ಟಾಪರ್ ಕೋಚಿಂಗ್ ಸೆಂಟರ್ನಲ್ಲಿ ವಿವಿಧ ಪರೀಕ್ಷೆ
ಶಿವಮೊಗ್ಗ: ಸವಳಂಗ ರಸ್ತೆಯಲ್ಲಿರುವ ಟಾಪರ್ ಕೋಚಿಂಗ್ ಸೆಂಟರ್ನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಷಯ ತಜ್ಞರಿಂದ ಮಾಹಿತಿ ಪಡೆದುಕೊಂಡರು.
ಕುವೆಂಪು ವಿವಿ ಪ್ರಾಧ್ಯಾಪಕ ಡಾ ಜಿ. ಪ್ರಶಾಂತ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ಮನರಂಜನೆ ಮತ್ತು ಸೌಕರ್ಯವನ್ನು ಶಕ್ತಿ ಮೀರಿ ಶ್ರಮ ಮತ್ತು ಏಕ್ರಾಗತೆ ಮೂಲಕ ಸ್ಪರ್ಧೆಗಳನ್ನು ಗೆಲ್ಲಬೇಕು ಎಂದರು.
ಸಾಕಷ್ಟು ಮಾಹಿತಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ವಿಷಯದ ಕಲಿಕೆಗೆ ಸಂಬಂಧಿಸಿದಂತೆ ತಂತ್ರಜ್ಞಾನದ ಮೂಲಕ ಸಾಕಷ್ಟು ಮಾಹಿತಿ ಪಡೆಯಬಹುದು. ಆದರೆ, ಯಶಸ್ಸು ಗಳಿಸಲು ಯಾವುದೇ ತಂತ್ರಗಳಿಲ್ಲ. ಅದನ್ನು ಸ್ಪರ್ಧೆ ಮತ್ತು ಏಕ್ರಾಗತೆ ಮೂಲಕವೇ ಎದುರಿಸಿ ಗೆಲ್ಲಬೇಕು. ಇದಕ್ಕೆ ಇಚ್ಚಾಶಕ್ತಿ ಮತ್ತು ಕಠಿಣ ಶ್ರಮವೊಂದೇ ಸೂಕ್ತ ದಾರಿ ಎಂದರು.
ಜಕಣಾಚಾರಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಬುದ್ದಿವಂತಿಕೆಯಿಂದ ಸಮಾಜದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದು ಈ ಹಿಂದೆ ನಡೆದ ಕೆಎಎಸ್, ಬ್ಯಾಂಕಿಂಗ್ ಹಾಗೂ ಎಲ್ಐಸಿ ಅಭಿವೃದ್ಧಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೋಚಿಂಗ್ ಸೆಂಟರ್ ಮುಖ್ಯಸ್ಥ ರಾಕೇಶ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

