ಶಿವಮೊಗ್ಗ

ಚಿತ್ರಕಲಾ ಶಾಲೆಗೆ ಪ್ರವೇಶಾವಕಾಶ

Published On :

ಶಿವಮೊಗ್ಗ: ರವಿವರ್ಮ ಅಕಾಡೆಮಿ ಟ್ರಸ್ಟ್ 2013-14ನೇ ಶೈಕ್ಷಣಿಕ ಸಾಲಿನಲ್ಲಿ ರವಿವರ್ಮ ಚಿತ್ರಕಲಾ ಶಾಲೆಗೆ ಪ್ರವೇಶ ಆರಂಭಿಸಿದೆ. ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಬಹುದು. ರವೀಂದ್ರ ನಗರ, ಗೋಪಾಳ ಮತ್ತು ಓಟಿ ರಸ್ತೆಯಲ್ಲರುವ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ಅಕಾಡೆಮಿ ತಿಳಿಸಿದೆ. ವಿವರಗಳಿಗಾಗಿ-ಮೊ- 9243315859.
ಶ್ರೀ ಕೃಷ್ಣ ಉಡುಪ ಚಾಂಪಿಯನ್
ಶಿವಮೊಗ್ಗ: ದೇವನರ್ ಫೌಂಡೇಶನ್ ಮೇ 14 ರಿಂದ 18ರವರೆಗೆ ಹೈದರಾಬಾದ್‌ನಲ್ಲಿ ದೃಷ್ಟಿ ಮಾಂದ್ಯರಿಗೆ ನಡೆಸಿದ ರಾಷ್ಟ್ರಮಟ್ಟದ ಮುಕ್ತ ರೇಟಿಂಗ್ ಚಸ್ ಪಂದ್ಯಾವಳಿಯಲ್ಲಿ ನಳಂದ ಚೆಸ್ ಅಕಾಡೆಮಿಯ ಶ್ರೀ ಕೃಷ್ಣ ಉಡುಪ ಚಾಂಪಿಯನ್ ಆಗಿದ್ದಾರೆ. ಅಲ್ಲದೇ, ಜೂನ್ 11ರಿಂದ 22ರವರೆಗ ಸ್ಪೇನ್ ದೇಶದಲ್ಲಿ ನಡೆಯುವ ದೃಷ್ಟಿ ಮಾಂದ್ಯ ವರ್ಗದ 5 ಭಾರತೀಯ ತಂಡದಲ್ಲಿಯೂ ಶ್ರೀ ಕೃಷ್ಣ ಉಡುಪ ಸ್ಥಾನ ಪಡೆದಿದ್ದಾರೆ ಎಂದು ಅಕಾಡೆಮಿ ತಿಳಿಸಿದೆ.
ಮಧುಮೇಹ ತಪಾಸಣಾ ಶಿಬಿರ
ಶಿವಮೊಗ್ಗ: ವಾತ್ಸಲ್ಯ ಆಸ್ಪತ್ರೆಯಲ್ಲಿ ಮೇ 2ರಂದು ಬೆಳಿಗ್ಗೆ 9ಗಂಟೆಯಿಂದ 4ರವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಪ್ರತಿ ಬುಧವಾರ ನಡೆಯುವ ತಪಾಸಣಾ ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ, ರಕ್ತದೊತ್ತಡ, ಕಣ್ಣು, ಪಾದದ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಗೆ ಒಳುಪಡುವ ವ್ಯಕ್ತಿಗಳು ಬೆಳಿಗ್ಗೆ ಆಹಾರ ಸೇವನೆ ಮಾಡದೇ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಸ್ಪತ್ರೆಯ ಸಾರ್ವಜನಿಕ ಸಂರ್ಪಕಾಧಿಕಾರಿ ಧೀರೇಂದ್ರ ಪಂಢರಿ ತಿಳಿಸಿದ್ದಾರೆ. ವಿವಿರಗಳಿಗಾಗಿ- 08182-408100.
ಉಚಿತ ಸೀಟು
ಶಿವಮೊಗ್ಗ: ಗ್ಲೋಬಲ್ ಎಜುಕೇಷನ್ ಸೊಸೈಟಿ ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಡಿಇಡಿ ಕಾಲೇಜಿನಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯು ಉಚಿತ ಸೀಟುಗಳನ್ನು ನೀಡಲು ನಿರ್ಧರಿಸಿದೆ. ಅದರೊಂದಿಗೆ ಉಚಿತ ಪಠ್ಯ-ಪುಸ್ತಕಗಳು, ಶೈಕ್ಷಣಿಕ ಪ್ರವಾಸ, ಸಮವಸ್ತ್ರಗಳನ್ನು ಉಚಿತವಾಗಿ ನೀಡಲಿದೆ. ಮಾಹಿತಿಗಾಗಿ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಸೊಸೈಟಿಯ ಕಾರ್ಯದರ್ಶಿ ಎನ್. ರಮೇಶ್ ತಿಳಿಸಿದ್ದಾರೆ. ವಿವರಗಳಿಗಾಗಿ- 9448123340.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.