ಡಾ. ನಾ.ಸು. ಹರ್ಡೀಕರ್ 124ನೇ ಜಯಂತ್ಯುತ್ಸವ
ಶಿವಮೊಗ್ಗ: ಡಾ.ನಾ.ಸು. ಹರ್ಡೀಕರ್ ಅವರ 124ನೇ ಜಯಂತ್ಯುತ್ಸವವನ್ನು ಭಾರತ್ ಸೇವಾದಳ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವೈ.ಎಚ್. ನಾಗರಾಜ್, ಡಾ.ನಾ.ಸು. ಹರ್ಡೀಕರ್ ಅವರ ತತ್ವ, ಅದರ್ಶಗಳು ಸರ್ವಕಾಲಕ್ಕೂ ಅನುಕರಣೀಯವಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಿಸ್ತಿನ ಸಂಘಟನೆ ಅತ್ಯವಶ್ಯಕವಾಗಿತ್ತು. ಶಿಸ್ತಿನ ಸ್ವಯಂ ಸೇವಕರು ಹಾಗೂ ಸತ್ಯಾಗ್ರಾಹಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ತಯಾರಿಸಿ ದೇಶದ ಸ್ವತಂತ್ರ್ಯ ಹೋರಾಟದಲ್ಲಿ ಭಾರತ ಸೇವಾದಳ ಪ್ರಮುಖ ಪಾತ್ರ ವಹಿಸಿತ್ತು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಭಾರತ ಸೇವಾದಳ ಯುವಕರನ್ನು ಭಾರತದ ಆದರ್ಶ ನಾಗರಿಕನ್ನಾಗಿ ಮಾಡಲು, ಅವರಲ್ಲಿ ಸಂಯಮ, ಧೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಪೂರ್ಣ ಸೇವಾ ಮನೋಭಾವನೆಯನ್ನು ಮೂಡಿಸುವಲ್ಲಿ ಪ್ರಯತ್ನ ಮಾಡುತ್ತಿದೆ ಎಂದರು.
ಈ ಸಮಾರಂಭದಲ್ಲಿ ಭಾರತ್ ಸೇವಾದಳದ ಉಪಾಧ್ಯಕ್ಷ ಬಿ.ವಿ. ಶ್ಯಾಮಯ್ಯ, ಶಿಕ್ಷಕ ರುದ್ರಪ್ಪ, ಜಯಣ್ಣ, ಬಸವರಾಜಪ್ಪ, ವಾಲೇಕರ್, ರಾಮಚಂದ್ರ ಹೆಗಡೆ ಮತ್ತಿತರರು ಇದ್ದರು.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

