ಅರಣ್ಯ ಭೂಮಿ ಅತಿಕ್ರಮಣ: 4 ಎಕರೆ ಅಡಕೆ ತೋಟ ನೆಲಸಮ
ಕ.ಪ್ರ.ವಾರ್ತೆ ಟಿ ಹೊಸನಗರ ಟಿ ನ.13
ಹೈಕೋರ್ಟ್ ಆದೇಶದ ಮೇರೆಗೆ ತ್ರಿಣಿವೆ ಗ್ರಾಮದ ಅರಣ್ಯ ಅತಿಕ್ರಮಣ ಭೂಮಿಯನ್ನು ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಅಡಕೆ ತೋಟ ತೆರವುಗೊಳಿಸಲಾಯಿತು.
ತ್ರಿಣಿವೆ ಗ್ರಾಮದ ಸ.ನಂ. 106ರಲ್ಲಿ ಈರಾಗೋಡು ಶಂಕ್ರಪ್ಪ ಗೌಡ ಎಂಬುವವರು ಅತಿಕ್ರಮಣ ಮಾಡಿದ್ದ 4.10 ಎಕರೆಯಲ್ಲಿ ಫಸಲು ಬರುತ್ತಿದ್ದ ಅಡಕೆ ತೋಟವನ್ನು ಡಿಎಫ್ಒ ಪಿ.ಪಿ. ಬ್ಯಾನರ್ಜಿ ಹಾಗೂ ಡಿವೈಎಸ್ಪಿ ಚೆನ್ನಪ್ಪ ನೇತೃತ್ವದಲ್ಲಿ ಬುಧವಾರ ಮುಂಜಾನೆ 5 ಗಂಟೆಗೆ ತೆರವುಗೊಳಿಸಲಾಯಿತು.
ಈರಾಗೋಡು ಶಂಕರಪ್ಪ ಗೌಡ ಎಂಬುವವರು ಶರಾವತಿ ನದಿ ತೀರದ ಬೆಣಕಿಯ ವಂದಗದ್ದೆ ದಟ್ಟ ಕಾಡಿನ ಪ್ರದೇಶ ಕಡಿದು ಅಡಕೆ ತೋಟವನ್ನು ಮಾಡಿದ್ದು, ಕರ್ನಾಟಕ ಅರಣ್ಯ ಕಾಯ್ದೆ ಅನ್ವಯ ಅರಣ್ಯ ಭೂಮಿ ಅತಿಕ್ರಮಣ ಮೊಕದ್ದಮೆಯು 2000ದಲ್ಲಿ ದಾಖಲು ಮಾಡಲಾಗಿತ್ತು. ಅತಿಕ್ರಮಣ ಸಂಬಂಧ ಹೈಕೋರ್ಟ್ನಲ್ಲಿ ವಕೀಲ ಎಲ್ಲಪ್ಪ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಕೇಸನ್ನು ಸಹ ದಾಖಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಅಕ್ರಮ ಅಡಕೆ ತೋಟದ ತೆರವಿಗೆ ಆದೇಶ ನೀಡಿತ್ತು. ಆದೇಶ ಅನ್ವಯ ಬುಧವಾರ ಬೆಳಗ್ಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸುಮಾರು 400 ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆ ನಡೆಯಿತು.
ಇದರಲ್ಲಿ ಎಸಿಎಫ್ ಆಲ್ವಿನ್, ವಲಯ ಅರಣ್ಯಾಧಿಕಾರಿ ಪ್ರಕಾಶ್, ಮೃತ್ಯುಂಜಯಪ್ಪ, ಮುರುಗೇಂದ್ರಪ್ಪ ಹಾಗೂ ಉಪ ವಲಯ ಅರಣ್ಯಾಧಿಕಾರಿ ದೊಡ್ಡಮನಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

