ಶಿವಮೊಗ್ಗ

ಇಂದಿನಿಂದ ವಿದ್ಯುತ್ ವ್ಯತ್ಯಯ

Published On :

ಶಿರಾಳಕೊಪ್ಪ: ಪಟ್ಟಣದ ಎಚ್.ಕೆ. ರಸ್ತೆ ಅಗಲೀಕರಣ ನಡೆಯುತ್ತಿರುವ ಕಾರಣ ಅಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲಾಗುತ್ತಿದ್ದು, ನ.11ರಿಂದ 13ರ ವರೆಗೆ ಮೂರು ದಿನ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಹೇಳಿಕೆಯಲ್ಲಿ ತಿಳಿಸಿದೆ. ಶಿರಾಳಕೊಪ್ಪ ಉಪ- ವಿಭಾಗದ 110-11ಕೆವಿ ಸ್ಟೇಷನ್‌ನಿಂದ ಈ ಕಾರ್ಯ ನಡೆಯುತ್ತಿದ್ದು, 11ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೂರೂ ದಿನಗಳು ವ್ಯತ್ಯಯ ಉಂಟಾಗಲಿದೆ.
ಶಿರಾಳಕೊಪ್ಪ 11ಕೆವಿ ಮಾರ್ಗದಿಂದ ಸರಬರಾಜು ಆಗುತ್ತಿರುವ ದೇವಿಕೊಪ್ಪ, ಬಳ್ಳಿಗಾವಿ, ಚಿಕ್ಕಜಂಬೂರ, ಸುಣ್ಣದ ಕೊಪ್ಪ ಹಾಗೂ ಮಲ್ಲೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಇರುವಂತಹ ಎಲ್ಲ ಗ್ರಾಮಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಪ್ರದರ್ಶನ ಇಂದು
ಶಿವಮೊಗ್ಗ: ಡಾ. ಗುಲ್ವಾಡಿಯವರ ಜನ್ಮ ಶತಮಾನೋತ್ಸವ ಸಮಿತಿ ನ.11ಮತ್ತು 12ರಂದು ಡಾ ಗುಲ್ವಾಡಿ ಅವರ ಸ್ಮರಣಾರ್ಥ ಇದೇ ಪ್ರಥಮ ಬಾರಿಗೆ ಅಖಿಲ ಭಾರತ ಮಟ್ಟದ ಛಾಯಚಿತ್ರ ಪ್ರದರ್ಶನ ಏರ್ಪಡಿಸಿದೆ. ಅಂತರಾಷ್ಟ್ರೀಯ ಛಾಯಾಚಿತ್ರಗ್ರಾಹಕರ ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ. ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಸ್ಥಳೀಯ ಸ್ಪರ್ಧಾಳುಗಳು ಪ್ರವೇಶ ಪತ್ರವನ್ನು ಸಮಿತಿಯ ಕಚೇರಿಯಲ್ಲಿ ಪಡೆಯಬಹುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 08182-223753.
ತಾಲೂಕು ಮಟ್ಟದ ಪೈಕಾ ಕ್ರೀಡಾಕೂಟ
ಶಿವಮೊಗ್ಗ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನ. 11 ಮತ್ತು 12ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಶಿವಮೊಗ್ಗ ತಾಲೂಕು ಮಟ್ಟದ ಪೈಕಾ (ಗ್ರಾಮೀಣ) ಕ್ರೀಡಾಕೂಟ ಏರ್ಪಡಿಸಿದೆ. ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ  ಕ್ರೀಡಾಪಟುಗಳು ನಿಗಧಿಪಡಿಸಿದ ಸ್ಪರ್ಧೆಗಳ ದಿನಾಂಕಗಳಂದು ಬೆಳಗ್ಗೆ 9 ಗಂಟೆಯೊಳಗಾಗಿ ಸೂಚಿಸಿದ ಸ್ಥಳದಲ್ಲಿ ವರದಿ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಗಳು ಸ್ಥಳ ಮತ್ತು ವಯಸ್ಸಿನ ದೃಢೀಕರಣ ಪತ್ರವನ್ನು ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದು ಕ್ರೀಡಾದಿನದಂದು ಹಾಜರುಪಡಿಸಬೇಕು. ವಿವರಗಳಿಗಾಗಿ ದೂ.08182-223328ನ್ನು ಸಂಪರ್ಕಿಸಬಹುದಾಗಿದೆ.

ಸ್ವಾರ್ಥ ರಹಿತ ಸೇವೆಯಿಂದ ನೆಮ್ಮದಿ: ರಾಮಚಂದ್ರಪ್ಪ
ಹೊಸನಗರ: ಸ್ವಾರ್ಥರಹಿತ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ ಎಂದು ಶ್ರೀ ನಾರಾಯಣಗುರು ಈಡಿಗ ಸಮಾಜದ ಅಧ್ಯಕ್ಷ ವಕೀಲ ಕೆ.ವೈ. ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹೊಂಬುಜದಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಸೇವೆ ಎಂಬುದೇ ಪವಿತ್ರವಾದದ್ದು. ಅದರಲ್ಲೂ ಸರ್ಕಾರಿ ಕೆಲಸದಲ್ಲಿರುವ ಅಧಿಕಾರಿಗಳ ಸೇವೆಗೆ ಹೆಚ್ಚಿನ ಜವಾಬ್ದಾರಿ ಇದೆ. ಅದನ್ನರಿತು ಕಾರ್ಯನಿರ್ವಹಿಸಿದಲ್ಲಿ ಸಮಾಜ ಪ್ರಗತಿಯತ್ತ ಹೆಜ್ಜೆ ಇರಿಸುತ್ತದೆ ಎಂದರು.
ಗಮನಾರ್ಹ ಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮ ಲೆಕ್ಕಿಗ ಉಪೇಂದ್ರನಾಯ್ಕ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪ ತಹಸೀಲ್ದಾರ್ ಪದ್ಮಾಕ್ಷಿ, ಹುಂಚಾ ಸಹಕಾರ ಸಂಘದ
ಅಧ್ಯಕ್ಷ ಪ್ರೇಮ್‌ಕುಮಾರ್, ಪಿಡಿಒ ಚಂದ್ರಶೇಖರ್, ಜಯಪ್ಪಾಚಾರ್, ವೈ. ಷಣ್ಮುಕಪ್ಪ, ದೇವೇಂದ್ರಪ್ಪ, ಸತೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.