ಶಿವಮೊಗ್ಗ

ಬೆಂಕಿ ತಗುಲಿ ಇಬ್ಬರಿಗೆ ಗಾಯ

Published On :

ಸೊರಬ: ರಸ್ತೆ ಬದಿಯ ಮರವೊಂದಕ್ಕೆ ಬೆಂಕಿ ತಗುಲಿ ಕ್ರಮೇಣ ರಸ್ತೆಗೆ ಬಿದ್ದಿದ್ದು, ಬೈಕ್ ಸವಾರರಿಗೆ ಗಾಯಗಳಾದ ಘಟನೆ ಚಂದ್ರಗುತ್ತಿ ಬಳಿ ಜರುಗಿದೆ. ಸೋಮವಾರ ಮಧ್ಯಾಹ್ನ ಹರೀಶಿ- ಮಂಗಳೂರು ಗ್ರಾಮದ ರವೀಶ್ ಮತ್ತು ಚಂದ್ರಶೇಖರ್ ಎಂಬುವವರು ಚಂದ್ರಗುತ್ತಿಗೆ ಬರುವಾಗ ಸಮೀಪದ ನ್ಯಾರ್ಸಿ ಬಳಿ ಈ ಘಟನೆ ನಡೆದಿದೆ. ಈ ಮೊದಲೇ ರಸ್ತೆ ಬದಿಯಲ್ಲಿನ ಅಕೇಶಿಯಾ ಮರದ ಬುಡಕ್ಕೆ ಬೆಂಕಿ ತಾಗಿ ಟೊಳ್ಳಾಗಿತ್ತು, ಬೈಕ್ ಮೇಲೆ ಉರುಳಿದೆ. ಇಬ್ಬರೂ ಗಾಯಗೊಂಡಿದ್ದಾರೆ.
ಮಹಿಳೆ ಕಾಣೆ
ಭದ್ರಾವತಿ: ತವರುಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಮಹಿಳೆಯೊಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದು ಕಾಣೆಯಾಗಿದ್ದಾರೆ ಎಂದು ಮಹಿಳೆಯ ಪತಿ ದೂರು ನೀಡಿದ್ದಾರೆ.  ಮೇ 23ರಂದು ಕೆಲಸಕ್ಕೆ ಹೋದಾಗ ಹೇಳಿ ಹೋದವಳು ಇದುವರೆಗೂ ಹಿಂದುರಿಗಿ ಬಂದಿಲ್ಲವೆಂದು ವೆಂಕಟೇಶ ಎಂಬವರು ಹೊಸಮನೆ ಪೋಲಿಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.