ಕನ್ನಡದ ಕಂಪು ಹರಡಿದ ಮೆರವಣಿಗೆ
ಶಿವಮೊಗ್ಗ: ಕನ್ನಡದ ಕಂಪನ್ನು ಹರಡುವಲ್ಲಿ 58ನೇ ಕನ್ನಡ ರಾಜ್ಯೋತ್ಸವದ ಮೆರವಣಿಗೆ ಯಶಸ್ವಿಯಾಯಿತು.
ಶುಕ್ರವಾರ ಮುಂಜಾನೆ ನಗರದ ಸೈನ್ಸ್ ಮೈದಾನದಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ಶಾಲಾ ಮಕ್ಕಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಪಥಸಂಚಲನ ಹಾಗೂ ಕಲಾ ತಂಡಗಳ ಕುಣಿತ, ಇಲಾಖೆಗಳ ಸ್ತಬ್ಧ ಚಿತ್ರಗಳು ಸಾರ್ವಜನಿಕರ ಗಮನ ಸೆಳೆದವು. ಸೈನ್ಸ್ ಮೈದಾನದಿಂದ ಹೊರಟ ಸಾಂಸ್ಕೃತಿಕ ಮೆರವಣಿಗೆ ಗೋಪಿ ವೃತ್ತ ಮಾರ್ಗವಾಗಿ ಗಾರ್ಡ್ನ್ ಏರಿಯಾದಿಂದ ಡಿಎಆರ್ ಮೈದಾನದಲ್ಲಿ ಸಂಪನ್ನಗೊಂಡಿತು.
ಕಲಾ ತಂಡ, ಸ್ತಬ್ಧ ಚಿತ್ರ: ಸಹ್ಯಾದ್ರಿ ಮಹಿಳಾ ಕಲಾ ತಂಡದಿಂದ ವೀರಗಾಸೆ, ಡೊಳ್ಳುಕ ುಣಿತ ಹಾಗೂ ನಂದಿ ಧ್ವಜ ಕುಣಿತ, ಕೋಲಾಟ ಹಾಗೂ ಕೊಲಾ ಕುಣಿತ ಮೆರವಣಿಗೆಯಲ್ಲಿ ವಿಶೇಷವಾಗಿತ್ತು. ಅಲ್ಲದೆ, ಕೃಷಿ ಇಲಾಖೆಯಿಂದ ಆಧುನಿಕ ಬೇಸಾಯ ಪದ್ಧತಿಯ ಆಯಾಮಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳು, ಬಾಲ್ಯ ವಿವಾಹ ರದ್ಧತಿಯ ಸ್ತಬ್ಧಚಿತ್ರಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಿಕ್ಷಣ ನಮ್ಮ ಹಕ್ಕು. ಕೂಲಿ ಕೆಲಸ ಬೇಡ ಶಿಕ್ಷಣ ಬೇಕು ಎಂಬ ಘೋಷಣೆಯ ಭಿತ್ತಿಪತ್ರಗಳು, ರೇಷ್ಮೆ ಇಲಾಖೆಯಿಂದ ರೇಷ್ಮೆ ಗೂಡಿನ ಪ್ರಾತ್ಯಕ್ಷಿಕೆ ಹಾಗೂ ವಾರ್ತಾ ಇಲಾಖೆಯಿಂದ ಸರ್ಕಾರದ ಸಾಧನೆಗಳು, ಜಾನಪದ ಕಲಾವಿದರಿಂದ ರಾಜ್ಯೋತ್ಸವ ಗೀತೆಗಳು, ಆರೋಗ್ಯ ಇಲಾಖೆಯಿಂದ ಸ್ತನ್ಯಪಾನ ಕುರಿತ ಪ್ರಾತ್ಯಕ್ಷಿಕೆಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಿತವಾಗಿದ್ದವು.
ಕೆಎಸ್ಸಾರ್ಟಿಸಿಗೆ ಪ್ರಥಮ ಬಹುಮಾನ: ಇದೇ ಮೊದಲ ಬಾರಿಗೆ ಕೆಎಸ್ಸಾರ್ಟಿಸಿ ಜಿಲ್ಲಾ ಘಟಕ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಲ್ಲದೆ, ಸ್ತಬ್ಧಚಿತ್ರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿತು.
ಇಲಾಖೆಯ ಹೊಸ ಬಸ್ಗಳ ಭಾವಚಿತ್ರಗಳ ಅನಾವರಣದೊಂದಿಗೆ, ದ.ರಾ. ಬೇಂದ್ರೆ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ ಅವರ ಭಾವಚಿತ್ರಗಳು ಹಾಗೂ ಇಲಾಖೆಯ ಕನ್ನಡ ಕ್ರಿಯಾ ಸಮಿತಿ ಸದಸ್ಯರು ಶಿವಪ್ಪ ನಾಯಕ ಸೇರಿದಂತೆ ಹಲವಾರು ಮಹನೀಯರ ವೇಷ ಧರಿಸಿ ಸಾರ್ವಜನಿಕರ ಆಕರ್ಷಣೆ ಹೆಚ್ಚಿಸಿದರು. ನೆರೆದಿದ್ದ ಜನರಿಂದ ಚಪ್ಪಾಳೆ, ಶಿಳ್ಳೆಗಳು ಹರಿದು ಬಂದವು.
ರೇಷ್ಮೆ ಇಲಾಖೆ: ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಯ ಕುರಿತು ಹಾಗೂ ರೇಷ್ಮೆ ಹುಳುಗಳ ಗೂಡುಗಳ ಪ್ರಾತ್ಯಕ್ಷಿಕೆ, ನೂಲ ತೆಗೆಯುವ ಯಂತ್ರಗಳ ಮೂಲಕ ರೇಷ್ಮೆ ಬೆಳೆಯ ಕುರಿತು ಸಮಗ್ರ ಮಾಹಿತಿ ನೀಡಿತು. ಇದು ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು.
ಮೆರಣಿಗೆಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್, ನಗರಸಭೆ ಆಯುಕ್ತ ಕರಭಿಮಣ್ಣನವರ್, ತಹಸೀಲ್ದಾರ್ ಕೊಟ್ರೇಶ್, ನಗರಸಭೆ ಅಧ್ಯಕ್ಷೆ ಖುರ್ಷಿದ್ ಭಾನು, ಉಪಾಧ್ಯಕ್ಷೆ ರೇಖಾ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾಮಲ್ಲಿಕಾರ್ಜುನ, ಸದಸ್ಯ ಸುಭಾಷ್ ಮತ್ತಿತರರು ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

