ಶಿವಮೊಗ್ಗ

ಬ್ರಾಹ್ಮಣ ಮಹಾಸಭಾ ಚುನಾವಣಾ ಪ್ರಚಾರ ಜೋರು

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ನ.15
ಜಿಲ್ಲಾ ಬ್ರಾಹ್ಮಣ ಮಹಾಸಭಾ ಚುನಾವಣಾ ಕಣದಲ್ಲಿ ಭಾರಿ ಸ್ಪರ್ಧೆ ಕಂಡುಬಂದಿದ್ದು, ಬಿರುಸಿನ ಪ್ರಚಾರ ನಡೆದಿದೆ.
ಈ ಮಧ್ಯೆ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನಾಮಪತ್ರ ವಾಪಸ್ ಪಡೆದು ಕಣದಿಂದ ದೂರ ಸರಿದಿದ್ದಾರೆ. ಆದರೆ, ಕಣದಲ್ಲಿರುವ ಅಭ್ಯರ್ಥಿಗಳು ಸಿಂಡಿಕೇಟ್ ರಚಿಸಿಕೊಂಡು ಸ್ಪರ್ಧೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.
ಹಿಂದೆಂಗಿಂತಲೂ ಅತ್ಯುತ್ಸಾಹದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಭ್ಯರ್ಥಿಗಳು ಮತದಾರರ ಮನೆಮನೆ ತಲುಪಿ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ನವೆಂಬರ್ 9ರಂದು ನಾಮಪತ್ರ ಸಲ್ಲಿಕೆಯಾಗಿದ್ದು, 10ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಿತು. ಒಂದು ನಾಮಪತ್ರ ತಿರಸ್ಕೃತವಾಯಿತು. ಅಂತಿಮವಾಗಿ ಶಿವಮೊಗ್ಗ ಕ್ಷೇತ್ರದ 11 ಸ್ಥಾನಗಳಿಗೆ 23 ಮಂದಿ ಕಣದಲ್ಲಿದ್ದಾರೆ. ಉಳಿದಂತೆ ಶಿಕಾರಿಪುರ ಕ್ಷೇತ್ರದಿಂದ ಈಗಾಗಲೇ ಅವಿರೋಧ ಆಯ್ಕೆ ನಡೆದಿದ್ದರೆ, ಭದ್ರಾವತಿ, ತೀರ್ಥಹಳ್ಳಿ, ಸೊರಬ, ಸಾಗರ, ಶಿವಮೊಗ್ಗ ಗ್ರಾಮಾಂತರ, ಹೊಸನಗರ ಕ್ಷೇತ್ರದಿಂದ ತಲಾ ಇಬ್ಬರು ಕಣದಲ್ಲಿದ್ದಾರೆ.
ಈ ಹಿಂದೆ ಸ್ಪರ್ಧಿಸಿ ಗೆಲವು ಪಡೆದ ಅನೇಕರು ಈ ಬಾರಿ ಬಾರಿ ಸ್ಪರ್ಧೆ ಎದುರಿಸುತ್ತಿದ್ದಾರೆ. ಅದರಲ್ಲೂ ಮಹಾಸಭಾದಲ್ಲಿ ಪ್ರಮುಖವಾಗಿ ಹೊಸಬರಿಗೆ ಅವಕಾಶ ಕೊಡಿ ಎಂಬ ಒಂದು ತಂತ್ರಗಾರಿಕೆ ಮನೆಮನೆ ಮುಟ್ಟಿದ್ದು, ಇದು ಹಳೆಯ ಅಭ್ಯರ್ಥಿಗಳನ್ನು ತಬ್ಬಿಬ್ಬುಮಾಡಿದೆ.
ಈ ಹಿಂದಿನ ಕಾರ್ಯಕಾರಿ ಸಮಿತಿಯಲ್ಲಿ ಖಜಾಂಚಿಯಾಗಿದ್ದ ಕೆ.ಬಿ. ಪ್ರಸನ್ನಕುಮಾರ್ ಈ ಬಾರಿ ಸ್ಪರ್ಧೆಗಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಈ ಮುಂಚೆ “OÚ«Ú­sÚ®ÚúڒOæQ ಪ್ರತಿಕ್ರಿಯೆ ನೀಡಿದ್ದ ಅವರು, ಶಾಸಕನಾಗಿರುವುದು ಸೇರಿದಂತೆ ಸಂಘಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ಕಾರಣ ಮತ್ತೆ ಕಾರ್ಯಕಾರಿ ಸಮಿತಿ ಪ್ರವೇಶಿಸಿದರೆ ಸಮಯ ಕೊಡುವುದು ಕಷ್ಟವಾಗುತ್ತದೆ. ಹೀಗಾಗಿ ಕಣದಿಂದ ದೂರ ಇರುವುದೇ ಒಳಿತೆಂದಿದ್ದರು. ಆದರೆ, ಆತ್ಮೀಯರ ಒತ್ತಡದಿಂದಾಗಿ ನಾಮಪತ್ರವನ್ನೂ ಸಲ್ಲಿಸಿದರು. ಅಂತಿಮವಾಗಿ ನಾಮಪತ್ರ ವಾಪಸ್ ಪಡೆಯುವ ಅವಕಾಶವನ್ನು ಬಳಸಿಕೊಂಡು ತಮ್ಮ ಅಭ್ಯರ್ಥನದಿಂದ ದೂರ ಸರಿದರು. ನ.17ರಂದು ಬೆಳಗ್ಗೆ 10.30ರಿಂದ 2.30ರ ವರೆಗೆ ಮತದಾನ ನಡೆಯಲಿದ್ದು, ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ನಡೆಯುವುದು.





