'ಸರ್ಕಾರಿ ಸೌಲಭ್ಯ ಎಲ್ಲರಿಗೂ ದೊರೆಯಲಿ'
ಕ.ಪ್ರ.ವಾರ್ತೆ, ಸಾಗರ, ಮೇ 29
ಇಲ್ಲಿನ ನಗರಸಭೆ ಆವರಣದಲ್ಲಿ ಆಧಾರ್ ಕಾರ್ಡ್ ಕೇಂದ್ರವನ್ನು ಮಂಗಳವಾರ ಶಾಸಕ ಕಾಗೋಡು ತಿಮ್ಮಪ್ಪ ತಾವು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಉದ್ಘಾಟಿಸಿದರು.
ಸಮಾಜದ ಎಲ್ಲರಿಗೂ ಸರ್ಕಾರಿ ಸೌಲಭ್ಯ ದೊರೆಯಬೇಕು. ಸರ್ಕಾರದ ಸೌಲಭ್ಯಕ್ಕೆ ಪೂರಕವಾಗುವಂತಹ ಕೆಲವು ಯೋಜನೆಗಳನ್ನು ಕಾಲಕಾಲಕ್ಕೆ ಜಾರಿಗೆ ತಂದಿರುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪ್ರಚಾರದ ಕೊರತೆಯಿಂದಾಗಿ ಜನರಿಗೆ ಇಂತಹ ಯೋಜನೆಗಳ ಬಗ್ಗೆ ಕನಿಷ್ಟ ಮಾಹಿತಿಯೂ ಸಿಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಸೌಲಭ್ಯವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಸಾಗರದಲ್ಲಿ ಯೋಜನೆಯ ಪ್ರಗತಿ ಕುಂಠಿತಗೊಂಡಿದ್ದು, ಅಂಚೆ ಇಲಾಖೆಯಲ್ಲಿ ಒಂದು ವಿಭಾಗ ತೆರೆಯಲಾಗಿದೆ. ನಗರ ಪ್ರದೇಶದ ನೂರಾರು ಜನ ಆಧಾರ್ ಕಾರ್ಡ್ ಅರ್ಜಿ ಪಡೆಯಲು ಬೆಳಿಗ್ಗಿನಿಂದ ಕಾಯುವ ಸ್ಥಿತಿ ಇದೆ. ಈ ಕಾರಣಕ್ಕಾಗಿ ಹೆಚ್ಚುವರಿಯಾಗಿ 5 ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಆಧಾರ್ ಕಾರ್ಡ್ ಸಿಬ್ಬಂದಿ ಮೋಹನ್ ಮಾತನಾಡಿ, ಪ್ರತಿದಿನ ಸಂಜೆ 5 ರಿಂದ 6 ಗಂಟೆಯವರೆಗೆ ಈ ಕೌಂಟರ್‌ನಲ್ಲಿ ಅರ್ಜಿ ನೀಡಿ, ಮಾರನೆ ದಿನ ಬೆಳಿಗ್ಗೆ ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕರಿಸಲಾಗುವುದು. ಒಬ್ಬರು ಆಧಾರ್ ಕಾರ್ಡ್ ನೋಂದಾವಣೆ ಮಾಡಲು ಕನಿಷ್ಟ 15 ನಿಮಿಷವಾಗುತ್ತದೆ. ನಿಗದಿಪಡಿಸಿರುವ 33 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ತಂದರೆ ನೋಂದಾವಣೆ ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದರು. ನಗರಸಭೆ ಸದಸ್ಯರಾದ ತೀ.ನ. ಶ್ರೀನಿವಾಸ್, ಸುರೇಶಬಾಬು, ಪರಿಮಳ ಎಂ., ಸಂತೋಷ ಶೇಟ್, ಜಿ.ಕೆ. ಭೈರಪ್ಪ, ಮಂಜೂರಾಲಿಖಾನ್, ಎನ್. ಶ್ರೀನಾಥ್, ರವಿ ಜಂಬಗಾರು, ಪೌರಾಯುಕ್ತ ಕೆ. ನರಸಿಂಹಮೂತರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

