ಶಿವಮೊಗ್ಗ

ಪಿಯುಸಿ ಪರೀಕ್ಷೆಯ ಸಾಧಕರು

Published On :

ಕ.ಪ್ರ.ವಾರ್ತೆ, ಸೊರಬ, ಮೇ 13
ತಾಲೂಕು ಆನವಟ್ಟಿ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಶೇ.93.48 ಫಲಿತಾಂಶ ದಾಖಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿ ಒಟ್ಟಾರೆ 430 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 402 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 235 ಪ್ರಥಮ, 114 ದ್ವಿತೀಯ ದರ್ಜೆಯ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ 262ರಲ್ಲಿ 244 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.93.12 ಫಲಿತಾಂಶ ಇರುವ ಇಲ್ಲಿ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸಿದ್ದಾರೆ. ಅವರಲ್ಲಿ ಎಂ.ಸಿ. ಸಂತೋಷ್ 532, ಡಿ.ಬಿ. ದೀಪ 524, ಎಸ್. ಸಂತೋಷ್ 520, ಸಿ.ಎಸ್.ದೀಪ ಹಾಗೂ ಹೆಚ್. ಸುನೀತಾ ಇಬ್ಬರೂ 512 ಅಂಕ ಗಳಿಸಿದ್ದಾರೆ.
ಗಣೇಶ್‌ಗೆ 547 ಅಂಕ: ವಾಣಿಜ್ಯ ವಿಭಾಗದಲ್ಲಿ 118 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು 117 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99.15 ದಾಖಲೆ ನೀಡಿದ್ದಾರೆ. ಟಿ.ಎಂ. ಗಣೇಶ್ 547, ಆರ್.ಸಂತೋಷ್ ಕುಮಾರ್ 527, ಜಿ. ಮಾಲತೇಶ್ 526, ಕೆ. ರೋಹಿಣಿ 524, ವಿಶ್ವನಾಥಗೌಡ 524, ಎಂ. ಅಕ್ಷತ 517, ಸುನೀಲ್ ಕುಮಾರ್ 517, ಬಿ.ಎಸ್. ವಿದ್ಯಾ 515, ಡಿ. ನಂದಿನಿ 515, ಎಸ್.ಪಿ. ರಮೇಶ್ 513, ಎಂ.ವೈ. ದೀಪ 513, ದೇವರಾಜ್ ಗಾಳೇರ್ 513, ಪಿ. ಸುಜಾತ 511 ಡಿಸ್ಟಿಂಕ್ಷನ್ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 50 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 41 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.82 ಫಲಿತಾಂಶ ನೀಡಿದ್ದಾರೆ. ಬಿ. ಶೃತಿ 499 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದ್ದಾಳೆ. ಇಲ್ಲಿ 26 ಪ್ರಥಮ, 15 ದ್ವಿತೀಯ ದರ್ಜೆ ಫಲಿತಾಂಶ ದೊರೆತಿದೆ.
ಉತ್ತಮ ಫಲಿತಾಂಶ ನೀಡಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಹೆಚ್.ಜಯಪ್ಪ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಪಿಯುಸಿ: ತಾಲೂಕಿಗೆ ಸುರೇಖಾ ಪ್ರಥಮ
ಹೊಸನಗರ: ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೊಡೂರು ಸುರೇಖಾ ಎಂಬ ವಿದ್ಯಾರ್ಥಿನಿ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 551 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕೊಡೂರಿನ ಹಿರಿಯಣ್ಣ ಶೆಟ್ಟಿ ಮತ್ತು ಎನ್. ಸೀತಾ ದಂಪತಿಯ ಮಗಳಾಗಿರುವ ಸುರೇಖಾ ಎಸ್‌ಎಸ್‌ಎಲ್‌ಸಿಯಲ್ಲೂ ಶೇ.96ರಷ್ಟು ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಳು.
ಗ್ರಾಮೀಣ ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಕೊಡೂರಿನ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ.ಪ.ಪೂ. ಕಾಲೇಜಿಗೆ ಶೇ. 80 ಫಲಿತಾಂಶ
ಸೊರಬ: ತಾಲೂಕಿನ ಆನವಟ್ಟಿ ಸ.ಪ.ಪೂ. ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 348 ವಿದ್ಯಾರ್ಥಿಗಳಲ್ಲಿ 276 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.80 ಸಾಧನೆ ಮಾಡಿದ್ದಾರೆ.
