ವಿಮಾ ಕಂತು ಪಾವತಿಗೆ ಜೂ.30 ಅಂತಿಮ ದಿನ
ಶಿವಮೊಗ್ಗ: ರೈತರಿಗೆ ಕೃಷಿಯಲ್ಲಿ ನಿಶ್ಚಿತ ಆದಾಯ ದೊರಕಿಸಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯಲ್ಲಿ ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಪ್ರಾಯೋಗಿಕವಾಗಿ ಮಾರ್ಪಡಿಸಿರುವ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಕೃಷಿ ಇಲಾಖೆ ಅನುಷ್ಠಾನಕ್ಕೆ ತಂದಿದೆ.
ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾವತಿ ಮತ್ತು ಕೂಡ್ಲಿಗೆರೆ ಹೋಬಳಿಗಳಲ್ಲಿ ಮಳೆ
ಮಳೆಯಾಶ್ರಿತ ರಾಗಿ, ಶಿಕಾರಿಪುರ ತಾಲೂಕಿನ ಅಂಜನಾಪುರ, ತಾಳಗುಂದ ಮತ್ತು ಹೊಸೂರು ಹೋಬಳಿಗಳಲ್ಲಿ ಬೆಳೆಯುವ ಹತ್ತಿ ಮತ್ತು ರಾಗಿ, ಶಿಕಾರಿಪುರ, ಉಡುಗುಣಿಯಲ್ಲಿನ ಹತ್ತಿ ಮತ್ತು ಹೊಸೂರಿನಲ್ಲಿ ಜೋಳದ ಬೆಳೆಗಳು ವಿಮಾ ಯೋಜನೆಗೆ ಒಳಪಟ್ಟಿವೆ.
ಗ್ರಾಪಂಗಳು: ಶಿವಮೊಗ್ಗ ತಾಲೂಕಿನ ಹಾರನಹಳ್ಳಿ, ಹೊಳಲೂರು-1, ಕುಂಸಿ, ನಿಧಿಗೆ-1, ಶಿವಮೊಗ್ಗ-1 ಮತ್ತು 2, ಹೋಬಳಿ ವ್ಯಾಪ್ತಿಗೆ ಬರುವ ಮಳೆಯಾಶ್ರಿತ ರಾಗಿ ಮತ್ತು ಹತ್ತಿ ವಿಮಾ ಯೋಜನೆಗೆ ಒಳಪಟ್ಟಿದ್ದು, ಸೊರಬ ತಾಲೂಕಿನ ಆನವಟ್ಟಿಯ ರಾಗಿ ಮತ್ತು ಹತ್ತಿ, ಚಂದ್ರಗುತ್ತಿ, ಜಡೆ, ಸೊರಬ, ಉಳವಿ ಹೋಬಳಿಗಳು ಮಳೆಯಾಶ್ರಿತ ಹತ್ತಿ ಬೆಳೆಗಳು, ಶಿವಮೊಗ್ಗ ತಾಲೂಕಿನ 24 ಗ್ರಾಪಂ ವ್ಯಾಪ್ತಿಯ ನೀರಾವರಿ ಆಶ್ರಿತ ಬತ್ತ, 10 ಪಂಚಾಯಿತಿಗಳ ಬತ್ತ, 26 ಪಂಚಾಯಿತಿಗಳ ಮುಸುಕಿನ ಜೋಳ, 3ಗ್ರಾಮ ಪಂಚಾಯಿತಿಗಳು ನೀರಾವರಿ ಆಶ್ರಯದಲ್ಲಿ ಮುಸುಕಿನ ಜೋಳದ ಬೆಳೆಗಳು ವಿಮೆಗೆ ಒಳಪಟ್ಟಿವೆ.
ಮುಸುಕಿನ ಜೋಳ: ಭದ್ರಾವತಿ ತಾಲೂಕಿನ 31ಗ್ರಾಪಂ ವ್ಯಾಪ್ತಿಯ ನೀರಾವರಿ ಆಶ್ರಯದ ಬತ್ತ, 11 ಗ್ರಾಪಂ ವ್ಯಾಪ್ತಿಯ ಮಳೆ ಆಶ್ರಯದ ಮುಸುಕಿನ ಜೋಳದ ಬೆಳೆಗಳು, ತೀರ್ಥಹಳ್ಳಿ ತಾಲೂಕಿನ 27 ಗ್ರಾಪಂ ಬತ್ತ, 37ಗ್ರಾಮ ಪಂಚಾಯಿತಿಗಳು ಮಳೆ ಆಶ್ರಯದಲ್ಲಿ ಮಳೆ ಆಶ್ರಿತ ಬತ್ತದ ಬೆಳೆಗಳು ವಿಮೆಯ ವ್ಯಾಪ್ತಿಗೊಳಪಟ್ಟಿವೆ.
ಶಿಕಾರಿಪುರ ತಾಲೂಕಿನ 43 ಗ್ರಾಪಂಗಳ ನೀರಾವರಿ ಆಶ್ರಿತ ಬತ್ತ ಮತ್ತು ಮುಸುಕಿನ ಜೋಳ ಹಾಗೂ 10ಗ್ರಾಪಂಗಳು ನೀರಾವರಿ ಆಶ್ರಿತ ಮುಸುಕಿನ ಜೋಳದ ಬೆಳೆ, ಸೊರಬ ತಾಲೂಕಿನ 39 ಗ್ರಾಪಂಗಳ ಬತ್ತ, 38ಗ್ರಾಪಂಗಳ ಬತ್ತ, 29ಗ್ರಾಪಂಗಳು ಮಳೆ ಆಶ್ರಿತ ಮುಸುಕಿನ ಜೋಳ ಹಾಗೂ 2ಗ್ರಾಪಂಗಳು ನೀರಾವರಿ ಆಶ್ರಿತ ಮುಸುಕಿನ ಜೋಳದ ಬೆಳೆಗಳು ವಿಮೆಗೆ ಒಳಪಟ್ಟಿವೆ. ಸೂಚಿಸಲಾದ ಬೆಳೆಗಳಿಗೆ ಆಲಿಕಲ್ಲು ಮಳೆ, ಭೂಕುಸಿತದಿಂದ ಉಂಟಾದ ನಷ್ಟದ ನಿರ್ಧಾರವನ್ನು ವೈಯಕ್ತಿಕವಾಗಿ ನಿರ್ಧರಿಸಿ, ಬೆಳೆ ವಿಮಾ ನಷ್ಟ, ಪರಿಹಾರವನ್ನು ಇತ್ಯರ್ಥಪಡಿಸಲು ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆ ಅಥವಾ ವಿಮಾ ಸಂಸ್ಥೆ ಕಚೇರಿಗಳಿಗೆ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು ತಿಳಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

