ಶಿವಮೊಗ್ಗ

ಪ್ರೇರಕರ ಸೇವೆ ಕಾಯಂಗೆ ಮೀಗಾ ಒತ್ತಾಯ

Published On :

ಶಿವಮೊಗ್ಗ: ಕಳೆದ 25 ವರ್ಷದಿಂದ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ಪ್ರೇರಕರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಯಾವುದೇ ಕನಿಷ್ಠ ಸೌಲಭ್ಯ ಸಿಗುತ್ತಿಲ್ಲ. ಇವರನ್ನು ಕಾಯಂ ಮಾಡಿ ಎಂದು ಕೆಪಿಸಿಸಿ ಕಿಸಾನ್ ಸೆಲ್ ಉಪಾಧ್ಯಕ್ಷ ಸಚಿನ್ ಮೀಗಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಸರ್ಕಾರ ಒಟ್ಟಾರೆಯಾಗಿ ನಿಗದಿಪಡಿಸಿರುವ ಕನಿಷ್ಠ ವೇತನಕ್ಕಿಂತಲೂ ಅತ್ಯಲ್ಪ ಸಂಬಳವನ್ನು ಪಡೆಯುತ್ತಾ ಕರ್ತವ್ಯ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇವರೆಲ್ಲರೂ ಪ್ರಸ್ತುತ ಸರಿಸುಮಾರು 28 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸುತ್ತಿರುವುದಲ್ಲದೆ, ಕೆಲವರು ನಿವೃತ್ತಿ ಅಂಚಿಗೆ ಬಂದಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಈ ಎಲ್ಲಾ ಅರಣ್ಯ ಪ್ರೇರಕರ ಸೇವೆ ಇಲಾಖೆಗೆ ಅವಶ್ಯವಿರುವ ಕಾರಣದಿಂದಾಗಿ ಈ ಎಲ್ಲಾ ಅರಣ್ಯ ಪ್ರೇರಕರನ್ನು ಇಲಾಖೆಯಲ್ಲಿ ಗ್ರೂಪ್-ಡಿ ಹುದ್ದೆಯಲ್ಲಿ ಸಕ್ರಮಗೊಳಿಸಬೇಕೆಂದು 2007ರಲ್ಲಿಯೇ ಶಿಫಾರಸು ಮಾಡಿದ್ದರು. 2013ರಲ್ಲಿಯೂ ಸಹ ಮತ್ತೊಮ್ಮೆ ಅವರ ಶಿಫಾರಸುನ್ನು ಪುರಸ್ಕರಿಸಲು ಪುನರ್ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರವು ಪ್ರಸ್ತುತ 2013ರ ಫೆ.15ರ ರಾಜ್ಯಪತ್ರದಲ್ಲಿ ರಾಜ್ಯದಲ್ಲಿನ ವಿವಿಧ ಸಂಸ್ಥೆಗಳಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಹಿನ್ನೆಲೆಯಲ್ಲಿ ಸಕ್ರಮಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿರುತ್ತದೆ.
ಆದ್ದರಿಂದ ಮಾನವೀಯತೆ ಹಿತದೃಷ್ಟಿಯಿಂದಲೂ ಮತ್ತು ಇವರು ಅವಲಂಬಿತ ಕುಟುಂಬದ ಸಂರಕ್ಷಣಾ ಹಿನ್ನೆಲೆಯನ್ನು ವಿಶೇಷವಾಗಿ ಸರ್ಕಾರ ಗಮನಕ್ಕೆ ತಂದುಕೊಂಡು ಈ ಎಲ್ಲಾ ಅರಣ್ಯ ಪ್ರೇರಕರನ್ನು ಅರಣ್ಯ ಇಲಾಖೆಯ ಶಿಫಾರಸು ಪುರಸ್ಕರಿಸಿ ಸಕ್ರಮಕಾತಿಗೊಳಿಸಬೇಕು. ಕೈಗೊಳ್ಳುತ್ತಿರುವ ಸಕ್ರಮಾತಿ ರೀತಿಯನ್ನು ಈ ವೃಂದದವರಿಗೂ ಅನುಸರಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.