ಪ್ರಾಮಾಣಿಕ ಸೇವೆ ಮಾಡುತ್ತೇನೆ: ಶಾಸಕ ಕೆಬಿಪಿ
ಶಿವಮೊಗ್ಗ: ಜನರ ಋಣ ತೀರಿಸಲು ಶಾಸಕನಾಗಿದ್ದೇನೆ, ಜನರ ಅಪೇಕ್ಷೆಯಂತೆಯೇ ನಡೆಯುತ್ತೇನೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.
ತಾಲೂಕು ಬ್ರಾಹ್ಮಣ ಸೇವಾ ಸಂಘ ಗುರುವಾರ ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇನೆ. ಗಾಯತ್ರಿ ಮಾತೆಯ ಆಶೀರ್ವಾದಿಂದ ಆರಿಸಿ ಬಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಚುನಾವಣೆ ಮುಗಿದು ಫಲಿತಾಂಶ ಬಂದರೂ ಇನ್ನೂ ಸಹ ಚುನಾವಣೆಯಲ್ಲಿ ನಾನು ಡೀಲ್ ಆಗಿದ್ದೆ ಎಂಬ ಮಾತು ಹರಿದಾಡುತ್ತಿದೆ. ಇದೆಲ್ಲಾ ಸತ್ಯಕ್ಕೆ ದೂರವಾದ ವಿಷಯ ಎಂದು ಸ್ಪಷ್ಟಪಡಿಸಿದರು.
ಪ್ರಾಮಾಣಿಕವಾಗಿ ಕೆಲಸ: ನನ್ನ ಜೀವನದಲ್ಲಿ ಇದುವರೆಗೆ ಆರು ಚುನಾವಣೆ ಎದುರಿಸಿದ್ದೇನೆ, ಆರರಲ್ಲೂ ಗೆಲವು ಕಂಡಿದ್ದೇನೆ. ಈ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಜನರ ಗೆಲವು ಎಂದು ಹೇಳಿದ ಅವರು, ಹಿಂದಿನ ಶಾಸಕರಿಗೆ ಏನೆಲ್ಲಾ ಸಲಹೆ ಸೂಚನೆ ಕೊಟ್ಟಿದ್ದೀರೋ ಅದೇ ರೀತಿ ನನಗೂ ಸಹಕಾರ ಕೊಡಿ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ವಿ.ವಿ.ಎನ್. ಭಟ್, ಹವ್ಯಕ ಬ್ರಾಹ್ಮಣ ಸಂಘದ ಅಧ್ಯಕ್ಷ ಅಶೋಕ್ ಜಿ.ಭಟ್ ಉಪಸ್ಥಿತರಿದ್ದರು.
ಬ್ಲಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಚ್. ರವಿಶಂಕರ್ ಅವರು, ಸಂಘಟನೆಗೆ ಕೆ.ಬಿ. ಪ್ರಸನ್ನಕುಮಾರ್ ಅವರು ನೀಡಿರುವ ಸಹಕಾರವನ್ನು ಸ್ಮರಿಸಿದರು. ಸಂಘಟನೆಯ ಎಸ್.ಜಿ. ಗೋಪಾಲ್, ಜಿ.ಕೆ. ಮಾಧವಮೂರ್ತಿ, ಎಚ್.ಡಿ. ಚಂದ್ರಶೇಖರ್, ಲಕ್ಷ್ಮಿ ಶ್ರೀಧರ್, ಕೆ.ವೆಂಕಟೇಶರಾವ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