ಒಟ್ಟಿಗೆ ಕರೆದೊಯ್ಯುವವರಿಗೆ ಮತಹಾಕಿ


ಶುಕ್ರವಾರ ಸಂಜೆ ನಗರದ ವಿಪ್ರ ಟ್ರಸ್ಟ್ನಲ್ಲಿ ಆಯೋಜನೆಗೊಂಡಿದ್ದ ಚುನಾವಣೆಗೆ ಸಂಬಂಧಪಟ್ಟ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಬಡವ, ಮಧ್ಯಮ, ಶ್ರೀಮಂತರನ್ನು ಒಂದೇ ದೃಷ್ಟಿಯಲ್ಲಿ ಕಂಡು, ಸಂಘಟನೆ ಬೆಳೆಸುವವರಿಗೆ ಮತಹಾಕಿ ಎಂದು ಮತದಾರರಲ್ಲಿ ವಿನಂತಿಸಿದರು.
ಯಾವುದೇ ಷರತ್ತಿಲ್ಲದೇ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಬೇಕೆಂಬ ಅಪೇಕ್ಷೆ ಇತ್ತು. ಆದರೆ, ಪ್ರಯತ್ನ ಫಲಕಾರಿಯಾಗಲಿಲ್ಲ ಎಂದ ಅವರು, ಗೆಲುವು ಸಾಧಿಸಿದ ಕಾರ್ಯಕಾರಿ ಮಂಡಳಿಯಿಂದ ಸಮಾಜದ ಬಡವರನ್ನು ಮೇಲೆ ತರುವ ಪ್ರಯತ್ನ ಗುರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಎಲ್.ಟಿ.ಹೆಗಡೆ, ರಾಜಕೀಯ ಪಕ್ಷಗಳು ಸಹಕಾರ ಸಂಘ, ಸಭಾಗಳಲ್ಲಿ ಬರುವುದು ಬೇಡ. ಒಂದು ವೇಳೆ ಬಂದರೆ ಮತದಾರರು ಸಮರ್ಥವಾಗಿ ಉತ್ತರ ಕೊಡಿ ಎಂದು ಕರೆ ನೀಡಿದರು.
ಅರಸಾಳು ರಂಗನಾಥ ಮಾತನಾಡಿ, ಆರೋಗ್ಯಕರ ಚುನಾವಣೆ ನಡೆಯಲಿ. ಬ್ರಾಹ್ಮಣ ಮಹಾಸಭಾವು ಆರ್ಥಿಕವಾಗಿ ಸ್ವಾವಲಂಬಿಯಾಗಿ ಸಮಾಜದ ಬಡವರ ಪರವಾಗಿ ಮಂಗಳಕರ ಯೋಜನೆ ಜಾರಿಗೆ ತರಲಿ ಎಂದರು. ನಾರಾಯಣರಾವ್ ಸೇರಿದಂತೆ ಸಮಾಜದ ಪ್ರಮುಖರು ಹಾಜರಿದ್ದರು. ಚುನಾವಣಾ ಸ್ಪರ್ಧಿಗಳಾದ ಎಚ್.ಕೆ. ಶೇಷಪ್ಪ, ಮ.ಸ.ನಂಜುಂಡಸ್ವಾಮಿ, ಶುಭಾ ಚಂದ್ರಶೇಖರ್, ಮಧುಮತಿ ಮತ್ತಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.