ಬಹು ವರ್ಷಗಳ ವಿವಾದಕ್ಕೆ ಅಂತ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 29
ಇತಿಹಾಸಪ್ರಸಿದ್ಧ ಮಂಡ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ಬಹುವರ್ಷಗಳಿಂದ ಬಾಕಿ ಇದ್ದ ವಿವಾದವೊಂದು ಬುಧವಾರ ಬಗೆಹರಿದಿದೆ. ದೇವಾಲಯಕ್ಕೆ ಸಂಬಂಧಿಸಿದಂತೆ ಮಂಡ್ಲಿ ಗ್ರಾಮಸ್ಥರೇ ಸೇರಿ ರಚಿಸಿಕೊಂಡಿರುವ ಶ್ರೀ ವೀರಭದ್ರೇಶ್ವರ ಸಮಿತಿ ಹಾಗೂ ಶಿವಮೊಗ್ಗದ ಭಕ್ತರು ರಚಿಸಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಭಕ್ತಮಂಡಳಿ ಅಸ್ತಿತ್ವದಲ್ಲಿದ್ದವು.
ಕಳೆದ 18 ವರ್ಷದಲ್ಲಿ ದೇವಸ್ಥಾನದ ಬಳಿ ಜಾತ್ರಾ ಮಹೋತ್ಸವವನ್ನು ಭಕ್ತಮಂಡಳಿ ಸ್ವತಂತ್ರ್ಯವಾಗಿ ಆಚರಿಸಿಕೊಂಡು ಬರುತ್ತಿತ್ತು. ಹಿಂದಿದ್ದ ಸಮಿತಿಯು ದೇವಸ್ಥಾನದ ನಿರ್ವಹಣೆ ಮಾಡುತ್ತಿತ್ತು. ಎರಡೂ ಸಮಿತಿಗಳ ನಡುವೆ ಸಮನ್ವಯ ಕೊರತೆಯ ಕಾರಣ ದೇವಾಲಯದ ದೇವಾಲಯ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ. ಜಾತ್ರೆ ಹಿನ್ನಲೆಯಲ್ಲಿ ಬುಧವಾರ ದೇವಾಲಯ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಕ್ತಮಂಡಳಿ ಅಧ್ಯಕ್ಷ ಕೋರಿ ಪ್ರಭುಲಿಂಗಪ್ಪ ಹಾಗೂ ವೀರಭದ್ರೇಶ್ವರ ಸಮಿತಿ ಅಧ್ಯಕ್ಷ ಮೇಘರಾಜ್ ಅವರು ಪರಸ್ಪರ ಚರ್ಚಿಸಿ, ಎರಡು ಸಮಿತಿಗಳ ಬದಲು ಒಂದೇ ಸಮಿತಿ ರಚಿಸಲಾಗುವುದು. ದೇವಾಲಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಜಂಟಿಯಾಗಿ ಘೋಷಿಸಿದರು.
ಒತ್ತುವರಿ: ದೇವಾಲಯ ಸುತ್ತಮುತ್ತಲಿನ ಸಾಕಷ್ಟು ಜಾಗ ಒತ್ತುವರಿಯಾಗಿದ್ದು, ಅಲ್ಲಿ ವಾಸದ ಮನೆಗಳು ನಿರ್ಮಾಣವಾಗಿವೆ. ಅವರ ಮನಮೊಲಿಸಲಾಗಿದ್ದು, ಜಾಗವನ್ನು ತೆರವು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರಿಗೆ ಬೇರೆಡೆ ಜಾಗ ಕೊಡಬೇಕಾಗಿದೆ. ಮಂಡ್ಲಿಯ ಇನ್ನೊಂದು ಸ್ಥಳದಲ್ಲಿ ದೇವಾಲಯಕ್ಕೆ ಸೇರಿದ 3 ಎಕರೆ 30 ಗುಂಟೆ ಸ್ಥಳವಿದೆ. ಇಲ್ಲಿ ಇವರಿಗೆ ಪರ್ಯಾಯ ಜಾಗ ನೀಡಬೇಕೇ ಎಂಬ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

