ಮಾನಸಿಕ ಸ್ಥೈರ್ಯಕ್ಕೆ ಆಧ್ಯಾತ್ಮ ವಿಜ್ಞಾನ ನೆರವು: ಶ್ರೀ
ಸೊರಬ: ಮಾನಸಿಕ ಸ್ಥೈರ್ಯಕ್ಕೆ ಆಧ್ಯಾತ್ಮ ವಿಜ್ಞಾನ ನೆರವಾಗಬಲ್ಲದೆ ವಿನಃ ಆಧುನಿಕ ವಿಜ್ಞಾನವಲ್ಲ ಎಂದು ಸಿರ್ಸಿ ಸೋಂದ ಸ್ವರ್ಣವಲ್ಲಿ ಮಹಾ ಸಂಸ್ಥಾನಮಠದ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ತಿಳಿಸಿದರು.
ಪಟ್ಟಣದ ಸೀತಾರಾಮಚಂದ್ರ ದೇವಾಲಯದ ಆವರಣದಲ್ಲಿ ಸೋಮವಾರ ಸಂಜೆ ನಡೆದ ಶ್ರೀಮದ್ಭಾಗವದ್ಗೀತಾ ಅಭಿಯಾನ, ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿ ಇವರ ಆಶ್ರಯದ ಶ್ರೀಮದ್ಭಗವದ್ಗೀತಾ ಪುನಶ್ಚೇತನ ಅಭಿಯಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಧ್ಯಾತ್ಮ ವಿಜ್ಞಾನದ ಮೂಲಕ ನೈತಿಕ ಅಧಃ ಪತನದ ತಡೆ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಭಗವಂತನು ಹಾಡಿದ ಭಗವದ್ಗೀತೆಯ ವಾಚನ ಜನಸಾಮಾನ್ಯರೆಲ್ಲರಿಗೂ ನೆರವಾಗಬಲ್ಲದು ಎಂದರು.
ವೇದಿಕೆಯಲ್ಲಿದ್ದ ತಾಲೂಕು ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ನಮ್ಮ ಬದುಕಿನ ಎಲ್ಲ ಸ್ತರಗಳಲ್ಲೂ ನೆರಳಾಗಿ, ಕಷ್ಟದ ವೇಳೆ ಸಾಂತ್ವನ ನೀಡುವವಳು ಹೆತ್ತ ತಾಯಿ ಮಾತ್ರ, ಹಾಗಾಗಿಯೆ ಮನುಷ್ಯನ ಅದ್ಭುತ ದೇಹದ ಸದ್ವಿನಯಕ್ಕೆ ಈ ಗೀತೆ ಎಲ್ಲ ಸ್ತರಗಳಲ್ಲೂ ಬದುಕಿಗೆ ನೆರವಾಗುವುದರಿಂದ ಗೀತೆಯನ್ನು ತಾಯಿ ಎಂದು ಕರೆಯಲಾಗಿದೆ ಎಂದರು.
ಜಡೆ ಸಂಸ್ಥಾನ ಮಠದ ಡಾ.ಮಹಾಂತ ಶ್ರೀಗಳು, ಕ್ಯಾಸನೂರು ಗುರು ಬಸವ ದೇವರ ಮಠದ ಗುರುಬಸವ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಪಾಲ್ಗೊಂಡಿದ್ದರು. ಅಭಿಯಾನದ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಪಿ. ಹೆಗಡೆ, ತಾಲೂಕು ಸಮಿತಿ ಅಧ್ಯಕ್ಷ ದಿನಕರ ಭಟ್ ಭಾವೆ, ಸಂಚಾಲಕ ಮಹೇಶ್ ಗೋಖಲೆ ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಅಧ್ಯಕ್ಷತೆ ವಹಿಸಿದ್ದರು.
ಸಿರಿಗಂಧ ಮಹಿಳಾ ಸಂಘ, ವಿಠಲ ರುಖಮಾಯಿ ಮಹಿಳಾ ಸಂಘ, ಸ್ವಾಮಿ ವಿವೇಕಾನಂದ, ಲಯನ್ಸ್ ಸಂಸ್ಥೆ ಶಾಲಾ ಮಕ್ಕಳು, ಬಾಲೆ ಮಾನಸ ನಾಡಿಗ್ ಗೀತ ಪ್ರವಚನ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

