ಶಿವಮೊಗ್ಗ

ಜೂ.10ರ ವರೆಗೆ ಶೌಚಾಲಯ ಸಮೀಕ್ಷೆ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಮೇ 22
2011ರ ಜನಗಣತಿಯಂತೆ ಶಿವಮೊಗ್ಗ ನಗರಸಭಾ ವ್ಯಾಪ್ತಿಯಲ್ಲಿ ಅಂದಾಜು 827 ಇನ್‌ಸ್ಯಾನಿಟರಿ ಲೆಟ್ರಿನ್ಸ್ (ಅನೈರ್ಮಲ್ಯ ಶೌಚಾಲಯಗಳು) ಗಳು ಅಸ್ತಿತ್ವದಲ್ಲಿ ಇರುವುದಾಗಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸದರಿ ಅಂಶಗಳ ಕುರಿತಾಗಿ ಸಮೀಕ್ಷಾ ಪ್ರಕ್ರಿಯೆಯನ್ನು ಮೇ 22ರಿಂದ ಜೂ.10ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ.
ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕೆಲಸಗಳಲ್ಲಿ ಇನ್ನೂ ತೊಡಗಿಸಿಕೊಂಡಿರುವ ವ್ಯಕ್ತಿಗಳು ಮತ್ತು ಅವರ ಅವಲಂಬಿತರನ್ನು (ವಯಸ್ಕರು ಮತ್ತು ಅಪ್ರಾಪ್ತರು) ಗುರುತಿಸುವುದು ಸಮೀಕ್ಷೆಯ ಪ್ರಮುಖ ಉದ್ದೇಶ.
ಎಸ್‌ಆರ್‌ಎಂಎಸ್ (ಖಜಟಜಿ ಊಟಠಟ್ಟಣಟಜಟಿಡಿ ಝ್ಛಜಟಜ ಜ್ಟ್ಠಿ ಖಝಛಛ್ಝಿಟ್ಝಡಿಛಡ್ಝ್ಟಿಟಿ ್ಟಜಿ ಂಛಟ್ಡಿಛಟ ಖ್ಛಛಢಜಟ್ಜಿಜ್ಠಡ) ಯೋಜನೆಗೆ ಒಳಪಟ್ಟಿದ್ದು, ಇನ್ನೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ವೃತ್ತಿಯನ್ನು ಬಿಡದಿರುವವರು, ಎಸ್‌ಆರ್‌ಎಂಎಸ್ ಯೋಜನೆಗೆ ಒಳಪಡದಿರುವವರು, ನಿಜವಾದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಗುರುತಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ನಿಜವಾಗಿಯೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಲ್ಲದವರ ಸೇರ್ಪಡೆಯ ಸಾಧ್ಯತೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಲಾಗದಿದ್ದರೂ ಅದನ್ನು ಕಡಿಮೆಗೊಳಿಸುವುದು.
ಸಮ್ಮಿತಿ ಖಚಿತ: ಸಮೀಕ್ಷೆಯಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ಸ್ವಚ್ಛಗೊಳಿಸುತ್ತಿರುವ ಇನ್‌ಸ್ಯಾನಿಟರಿ ಲೆಟ್ರಿನ್ಸ್‌ಗಳು ಮತ್ತು ತೆರೆದ ಚರಂಡಿಗಳ ಬಗ್ಗೆ ವಿವರಗಳನ್ನು ಖಚಿತಪಡಿಸಿಕೊಳ್ಳುವುದು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳೆಂದರೆ ಇನ್‌ಸ್ಯಾನಿಟರಿ ಶೌಚಾಲಯಗಳಲ್ಲಿ, ಮಲಮೂತ್ರಗಳನ್ನು ವಿಸರ್ಜಿಸುವ ತೆರೆದ ಚರಂಡಿಗಳು ಅಥವಾ ಗುಡಿಗಳಿಂದ, ರೈಲ್ವೇ ಹಳಿಗಳಿಂದ ಮಾನವ ಮಲಮೂತ್ರಗಳನ್ನು ಅವುಗಳು ಸಂಪೂರ್ಣ ಕೊಳೆಯುವ ಮೊದಲೇ ಸ್ವಚ್ಛಗೊಳಿಸಲು, ತೆಗೆದುಕೊಂಡು ಹೋಗಲು, ವಿಲೇವಾರಿ ಮಾಡಲು ಅಥವಾ ಇನ್ಯಾವುದೇ ರೀತಿಯಲ್ಲಿ ನಿರ್ವಹಿಸಲು ಯಾವುದೇ ವ್ಯಕ್ತಿಯಿಂದ, ಸ್ಥಳೀಯ ಸಂಸ್ಥೆಗಳಿಂದ ಅಥವಾ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನೇಮಿಸಿಕೊಳ್ಳಲ್ಪಟ್ಟ ವ್ಯಕ್ತಿ. ನಗರ ಸ್ಥಳೀಯ ಸಂಸ್ಥೆಗಳು, ಸರ್ಕಾರಿ, ಅರೆಸರ್ಕಾರಿ ಮತ್ತು ಖಾಸಗಿ ಕಚೇರಿ ಸಂಸ್ಥೆಗಳಲ್ಲಿ ಕಸ ಗುಡಿಸುತ್ತಿರುವ ಅಥವಾ ಇತರೆ ಸ್ವಚ್ಛತಾ ಕಾಮಗಾರಿಗಳಿಗೆ (ಮೇಲೆ ತಿಳಿಸಲಾದ ಸ್ವಚ್ಛತಾ ಕಾಮಗಾರಿಗಳನ್ನು ಹೊರತುಪಡಿಸಿ) ನೇಮಿಸಲಾಗಿರುವ ಕೆಲಸಗಾರರು ಸಫಾಯಿ ಕರ್ಮಚಾರಿಗಳಾಗಿದ್ದು, ಇವರು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಲ್ಲ.
ಸ್ವಯಂ ಘೋಷಣೆ: ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಾಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ತಮ್ಮನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳೆಂದು ಘೋಷಿಸಲು ಅನುವಾಗುವಂತೆ ನಗರಸಭಾ ಕಾರ್ಯಾಲಯದ ವ್ಯವಸ್ಥಾಪಕರ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. (ದೂ-08182 -222414 ಟೋಲ್ ಪ್ರೀ) ಇಲ್ಲಿ ಸಮೀಕ್ಷೆಗಾಗಿ ನಿಗದಿಪಡಿಸಿದ ಕೇಂದ್ರಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿಮಾಡಿ ಸ್ವಯಂ ಘೋಷಣೆ ಮಾಡಿಕೊಳ್ಳಬಹುದಾಗಿರುತ್ತದೆ.
ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಯೊಂದಿಗೆ ಕೈಜೋಡಿಸುವಂತೆ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.