ಹೊಸನಗರ-ತೀರ್ಥಹಳ್ಳಿ ಭಾಗದ ರಸ್ತೆ ಅಭಿವೃದ್ಧಿಗೆ 80 ಕೋಟಿ
ಹೊಸನಗರ: ಹೊಸನಗರ ಮತ್ತು ತೀರ್ಥಹಳ್ಳಿ ಭಾಗದ ವಿವಿಧ ರಸ್ತೆ ಅಭಿವೃದ್ಧಿಗೆ ರು.80 ಕೋಟಿ ಹೆಚ್ಚು ಹಣ ವಿನಿಯೋಗಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ತಾಲೂಕಿನ ನಗರ ಗುಜರಿಪೇಟೆ-ಮಸೀದಿ ರಸ್ತೆ ಅಭಿವೃದ್ಧಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ, ನಗರ- ಕಾನುಗೋಡು 7.5 ಕಿಮೀ ರಸ್ತೆಗೆ ಅಪೆಂಡಿಕ್ಸ್-ಇ ಅಡಿ ರು.1.5ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜುರಾತಿ ಹಂತದಲ್ಲಿದೆ. ತೀರ್ಥಹಳ್ಳಿ ಹುಲಿಕಲ್ ರಸ್ತೆ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣಕ್ಕೆ ರು.2ಕೋಟಿ, ಜಯನಗರ-ಸೋನ್ಲೆ-ಬಿಳ್ಳೂಡಿ ರಸ್ತೆ ಅಭಿವೃದ್ಧಿಗೆ ರು.1ಕೋಟಿ, ಕಪದೂರು-ಹೆಬ್ಬಿಗೆ-ಬರುವೆ-ಕಿರತೋಡಿ ರಸ್ತೆಗೆ ರು.2.34ಕೋಟಿ, ಸಂಪೇಕಟ್ಟೆ ಹೆಬ್ಬುರುಳಿ-ಮತ್ತಿಮನೆ ರಸ್ತೆ ಅಭಿವೃದ್ಧಿಗೆ ರು.1ಕೋಟಿ, ಬೈಸೆ-ಚಕ್ರಾನಗರ-ಮುಂಡ್ರಳ್ಳಿ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯಡಿ ರು.65 ಲಕ್ಷ ಹಣ ಮಂಜೂರಾತಿಯಾಗಿದೆ. ತೀರ್ಥಹಳ್ಳಿ-ಕುಂದಾಪುರ ರಾ.ಹೆ.26ರ ರಸ್ತೆ ಅಗಲೀಕರಣ ಹಾಗು ಅಭಿವೃದ್ಧಿಗೆ ರು.9.98ಕೋಟಿ, ಹಲ್ಗೇರಿ ಹಾಲ್ಕಲ್ ರಾ.ಹೆ.26ರ ರಸ್ತೆ ಅಗಲೀಕರಣ ಹಾಗು ಅಭಿವೃದ್ಧಿಗೆ ರು.23ಕೋಟಿ ಮಂಜುರಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ನೀಡುವ ಹಂತದಲ್ಲಿದೆ ಎಂದರು.
ನಿರ್ಲಕ್ಷ ಮಾಡಿಲ್ಲ: ಸಚಿವನಾಗಿ ಕಾರ್ಯಭಾರ ಮಾಡುವ ಸಂದರ್ಭದಲ್ಲಿ ಕ್ಷೇತ್ರವನ್ನು ನಿರ್ಲಕ್ಷ ಮಾಡುವ ಪ್ರಶ್ನೆಯೆ ಇಲ್ಲ. ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಯೋಜನೆಗಳು ಎಲ್ಲಿಗೆ ಬೇಕು ಎಂಬುದರ ಬಗ್ಗೆ ಸಮಗ್ರ ಅರಿವು ಇದ್ದು ಅವೆಲ್ಲದರ ಬಗ್ಗೆ ಪ್ರಯತ್ನ ನಡೆಸಿದ್ದೇನೆ. ಶಿಕ್ಷಣ ಸಚಿವನಾಗಿ ರಾಜ್ಯದ 15 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲದೆ ವಿಧಾನಸೌಧದಲ್ಲು ಕೂಡ ಹೆಚ್ಚಿನ ಸಮಯ ಮೀಸಲಿಟ್ಟಿದ್ದೇನೆ ಮಾತ್ರವಲ್ಲ ಈ ನಡುವೆ ಕ್ಷೇತ್ರಕ್ಕೆ 60ಕ್ಕು ಹೆಚ್ಚು ಬಾರಿ ಬೇಟಿ ನೀಡಿದ್ದೇನೆ ಎಂದರಲ್ಲದೆ ಕ್ಷೇತ್ರದ ಜನತೆಗೆ ಕಳಂಕ ತರುವ ಕೆಲಸ ಎಂದಿಗು ಮಾಡುವುದಿಲ್ಲ ಸಾಧ್ಯವಾದಷ್ಟು ಮಟ್ಟಿಗೆ ಉತ್ತಮ ಕೆಲಸ ಮಾಡುತ್ತೇನೆ ಎಂದರು.
ಕಾನುಗೋಡು ರಸ್ತೆ ಅವ್ಯವಸ್ಥೆಗೆ ಪಾದಯಾತ್ರೆ ಹಮ್ಮಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು, ಪ್ರತಿಭಟನೆ ಅವರ ಹಕ್ಕು ಅದನ್ನು ಪ್ರಶ್ನಿಸುವುದಿಲ್ಲ. ಆದರೆ ರಸ್ತೆ ಕಾಮಗಾರಿ ಮಂಜುರಾತಿ ಪ್ರಕ್ರಿಯೆಯಲ್ಲಿರುವ ವಿಷಯ ತಿಳಿದ ಮೇಲೂ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಅನುಮಾನವಿದೆ ಎಂದು ಪ್ರತಿಕ್ರಯಿಸಿದರು.
ಕೆಪಿಸಿ ಸದಸ್ಯ ಜಿ.ಎಸ್.ನಾರಾಯಣರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಬಲೇಶ್ವರ್, ಜಿಪಂ ಸದಸ್ಯ ಸುಂದರೇಶ್, ಎಪಿಎಂಸಿ ಸದಸ್ಯ ರಾಮಚಂದ್ರರಾವ್, ಪಪಂ ಸದಸ್ಯ ಹಾಲಗದ್ದೆ ಉಮೇಶ್, ನಗರ ಕಾಂಗ್ರೆಸ್ ಘಟಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

