ಎಟಿಎಂ ಸರಿಪಡಿಸಲು ಗ್ರಾಹಕರ ಮನವಿ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮೇ 26
ಈ ಹಿಂದೆ ಗ್ರಾಹಕರ ಸಭೆಯಲ್ಲಿ ಹಲವು ಬಾರಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಆದರೂ ಏನಾಯಿತು ಎಂಬ ಬಗ್ಗೆ ಯಾರೊಬ್ಬರಿಗೂ ತಿಳಿದಿಲ್ಲ. ಹೀಗಾಗಿ ಗ್ರಾಹಕರ ಸಭೆ ಅವಶ್ಯಕತೆ ಇದೆಯೇ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ ಎಂದು ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿನ್ನಪ್ಪ ಓಬಳೇರ್ ಪ್ರಶ್ನಿಸಿದ್ದಾರೆ.
ಶಿರಾಳಕೊಪ್ಪ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು ಬ್ಯಾಂಕ್ ಸಿಬ್ಬಂದಿ ಕೊರತೆ ಬಗ್ಗೆ ಈ ಹಿಂದೆ ಆರ್.ಎಂ. ಎದುರು ಚರ್ಚೆ ಆದರೂ ಈ ವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.
ಬ್ಯಾಂಕ್‌ಗಳಲ್ಲಿ ಪ್ರಭಂದಕರನ್ನು ಪದೇಪದೇ ವರ್ಗಾವಣೆ ಮಾಡುತ್ತಿರುವದರಿಂದ ಸಿಬ್ಬಂದಿ ಕೊರತೆಯಿಂದ ಕೆಲಸ ಕಾರ್ಯ ಹಿಂದೆ ಬೀಳುವದರ ಜೊತೆ ಬ್ಯಾಂಕಿನಿಂದ ಉತ್ತಮ ಸೇವೆ ನಿರೀಕ್ಷಿಸುತ್ತಿರುವ ಗ್ರಾಹಕರಿಗೆ ನಿರಾಶೆ ಆಗುತ್ತಿದೆ, ಎಟಿಎಂ ಒಂದು ದಿನ ಸರಿಇದ್ದರೆ ಇನ್ನೊಂದು ದಿನ ಸರಿ ಇರುವುದಿಲ್ಲ. ಎಲ್ಲಾ ಸಮಸ್ಯೆ ಬಗ್ಗೆ ತಕ್ಷಣ ಗ್ರಾಹಕರ ಮನವಿಗೆ ಸ್ಪಂದಿಸಿ ಎಂದು ವಿನಂತಿಸಿದರು.
ಉದ್ಯಮಿ ಎಂ.ಆರ್. ಸತೀಶ್ ಮಾತನಾಡಿದರು. ಬ್ಯಾಂಕಿನ ಪ್ರಬಂಧಕ ಚಂದ್ರಶೇಖರ ಪಾಟೀಲ ಮಾತನಾಡಿ, ಈ ಶಾಖೆಯಲ್ಲಿ ಉತ್ತಮ ವ್ಯವಹಾರ ಮಾಡಲು ಸಿಬ್ಬಂದಿ ಕೊರತೆ ಇದೆ, ಎರಡು ಸಿಬ್ಬಂದಿಯನ್ನು ಕೊಟ್ಟರೆ ಗ್ರಾಹಕರಿಗೆ ಉತ್ತಮ ಸೇವೆ ಕೊಡಬಹುದು ಎಂದರು.
ಅಧ್ಯಕ್ಷತೆಯನ್ನು ಸರ್ಕಾರಿ ವೈದ್ಯ ಡಾ. ಗಿರಿರಾಜ್ ವಹಿಸಿದ್ದರು. 18 ಕಿ.ಮೀ. ವ್ಯಾಪ್ತಿಯಲ್ಲಿ ಶಿರಾಳಕೊಪ್ಪದಲ್ಲಿ ಇರುವ ಏಕಮೇವ ಎಟಿಎಂ ಇದಾಗಿದ್ದು,ಪದೇ ಪದೇ ಹಾಳಾಗುತ್ತಿರುವ ಬಗ್ಗೆ ಈ ಹಿಂದೆ ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ದೂರು ಗ್ರಾಹಕರದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