 ಇಲ್ಲಿ 10 ವಿಶೇಷ ಶ್ರೇಣಿ, 98 ಪ್ರಥಮ ಮತ್ತು 75 ದ್ವಿತೀಯ, 93 ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಂ.ಬಿ. ಅಪೂರ್ವ 585, ದೀಪಾ ಕಾಳೆ 567, ಎಂ.ಆರ್. ಅಮಿತಾ 563, ಸೌಜನ್ಯ 562, ಬಿ.ಕೆ. ಸಚಿನ್ 547, ಎಚ್. ಶ್ವೇತ 544, ವಿ.ಎಸ್. ವಿಸ್ಮಿತಾ 543, ಆರ್.ಟಿ. ಸೌಮ್ಯ 542, ಎಸ್.ಜಿ. ಅಕ್ಷತ 537, ಎಸ್.ಎನ್. ಉಷಾ 536 ಅಂಕ ಗಳಿಸಿದ್ದಾರೆ.
ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳಿಗೆ ಉಪ ಪ್ರಾಂಶುಪಾಲ ಯು.ಎಂ. ಬಸವರಾಜಪ್ಪ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ಭಾಷೆಯಿಂದ ಲೋಕಜ್ಞಾನ ವೃದ್ಧಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 13
ಭಾರತದ ವೈವಿದ್ಯತೆಯಲ್ಲಿ ಭಾಷೆಯೂ ಒಂದು. ಭಾಷೆ ಸಂವಾದಕ್ಕೆ ಮಾತ್ರವಿದೆ ಎನ್ನುವ ತಪ್ಪು ತಿಳುವಳಿಕೆ ಮೂಡಿಸುವ, ಭಾಷೆಯ ಬಗ್ಗೆ ಅಪಕಲ್ಪನೆ ಬರುವಂತೆ ಮಾಡುವ ಪ್ರಯತ್ನಗಳು ನಿರಂತರ ನಡೆದುಬಂದಿದೆ. ಅದು ಸರಿಯಲ್ಲ, ಭಾಷೆ ವಿವೇಕ, ಲೋಕಜ್ಞಾನ, ತಿಳುವಳಿಕೆ ಮೂಡಿಸುವ ಕಾರ್ಯಮಾಡುತ್ತದೆ ಕನ್ನಡ ಪ್ರಾಧ್ಯಾಪಕ, ಚಿಂತಕ ಡಾ. ಎಚ್.ಟಿ. ಕೃಷ್ಣಮೂರ್ತಿ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣಾ ಅಂಗವಾಗಿ ಪರಿಷತ್ತು ನಡೆದುಬಂದ ದಾರಿಯ ಅವಲೋಕನ ಮತ್ತು ಸಂಕಲ್ಪ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಹೊಸ ಆಲೋಚನೆ: ಕುಮಾರವ್ಯಾಸನ ಕನ್ನಡದ ಮಹಾಭಾರತವನ್ನು ಉದಾಹರಿಸಿದ ಅವರು, ಅಭಿಮನ್ಯುವಿನ ಸಾವಿನ ವಿಚಾರವನ್ನು ಹೇಳುವ ಪರಿ ಬೇರೆಲ್ಲೂ ಸಿಗೊಲ್ಲ. ಆದರೆ ನಮ್ಮ ವಿದ್ವಾಂಸರು ಕೆಲವರು ಕನ್ನಡದಲ್ಲಿ ಹೇಳಿದ್ದೆಲ್ಲ ಮೊದಲೇ ಸಂಸ್ಕೃತದಲ್ಲಿ ಹೇಳಿದೆ ಎಂದು ತಪ್ಪಾಗಿ ಹೇಳುತ್ತಾರೆ.
ಆದರೆ ಹಾಗೆ ಆಗೊಲ್ಲ. ಭಾಷಾಂತರದ ಸಂದರ್ಭದಲ್ಲೆ ಹೊಸ ಹೊಸ ಆಲೋಚನೆಗಳು, ಸನ್ನಿವೇಶಗಳು ರೂಪಗೊಳ್ಳುತ್ತವೆ ಎಂದರು.
 ಭಾಷಾ ಕುಶಲತೆ ಮಾನವನ ಮೆದುಳಿನಲ್ಲಿ ಅಂತಸ್ಥವಾಗಿರುತ್ತದೆ. ಭಾಷೆಯನ್ನು ಕಲಿಯುವುದಲ್ಲ, ಅದನ್ನು ಗಳಿಸಬೇಕು. ನಮ್ಮಲ್ಲಿ ಕೆಲವರು ಕನ್ನಡ ಬರೊಲ್ಲ ಎನ್ನುತ್ತಾರೆ. ಅವರೆಲ್ಲ ಅದನ್ನೇ ಹೆಗ್ಗಳಿಕೆ ಎಂದು ಭಾವಿಸಿದ್ದಾರೆ. ಆದರೆ ಬ್ರಿಟೀಷರ ಕಾಲದಿಂದ ಕನ್ನಡದ ವಾತಾವರಣಕ್ಕೆ ಸಿಕ್ಕ ಆಧ್ಯತೆಯನ್ನು ಮಹಾರಾಜರ ಕಾಲದಲ್ಲಿ ಮುಂದುವರಿದಿತ್ತು ಎಂದರು.
