ಮೀನುಗಾರಿಕೆ ತರಬೇತಿಗೆ ಅರ್ಜಿ
ಶಿವಮೊಗ್ಗ: ಜಿಲ್ಲೆಯ ಬಿ.ಆರ್. ಪ್ರಾಜೆಕ್ಟ್ನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಒಳನಾಡು ಮೀನುಗಾರಿಕೆ ತರಬೇತಿ ನೀಡಲು ಎಸ್ಸೆಸ್ಸೆಲ್ಸಿ ಉತ್ತೀರ್ಣ ಹಾಗೂ ಅನುತ್ತೀರ್ಣ ಗ್ರಾಮೀಣ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಗೆ 18ರಿಂದ 40 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. 2 ತಿಂಗಳಲ್ಲಿ ಮೀನು ಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಬಲೆ ಹೆಣೆಯುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವ ಬಗ್ಗೆ ಮಾಸಿಕ ರು. 1,000 ಶಿಷ್ಯ ವೇತನದೊಂದಿಗೆ ತರಬೇತಿ ನೀಡಲಾಗುವುದು. ಮಾಹಿತಿಗೆ ದೂ-08282-256252ಗೆ ಸಂಪರ್ಕಿಸಬಹುದು.
ಜಿನರಾಜ್ಗೆ ಕಸಾಪ ಸಂತಾಪ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು, ಖ್ಯಾತ ಫೋಟೋಗ್ರಾಫರ್ ಜಿನರಾಜ್ ಹೆಗಡೆ ಅವರ ಗೌರವಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ಸೂಚಕ ಸಭೆ ಏರ್ಪಡಿಸಿತ್ತು. ಖ್ಯಾತ ಸಾಹಿತಿ ಡಾ. ಪದ್ಮಪ್ರಸಾದ್, ಸರಳ, ನಿರುಪದ್ರವಿ ಜೀವಿಯಾಗಿದ್ದ ಅವರು ನಮ್ಮ ನಡುವೆ ಇಲ್ಲದಿರುವುದು ವೈಯಕ್ತಿಕವಾಗಿ ಶೂನ್ಯತೆ ಕಾಡುತ್ತಿದೆ. ತಮಗೆ ಸರಿ ಎನ್ನುವ ವಿಚಾರದಲ್ಲಿ ನಿಷ್ಠೂರವಾಗಿದ್ದರು. ಫೋಟೋಗ್ರಫಿ ಅವರ ಆಸಕ್ತಿ, ನಾಣ್ಯ ಸಂಗ್ರಹ, ಸಾಹಿತ್ಯ ಎಲ್ಲದರಲ್ಲೂ ಆಸಕ್ತಿ ಹೊಂದಿದ್ದರು. ಆದರೆ ಯಾವುದನ್ನೂ ಬಲವಾಗಿ ಕಚ್ಚಿಕೊಳ್ಳದೆ ಇದ್ದಂತವರು. ಸರಳತೆ, ಕಳಕಳಿ ಅವರ ಬದುಕಿನ ವೈಶಿಷ್ಟ್ಯವಾಗಿತ್ತು ಎಂದು ಹೇಳಿದರು. ಉಪನ್ಯಾಸಕ ಡಿ.ಕೆ. ಪಾಂಡೆ, ಶಿಕ್ಷಕರಾದ ಎಸ್.ಎಂ. ಲೋಕೇಶ್, ನಾಗರಾಜ್, ಕೆ. ರಾಜ್ಕುಮಾರ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಕಾರ್ಯದರ್ಶಿ ಜಿ.ಪಿ. ಸಂಪತ್ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಸ್. ಶಿವಮೂರ್ತಿ ವಂದಿಸಿದರು. ಎಸ್. ದೇವಾನಂದ, ಇ. ಜಯಣ್ಣ, ಪ್ರಕಾಶ್ ಕಮ್ಮಾರ್, ಕುಬೇರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

