ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಐವರ ಬಂಧನ
ಶಿವಮೊಗ್ಗ: ಕಳೆದ ಮೇ 11ರಂದು ನಗರದ ಹೊರವಲಯದ ತ್ಯಾವರೆಕೊಪ್ಪದಲ್ಲಿ ನಡೆದ ಆಟೋ ಚಾಲಕ ಮಂಜುನಾಥ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಪ್ರಕರಣ ಬೇಧಿಸಿದ ಪೊಲೀಸರು ಅಶೋಕನಗರದ ಶ್ರೀನಿವಾಸ ಹಾಗೂ ಆತನ ಸಹೋದರ ಅಶ್ವತ್ಥ ಕುಮಾರರನ್ನು ಅನುಮಾನದ ಮೇರೆಗೆ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ 2006ರಲ್ಲಿ ತಮ್ಮ ಸಹೋದರ ಲವ ಮತ್ತು ಕುಶ ಹತ್ಯೆ ಮಾಡಿದ್ದ ಮಂಜುನಾಥನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆತನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮಂಜುನಾಥನ ಕೊಲೆಗೆ ತುಮಕೂರಿನ ರಜನಿ ಅಲಿಯಾಸ್ ಶರವಣ ಜೊತೆಗೊಡಿ ಶಿವು ಅಲಿಯಾಸ್ ಮಂಕ್ರಿ ಶಿವು, ಮಲ್ಲಿಕಾ ಅಲಿಯಾಸ್ ಮಲ್ಲಿಕಾರ್ಜುನ, ಜಾನಿರಾಜ ಅಲಿಯಾಸ್ ಕುಂದಾಪುರ ರಾಜ, ಧನಂಜಯ, ನಾಗರಾಜ ಮತ್ತು ಶಿವಮೊಗ್ಗದ ಮಹೇಶರನ್ನು ಬಳಸಿಕೊಂಡು ಮಂಜುನಾಥನ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ವಿಷಯ ಸಂಗ್ರಹಿಸಿದ ಕುಂಸಿ ಠಾಣೆ ಪಿಎಸ್‌ಐ ಅಭಯ್ ಪ್ರಕಾಶ್ ಸೋಮನಾಳ, ದೊಡ್ಡಪೇಟೆ ಪಿಎಸ್‌ಐ ಸುಬಾಷ್ಚಂದ್ರ ನೇತೃತ್ವದ ಪೊಲೀಸರ ತಂಡ ಬೆಂಗಳೂರು, ತುಮಕೂರು ಹಾಗೂ ಗುಬ್ಬಿಯಲ್ಲಿ ಕಾರ್ಯಾಚರಣೆ ನಡೆಸಿ, ಮಲ್ಲಿಕಾರ್ಜುನ, ಜಾನಿರಾಜ ಅಲಿಯಾಸ್ ಕುಂದಾಪುರ ರಾಜ, ಧನಂಜಯ, ನಾಗರಾಜ ಅವರನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