ಭಾಷಾಭಿಮಾನ ಇರಬೇಕು: ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಕನ್ನಡದ ಅಭಿಮಾನ ಸಾಮೂಹಿಕವಾಗಿ ಅಭಿವ್ಯಕ್ತಗೊಳ್ಳಬೇಕು ಎಂದರು.
 ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ಏಳನೆಯ ತರಗತಿ ವರೆಗೆ ಕನ್ನಡ ಮಾಧ್ಯಮ ಶಾಲೆ ನಡೆಸುವ ಪ್ರಣಾಳಿಕೆ ನೀಡಿರುವ ಕಾಂಗ್ರೇಸ್ ಅಧಿಕಾರಕ್ಕೆ ಬಂದಿದೆ.
ಹಿಂದಿನ ಸರ್ಕಾರ ಕನ್ನಡ ಶಾಲೆಗಳಿಗೆ ಕುತ್ತು ತಂದಿರುವ ಕೆಟ್ಟ ಆಡಳಿತವನ್ನು ಸಂಪೂರ್ಣ ಬದಲಿಸಿ ಕನ್ನಡ ಪರವಾದ ವಾತಾವರಣ ಸೃಷ್ಟಿಸುವ ಕಾರ್ಯ ನೂತನ ಸರ್ಕಾರದಿಂದ ಆಗಲಿ ಎಂದು ಆಶಿಸಿದರು. ಜೂನ್ 1 ಮತ್ತು 2ರಂದು ನಡೆಯಲಿರುವ ಎಂಟನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕರಿಸಲು ವಿನಂತಿಸಿದರು.  
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಘುರಾಮ ದೇವಾಡಿಗ, ತಾಲ್ಲೂಕು ಕಸಾಪ ಅಧ್ಯಕ್ಷ ಸಾಗರದ ವಿ.ಟಿ. ಸ್ವಾಮಿ, ತೀರ್ಥಹಳ್ಳಿಯ ನೆಂಪೆ ದೇವರಾಜ, ಶಿಕಾರಿಪುರದ ಸಿ. ಸುದರ್ಶನ್, ಶಿವಮೊಗ್ಗದ ಡಾ. ರಿಯಾಜಜ್ಬಾಷಾ, ಸಿ. ರಾಜು ಅವರುಗಳು ವೇದಿಕೆಯಲ್ಲಿದ್ದರು. ಲಕ್ಷ್ಮೀ ಮಹೇಶ್ ಪ್ರಾರ್ಥಿಸಿದರು. ಇ. ಜಯಣ್ಣ ಸ್ವಾಗತಿಸಿದರು. ಡಿ. ಗಣೇಶ್ ನಿರೂಪಿಸಿದರು.ಕಮ್ಮಾರ್ ನಿರೂಪಿಸಿ ವಂದಿಸಿದರು.

ಮರುಳಸಿದ್ದೇಶ್ವರ ರಥೋತ್ಸವ ಇಂದು
ಭೀಮಸಮುದ್ರ: ಕಾಟೀಹಳ್ಳಿ ಗ್ರಾಮದಲ್ಲಿ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಸ್ವಾಮಿಯ ನೂತನ ರಥದ ಉದ್ಘಾಟನೆ, ಸರ್ವಶರಣ ಸಮ್ಮೇಳನ ಹಾಗೂ ರಥೋತ್ಸವ ಮಂಗಳವಾರ ಬೆಳಗ್ಗೆ 5 ಗಂಟೆಗೆ ಬ್ರಾಹ್ಮೀ ಮೂಹೂರ್ತದಲ್ಲಿ ನಡೆಯಲಿದೆ. ಈ ವೇಳೆ ನೂತನ ರಥದ ಪೂಜೆ, ಗಂಗಾ ಪೂಜೆ, ಗಣಪತಿ ಪುಣ್ಯಾಹ, ನಾಂದಿ, ಪಂಚಕಳಶ, ನವಗ್ರಹ ಪೂಜೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ರಥದ ಉದ್ಘಾಟನೆಯನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ. 15ರ ಬೆ.10.30 ಕ್ಕೆ ಓಕುಳಿ, ಸ 5 ಗಂಟೆಗೆ ರಥೋತ್ಸವ, ಹೂವಿನ ಪಲ್ಲಕ್ಕಿ ಜರುಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.