16ರಂದು ಅಂಚೆ ಚೀಟಿ ವಿನ್ಯಾಸ ಚಿತ್ರಕಲಾ ಸ್ಪರ್ಧೆ
ಶಿವಮೊಗ್ಗ: ಭಾರತೀಯ ಅಂಚೆ ಇಲಾಖೆ ಮಕ್ಕಳ ದಿನಾಚರಣೆ ಅಂಗವಾಗಿ ನ.16ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಕೋಟೆ ರಸ್ತೆಯಲ್ಲಿರುವ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಅಂಚೆ ಚೀಟಿ ವಿನ್ಯಾಸ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ವ್ಯಾಸಂಗ ದೃಢೀಕರಣ ಪತ್ರ ಅಥವಾ ತಮ್ಮ ಶಾಲೆಯಿಂದ ಕೊಡಲ್ಪಟ್ಟ ಪರಿಚಯ ಪತ್ರವನ್ನು ಸ್ಪರ್ಧೆಯ ಸಮಯದಲ್ಲಿ ಹಾಜರು ಪಡಿಸಬೇಕು. 4ನೇ ತರಗತಿವರೆಗೆ, 5ರಿಂದ 8ನೇ ತರಗತಿ ಮತ್ತು 9ರಿಂದ 12ನೇ ತರಗತಿವರೆಗೆ ಸ್ಪರ್ಧಾಳುಗಳನ್ನು 3 ಗುಂಪುಗಳನ್ನಾಗಿ ವಿಂಗಡಿಸಲಾಗುವುದು.
ಸ್ಪರ್ಧಾರ್ಥಿಗಳಿಗೆ ಇಲಾಖೆಯಿಂದಲೇ ಡ್ರಾಯಿಂಗ್ ಶೀಟ್ ನೀಡಲಾಗುವುದು. ಆದರೆ, ಚಿತ್ರ ಬರೆಯಲು ಬೇಕಾಗುವ ಎಲ್ಲಾ ರೀತಿಯ ಉಪಕರಣಗಳನ್ನು ವಿದ್ಯಾರ್ಥಿಗಳೇ ತರಬೇಕು. ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮೊದಲ 3 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 3 ಸಾವಿರ ರುಪಾಯಿ, ದ್ವಿತೀಯ 2 ಸಾವಿರ ರುಪಾಯಿ ಹಾಗೂ ತೃತೀಯ ಬಹುಮಾನ 1 ಸಾವಿರ ರುಪಾಯಿ ನಗದು ನೀಡಲಾಗುವುದು ಎಂದು ಅಂಚೆ ಮಾರುಕಟ್ಟೆ ನಿರ್ವಾಹಕ ವಿ. ಶಶಿಧರ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182222516.
17ರಂದು ರಕ್ತದಾನ ಶಿಬಿರ
ಸಾಗರ: ಈಚೆಗೆ ಅಪಘಾತದಲ್ಲಿ ನಿಧನರಾದ ಇಲ್ಲಿನ ಸಂತ ಜೋಸೆಫರ ದೇವಾಲಯದ ಸಹಾಯಕ ಧರ್ಮಗುರುಗಳಾದ ವಂದನೀಯ ಸ್ವಾಮಿ ಜಾನ್ ಜಸ್ಸಿ ಸಿಕ್ವೇರಾ ಅವರ ಸ್ಮರಣಾರ್ಥ ಮದರ್ ತೆರೇಸಾ ಯುವಜನ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘ, ರೆಡ್ಕ್ರಾಸ್, ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರ ಇವರ ಆಶ್ರಯದಲ್ಲಿ ನ.17ರಂದು ಬೆಳಿಗ್ಗೆ 10-30ರಿಂದ ಮಧ್ಯಾಹ್ನ 2-30ರವರೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂತ ಜೋಸೆಫರ ದೇವಾಲಯದ ಧರ್ಮ ಗುರುಗಳಾದ ಫಾದರ್ ವೀನಸ್ ಪ್ರವೀಣ್, ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಬದ್ರಿಯ ಮಸೀದಿಯ ಧರ್ಮ ಗುರುಗಳಾದ ಅಬ್ದುಲ್ ರೆಹಮಾನ್ ಬಕವಿ, ಸಂತ ಜೋಸೆಫರ ದೇವಾಲಯದ ಸಹಾಯಕ ಧರ್ಮಗುರುಗಳಾದ ಪಿಯುಸ್ ಡಿಸೋಜ, ಪಾಲ್ಗೊಳ್ಳಲಿದ್ದಾರೆ.
ಧರ್ಮಗುರುಗಳು (ದೂ. 08183 226421), ಟೋನಿ ಡಿಸೋಜ (ಮೊ. 9900721755), ಜಾನ್ ಡಿಸೋಜ (ಮೊ. 9900722835) ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

