ಆಹಾರ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶ: ಶ್ರೀಧರ
ಶಿರಾಳಕೊಪ್ಪ: ಸರ್ಕಾರದ ಉದ್ದೇಶ ಬಡವರಿಗೆ ಆಹಾರದ ಭದ್ರತೆ ಒದಗಿಸುವುದಾಗಿದ್ದು, ಯಾವ ಕುಟುಂಬ ಪಡಿತರ ಚೀಟಿಯನ್ನು ಹೊಂದಿಲ್ಲವೋ ಅಂತಹವರನ್ನು ಗುರುತಿಸಿ ಹೊಸದಾಗಿ ಪಡಿತರ ಚೀಟಿ ಕೊಡುವ ಕಾರ್ಯಕ್ಕೆ ಸರ್ಕಾರ ಪರವಾನಗಿ ಕೊಟ್ಟಿದೆ. ಈ ನಿಟ್ಟನಲ್ಲಿ ಈ ಕಾರ್ಯ ಇಂದಿನಿಂದಲೇ ಪ್ರಾರಂಭವಾಗಲಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಧರ ತಿಳಿಸಿದರು.
ಶಿರಾಳಕೊಪ್ಪ ಪಟ್ಟಣದ ಪಪಂ ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಆಯಾ ವಾರ್ಡ್‌ಗಳಿಗೆ ತನಖಾಧಿಕಾರಿಯನ್ನು ನೇಮಿಸಲಾಗಿದೆ. ಈ ಬಾರಿ ರೇಶನ್ ಕಾರ್ಡ್ ಪಡೆಯುವ ವ್ಯಕ್ತಿಗಳ ಮನೆಗೆ ತನಿಖಾಧಿಕಾರಿಗಳು ಭೇಟಿ ನೀಡಲಿದ್ದಾರೆ.
ಹಾಗೆಯೇ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಪಂ ಕಾರ್ಯದರ್ಶಿ ಮತ್ತು ಗ್ರಾಮಲೆಕ್ಕಿಗರು ಆ ಕಾರ್ಯ ನಿರ್ವಹಿಸಲಿದ್ದು, ಅವರು ಕೊಡುವ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಬಾರಿ ತನಿಖಾಧಿಕಾರಿಗಳನ್ನು ನೇಮಿಸಿರುವುದು ಈ ವರೆಗೆ ಮಧ್ಯವರ್ತಿಗಳು ಹಣ ಪಡೆದು ಜನರನ್ನು ಸತಾಯಿಸುತ್ತಿದ್ದರು. ಆ ಕಾಟ ತಪ್ಪಿಸಲು ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ ಎಂದ ಅವರು ರೇಶನ್ ಕಾರ್ಡ್ ಕೊಡುವಾಗ ಸರ್ಕಾರದ 14 ಮಾನದಂಡಗಳು ಇದ್ದು, ಆ ಆಧಾರದ ಮೇಲೆ ಹೊಸ ರೇಶನ್ ಕಾರ್ಡ್ ಕೊಡಲಾಗುವುದು ಎಂದರು. ಶಿರಾಳಕೊಪ್ಪ ಪಟ್ಟಣದಲ್ಲಿ ಹೊಸ,ಕಾರ್ಡ ಬೇಕು ಎಂದು 780 ಹೊಸ ಅರ್ರ್ಜಿಗಳು ಬಂದಿವೆ. ಅವರ ಮನೆಮನೆಗೆ ಹೋಗಿ ಸೂಕ್ತ ಮಾಹಿತಿ ಪಡೆದು ತನಿಖೆ ಮಾಡಿ ಕಾರ್ಡ್ ಕೊಡಲಾಗುವುದು ಎಂದು ತಿಳಿಸಿದರು.
ಪಪಂ ಸದಸ್ಯ ಸಮಿಉಲ್ಲಾ ಹಾಗೂ ಪಪಂ ಅಧಿಕಾರಿಗಳು, ಪಟ್ಟಣದ ಪ್ರಮುಖರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

