.16, ಹರೀಶಿ ಪ್ರೌಢಶಾಲೆಯ ಚೈತನ್ಯ 95.52, ಅಂಕ ಪಡೆದು, ಕನ್ನಡದಲ್ಲಿ ಶೇ.100 ಪಡೆದು ಸಾಧನೆಗೈದಿದ್ದಾರೆ.  

ಕಾಂಗ್ರೆಸ್ ವಿಜಯೋತ್ಸವ
ಜೋಗ್‌ಫಾಲ್ಸ್: ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಗುರುವಾರ ತಮ್ಮ ಬೆಂಬಲಿಗರೊಂದಿಗೆ ಜೋಗದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತದಾರರಿಗೆ, ಕಾರ್ಯಕರ್ತರುಗಳಿಗೆ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಪಂ. ಸದಸ್ಯ ಲಲಿತಾ ನಾರಾಯಣ್, ಹೊಳಿಯಪ್ಪ, ರವಿ ಕುಗ್ವೆ, ಜೋಗ್ ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ, ಸದಸ್ಯ ಎಂ. ರಾಜು, ಸತೀಶ್ ಮಹಾಲೆ, ಡಿ. ಸೋಮಸುಂದರ್, ಜಗನ್ನಾಥ್, ಪಳನಿ, ಮೊಹಮದ್ ಗೌಸ್, ಪಿ.ಕೆ. ಉಮ್ಮರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.