ಹಿಂದೂ ಭಾವನೆಗೆ ದಕ್ಕೆ ತರದಿರಿ
ಶಿವಮೊಗ: ಹಿಂದೂಗಳ ಶ್ರದ್ಧಾ ಕೇಂದ್ರಗಳ ಬಗ್ಗೆ ಬೇರೆ ರೀತಿಯ ಆಲೋಚನೆಗಳನ್ನು ತಾವು ಮಾಡಿದ್ದೇ ಆದರೆ ಈ ರಾಜ್ಯದ ಜನತೆಯ ಶಾಪಕ್ಕೆ ಗುರಿಯಾಗುತ್ತೀರಿ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡದಿರುವಂತಹ ದುರಾಲೋಚನೆ ಬಿಡುವುದರೊಂದಿಗೆ ಜನರ ಶ್ರದ್ಧೆಗೆ ದಕ್ಕೆ ತರುವಂತಹ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಒತ್ತಾಯಿಸಿದ್ದಾರೆ. ಗೋ ಹತ್ಯೆಗೆ ಪರವಾನಗಿ ನೀಡುವುದರ ಮೂಲಕ ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದು ಸಂವಿಧಾನಕ್ಕೆ ಅಪಚಾರ ಮಾಡಿರುವ ಮುಖ್ಯಮಂತ್ರಿಗಳ ವರ್ತನೆಗೆ ಧಿಕ್ಕಾರ ಎಂದಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಅವರು, ಸೋನಿಯಾಗಾಂಧಿಯವರಿಗೆ ಮೆಚ್ಚಿಸುವ ಕಾರಣಕ್ಕಾಗಿ ಗೋಹತ್ಯೆಯ ನಿಷೇಧ ಕಾನೂನಿನ ವಿಧೇಯಕಕ್ಕೆ ತಿಲಾಂಜಲಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡವಳಿಕೆ ಅತ್ಯಂತ ಖಂಡನೀಯ ಎಂದರು.
ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲರಿಗೂ, ಎಲ್ಲಾ ಸಮಾಜ ಬಂಧುಗಳಿಗೂ, ಎಲ್ಲಾ ವಿಚಾರಗಳಿಗೂ, ಮಾನ್ಯತೆ ನೀಡುವಂತೆ ತಾವು ರಾಜ್ಯಭಾರ ಮಾಡಿ, ಆಗ ನಾವೂ ನಿಮ್ಮನ್ನು ಮೆಚ್ಚುತ್ತೇವೆ. ಅದನ್ನು ಬಿಟ್ಟು ಹಿಂದೂ ವಿಚಾರಗಳಿಗೆ, ಗೋಮಾತೆ ವಿಚಾರದಲ್ಲಿ ರಾಜಕಾರಣ ಮಾಡುವುದು ಅಕ್ಷಮ್ಯ ಎಂದಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಸಂವಿಧಾನದ ರೀತಿಯಲ್ಲಿ ಪ್ರಜಾಪ್ರಭುತ್ವದ ಮಾರ್ಗದಲ್ಲಿ ತೆಗೆದುಕೊಂಡ ನಿರ್ಣಯ ಜಾರಿಗೆ ತರುವಲ್ಲಿ ತಾವು ಮುಖ್ಯಮಂತ್ರಿಗಳಾಗಿ ನಿಷ್ಪಕ್ಷಪಾತವಾಗಿ ಶ್ರಮ ವಹಿಸಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುವುದು ಸರಿಯಲ್ಲ ಎಂದಿದ್ದಾರೆ.
ನಾಳೆ ಪುಸ್ತಕ ಬಿಡುಗಡೆ
ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮೇ 16ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಪ್ರೊ. ಪಿ. ವೆಂಕಟರಾಮಯ್ಯ ಸಭಾಂಗಣದಲ್ಲಿ ಡಾ. ಬಿ.ಎಸ್. ಗುಂಜಾಳ್ ಅವರು ಬರೆದಿರುವ ಸಮಾಜ ಕಾರ್ಯದ ವಿಧಾನಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಿದೆ. ವಿವಿಯ ಕುಲಪತಿ ಎಸ್.ಎ. ಬಾರಿ ಪುಸ್ತಕ ಬಿಡುಗಡೆ ಮಾಡಲಿದ್ದು, ಕುಲಸಚಿವ ಪ್ರೊ. ಎ. ರಾಮೇಗೌಡ, ಸಮಾಜಕಾರ್ಯ ವಿಭಾಗದ ಪ್ರೊ. ರವೀಂದ್ರ ಡಿ. ಗಡ್ಕರ್, ವಿಭಾಗದ ಅತಿಥಿ ಉಪನ್ಯಾಸಕಿ ಕೆ. ಸಂಧ್ಯಾಕಾವೇರಿ ಮತ್ತಿತರರು ಉಪಸ್ಥಿತರಿರುವರು ಎಂದು ವಿಭಾಗ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

