ಶಿವಮೊಗ್ಗ

ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ

Published On :

ಶಿವಮೊಗ್ಗ: ಹೊಳೆಹೊನ್ನೂರು ಠಾಣೆಯ ಪಿಎಸ್‌ಐ ರಾಘವೇಂದ್ರ ಕಾಂಡಿಕೆ ಮತ್ತು ಎಎಸ್‌ಐ ಷರೀಫ್ ಹಾಗೂ ಸಿಬ್ಬಂದಿ ಜಾತಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ದಲಿತ ಸಮುದಾಯದವರು ಠಾಣೆಗೆ ದೂರು ನೀಡಲು ಹೋದರೆ ನಿಮ್ಮ ಜಾತಿ ಯಾವುದು ಎಂದು ಹೇಳಿ ಅವಹೇಳನಕಾರಿಯಾಗಿ ನಡೆಸಿಕೊಳ್ಳುತ್ತಾರೆ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ಆರೋಪಿಸಿದೆ.
ಹೊಳೆಹೊನ್ನೂರಿನ ಅಂಬೇಡ್ಕರ್ ನಗರದ ರಮೇಶ್ ಇಲ್ಲಿನ ದಲಿತ ಮುಖಂಡ. ದಲಿತರ ಸಣ್ಣ, ಪುಟ್ಟ ಸಮಸ್ಯೆಗಳಿಗೆ ಸ್ಪಂದಿಸುವ ರಮೇಶ್, ದಲಿತರ ಸಮಸ್ಯೆಯೊಂದಕ್ಕೆ ಹೋಗಿದ್ದ ವೇಳೆ ಠಾಣೆಯ ಸಿಬ್ಬಂದಿ ದಿನೇಶ್, ಸಂತೋಷ್ ಹಾಗೂ ಎಎಸ್‌ಐ ಷರೀಫ್ ಈ ಮಾದಿಗ ನನ್ನ ಮಗ ಠಾಣೆಗೆ ಪದೇ, ಪದೇ ಬರುತ್ತಾನೆ. ಇವನಿಗೆ ಬುದ್ಧಿ ಕಲಿಸಬೇಕು ಎಂದು ಸಂಚು ರೂಪಿಸಿ ಠಾಣೆಯಲ್ಲಿನ ಕುರ್ಚಿ ಟೇಬಲ್ ಮತ್ತು ಕಡತಗಳನ್ನು ಆವರೇ ಚದುರಿಸಿ ವಿಡಿಯೋ ರೆಕಾರ್ಡ್ ಮಾಡಿ ರಮೇಶ್ ಅವರ ಮೇಲೆ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಿದ್ದಾರೆ ಎಂದು ಸಮಿತಿ ಆಪಾದಿಸಿದೆ.
ಬೆದರಿಕೆ: ಅಲ್ಲದೇ, ಗುಡುಂಘಟ್ಟೆ ಗ್ರಾಮದ ನಿವಾಸಿ ರಮೇಶ್ ಅವರನ್ನು ಬಂಧಿಸಿ ಠಾಣೆಯಲ್ಲಿ ಹಿಗ್ಗಾಮುಗ್ಗಾ ಧಳಿಸಿದ್ದಾರೆ. ಇವರ ಬಳಿ ಇದ್ದಂತಹ ಸೇವಂತಿಗೆ ಹೂವಿನ ಬಾಬ್ತು 1.24 ಲಕ್ಷ ಮತ್ತು 2 ಬಂಗಾರದ ಉಂಗುರ, 1 ಕೊರಳ ಚೈನನ್ನು ಕಿತ್ತುಕಳುಹಿಸಿದ್ದಾರೆ. ನಂತರ ಹಣ ಮತ್ತು ಒಡವೆಗಳನ್ನು ಕೇಳಿದರೆ ಹೊಳೆಹೊನ್ನೂರಿನ ರಮೇಶ್‌ರನ್ನು ಹುಡುಕಿಕೊಟ್ಟರೆ ಹಣ, ಒಡವೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಮಿತಿ ದೂರಿದೆ.
ಆದ್ದರಿಂದ ಜಿಲ್ಲಾ ರಕ್ಷಣಾಧಿಕಾರಿಗಳು ದಲಿತರನ್ನು ಅಸಹನೆಯಿಂದ ಕಾಣುವ ಎಸ್.ಐ. ರಾಘವೇಂದ್ರ ಕಾಂಡಿಕೆ ಮತ್ತು ಪೇದೆ ದಿನೇಶ್, ಸಂತೋಷ್ ಹಾಗೂ ಎಎಸ್‌ಐ ಷರೀಫ್ ಅವರನ್ನು ಅಮಾನತುಗೊಳಿಸಬೇಕು. ದಲಿತ ಮುಖಂಡ ರಮೇಶ್ ಮತ್ತು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಬೀರನಕೆರೆ ಮಂಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.