ಶಿವಮೊಗ್ಗ

ಯಮ್ಮಿ ಮಮ್ಮಿ ಕಾರ್ಯಾಗಾರ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 19
ಲಿಟಲ್ಮೇನಿಯಂ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಕ್ಕಳು ಮತ್ತು ಪೋಷಕರಿಗಾಗಿ ಯಮ್ಮಿ ಮಮ್ಮಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
 ಮಕ್ಕಳ ಪೋಷಣೆ ಮತ್ತು ಆರೋಗ್ಯಕರ ಆಹಾರ ಪದಾರ್ಥ ತಯಾರಿಸುವ ಬಗೆಯನ್ನು ಪೋಷಕರಿಗೆ ಕಾರ್ಯಾಗಾರದಲ್ಲಿ ತಿಳಿಸಲಾಯಿತು. ರಾಯಲ್ ಆರ್ಕಿಡ್ ಹೋಟೆಲ್‌ನ ಮುಖ್ಯ ಬಾಣಸಿಗ ಶಕ್ತಿ ಪ್ರಸಾದ್ ಶಾಹೋ ಮತ್ತು ಸಹ್ಯಾದ್ರಿ ನಾರಾಯಣ ಹೃದಯಾಲಯದ ವೈದ್ಯೆ ನೇತ್ರಾವತಿ ಮಾರ್ಗದರ್ಶನ ನೀಡಿದರು.
ಪೌಷ್ಠಿಕ ಆಹಾರ: ರಾಯಲ್ ಆರ್ಕಿಡ್ ಹೋಟೆಲ್‌ನ ಬಾಣಸಿಗ ವಿಭಾಗದ ಮುಖ್ಯಸ್ಥ ಶಕ್ತಿ ಪ್ರಸಾದ್ ಶಾಹೋ, ಆರೋಗ್ಯಕರ ಮತ್ತು ಪೌಷ್ಠಿಕ ಆಹಾರ ಅಡುಗೆಯ ವಿವಿಧ ರೀತಿಗಳನ್ನು ಪ್ರದರ್ಶನದ ಮೂಲಕ ಮಾಹಿತಿ ನೀಡಿದರಲ್ಲದೆ, ಮಕ್ಕಳು ದೀರ್ಘಕಾಲ ಆರೋಗ್ಯವಂತರಾಗಿ ಕೆಲಸ ಕಾರ್ಯಗಳಲ್ಲಿ ನಿರತರಾಗಲು ರಕ್ತ ಉತ್ಪತ್ತಿ ಮಾಡುವಂತ ಆಹಾರ ಪದಾರ್ಥಗಳನ್ನು ನೀಡಬೇಕೆಂದರು.
 ಸಹ್ಯಾದ್ರಿ ನಾರಾಯಣ ಹೃದಯಾಲಯದ ವೈದ್ಯೆ ನೇತ್ರಾವತಿ ಮಾತನಾಡಿ, ಮಕ್ಕಳಿಗೆ ಪೌಷ್ಠಿಕಾಂಶದ ಆಹಾರ ನೀಡುವುದು ಮುಖ್ಯ. ಉತ್ತಮ ಗುಣಮಟ್ಟ ಮತ್ತು ಪೌಷ್ಠಿಕಾಂಶ ಹೊಂದಿದ ಆಹಾರದ ಮಹತ್ವ ತಿಳಿಸಿ, ಇಂತಹ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೇಹದ ಚಲನವಲನಗಳು ಚನ್ನಾಗಿರುತ್ತವೆ. ಮಕ್ಕಳು ಆರೋಗ್ಯವಂತರಾಗಬಹುದು ಎಂದರು.
ಅಕ್ಕಿ ರೋಟಿ, ಸಾಂಬರ್ ಪದಾರ್ಥಗಳು ಮಕ್ಕಳಿಗೆ ಯೋಗ್ಯವಲ್ಲ. ಪ್ರೋಟಿನ್‌ಗಳಾದ ಹಾಲು, ರಾಗಿ ಮಾಲ್ಟ್‌ಗಳನ್ನು ನೀಡುವುದು ಉತ್ತಮ ಎಂದರು. ಮಕ್ಕಳಿಗೆ ಮನರಂಜನೆ ನೀಡಲು ವಿವಿಧ ಕ್ರೀಡೆ ಹಾಗೂ ವಿವಿಧ ರೀತಿಯ ಆಟಿಕೆಗಳ ತಯಾರಿಕೆ, ಕಟ್ಟಡಗಳ  ರಚನೆ, ಕುಂಬಾರಿಕೆ ತಯಾರಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.