ಬಂಡಿ ಭಂಡಾರಮ್ಮ ಜಾತ್ರಾ ಮಹೋತ್ಸವ
ಶಿವಮೊಗ್ಗ: ನಗರದ ಹಳೇ ಬೊಮ್ಮನಕಟ್ಟೆ ಗ್ರಾಮದ ಶ್ರೀ ಕೆಂಚಮ್ಮ, ಅಂತರಘಟ್ಟಮ್ಮ ಹಾಗೂ ಬಂಡಿ ಭಂಡಾರಮ್ಮ ದೇವಿಯ ಜಾತ್ರಮಹೋತ್ಸವ 15ರಿಂದ 6 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ವರ್ಷದಲ್ಲಿ 6 ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಬೇರೆ ಊರುಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವರು. ಜಾತ್ರೆಯ ಅಂಗವಾಗಿ ಬುಧವಾರ ಶ್ರೀದೇವಿಗೆ ಬಾಸಿಂಗ ಧಾರಣೆ, ಬೆಳಿಗ್ಗೆ 8.30ಕ್ಕೆ ಮೂಲ ದೇವತೆಗಳಿಗೆ ಕೆಂಡಾರ್ಚನೆ, ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ನಡೆಯಿತು.
ತಮ್ಮ ಸಂಕಷ್ಟ ಪರಿಹಾರಕ್ಕಾಗಿ ಹರಕೆ ಹೊತ್ತಿದ್ದವರು 16ರಂದು ಬೆಳಿಗ್ಗೆ 9ಗಂಟೆಗೆ ಬೇವಿನ ಸೀರೆ ಉಟ್ಟು ಹರಕೆ ತೀರಿಸುವರು. 18ರಂದು ಬೆಳಿಗ್ಗೆ 6.30ಕ್ಕೆ ಶ್ರೀದೇವಿಗೆ ಹೂವಿನ ರಥೋತ್ಸವ ಹಾಗೂ ಕೆಂಚಮ್ಮ ದೇವಿಯ ಉಯ್ಯಾಲೆ ಪೂಜೆ, ಸಂಜೆ 5.30ಕ್ಕೆ ಶ್ರೀ ಅಮ್ಮನವರ ಪಾನಕ ಪೂಜೆಯೊಂದಿಗೆ ಗ್ರಾಮದಲ್ಲಿ ಅಮ್ಮನವರ ಉತ್ಸವ ನಡೆಲಿದೆ.
19ರಂದು ಬೆಳಿಗ್ಗೆ 8.30 ರಿಂದ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2.30 ರಿಂದ 7.30ರವರೆಗೆ ರಾಜ್ಯಮಟ್ಟದ ಬಯಲು ಜಂಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ.
ಪಂದ್ಯದಲ್ಲಿ ವಿಜೇತರಾದವರಿಗೆ ಬೆಳ್ಳಿಗದೆ, ನಗದು ನೀಡಲಾಗುತ್ತದೆ. ಆದರಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ತಿಳಿಸಿದೆ.
ಕಚೇರಿ ಸ್ಥಳಾಂತರ
ಶಿವಮೊಗ್ಗ: ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಇವರ ಕಚೇರಿಯನ್ನು ಪ್ರಸಕ್ತ ಇರುವ ಸರ್ಕಾರಿ ನೌಕರರ ಸಹಕಾರ ಸಂಘ (ಜಿಓಸಿಎಸ್ ಬಿಲ್ಡಿಂಗ್), ಬ್ಲಾಕ್ ಬಿ, ಮೊದಲನೇ ಅಂತಸ್ತು, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗದ ಕಟ್ಟಡದಿಂದ ಸಹಕಾರ ಭವನ, ಆರ್ಟಿಓ ಆಫೀಸ್ ರಸ್ತೆ, ಶಿವಮೊಗ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಈ ಬದಲಾವಣೆಯನ್ನು ಗಮನಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

