ಹಾರೋಹಿತ್ಲು ಸುಬ್ಬರಾವ್ಗೆ ಕೃಷಿ ಪ್ರಶಸ್ತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 26
ಕೃಷಿ ಇಲಾಖೆಯು 2012-13ನೇ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ, ವಿಜೇತರಾದ ಕೃಷಿಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರಿಗೆ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹಮಾನ 10 ಸಾವಿರ, ತೃತೀಯ ಬಹುಮಾನ 5 ಸಾವಿರ ಹಾಗೂ ತಾಲೂಕು ಮಟ್ಟದಲ್ಲಿ ಆಯ್ಕೆಯಾದವರಿಗೆ ಪ್ರತಿ ತಾಲೂಕಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 5 ಸಾವಿರ ಹಾಗೂ ತೃತೀಯ ಬಹುಮಾನ 3ಗಳನ್ನು ನೀಡಿ ಗೌರವಿಸಲಿದೆ. ಜಿಲ್ಲಾ ಮಟ್ಟದಲ್ಲಿ ಹೊಸನಗರ ತಾಲೂಕು ಹಾರೋಹಿತ್ಲು ಗ್ರಾಮದ ಸುಬ್ಬರಾವ್ (ಪ್ರಥಮ), ಶಿವಮೊಗ್ಗ ತಾಲೂಕು ಗಾಜನೂರಿನ ರಾಜಪ್ಪ (ದ್ವಿತೀಯ) ಭದ್ರಾವತಿ ತಾಲೂಕು ದೊಣಬಘಟ್ಟದ ರಹೀಂಬೇಗ್(ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ತಾಲೂಕು ಮಟ್ಟದಲ್ಲಿ ವಿಜೇತರು-ಶಿವಮೊಗ್ಗ ತಾಲೂಕು, ಆಯನೂರಿನ ಎನ್. ಬಸವರಾಜ್ (ಪ್ರಥಮ) ತಿಮಕಾಪುರದ
ವಿಜಯಲಕ್ಷ್ಮಿ(ದ್ವಿತೀಯ) ಕೆ.ಪಿ. ಕೃಷ್ಣಮೂರ್ತಿ (ತೃತೀಯ), ಭದ್ರಾವತಿ, ದೊಣಬಘಟ್ಟದ ಫಜಲ್ಬೇಗ್ (ಪ್ರಥಮ), ತಟ್ಟೆಹಳ್ಳಿಯ ಮಂಜೋಜಿರಾವ್ ಮತ್ತು ಆನವೇರಿಯ ಮೌನೇಶಾಚಾರ್ (ತೃತೀಯ) ತೀರ್ಥಹಳ್ಳಿ, ಕೀಗಡಿಯ ಕೆ.ಎಂ. ಯೋಗೇಂದ್ರ(ಪ್ರಥಮ) ಸಣ್ಣಿಕೊಪ್ಪದ ಪುರುಷೋತ್ತಮ (ದ್ವಿತೀಯ) ಮತ್ತು ಹಣಗೆರೆಯ ಬಂಗಾರಪ್ಪ (ತೃತೀಯ) ಸಾಗರ, ಹಿರೇಹಾರಕ ಸಂಗಣ್ಣಕೆರೆಯ ಶೇಖರಪ್ಪ (ಪ್ರಥಮ) ಪರಮೇಶ್ವರ (ದ್ವಿತೀಯ) ಹಾಗೂ ಲಿಂಗರಾಜು (ತೃತೀಯ), ಹೊಸನಗರ, ಎಚ್.ಎಸ್. ಸಿದ್ದಪ್ಪ, ತೇಜಸ್ವಿ ಎಸ್.ವೈ (ದ್ವಿತೀಯ) ಹಾಗೂ ಯೋಗೇಂದ್ರ (ತೃತೀಯ), ಶಿಕಾರಿಪುರ, ಪ್ರಭುದೇವ (ಪ್ರಥಮ) ಬಸವರಾಜಪ್ಪ ಮತ್ತು ಬಿ. ನಾಗರತ್ನ (ತೃತೀಯ) ಸೊರಬ, ಅಂಡಿಗೆ ಗ್ರಾಮದ ಕೆ.ಪಿ. ಷಣ್ಮುಖಪ್ಪ, ಮಳಲಿಕೊಪ್ಪದ ಗಣೇಶಪ್ಪ ಮತ್ತು ಬಂಕವಳ್ಳಿಯ ಲಿಂಗರಾಜ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶಿವಮೂರ್ತಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

