ಸದೃಢ ಸಹಕಾರಿ ಕ್ಷೇತ್ರದಿಂದ ರೈತರ ಸಬಲತೆ: ರಾಘವೇಂದ್ರ
ಕ.ಪ್ರ.ವಾರ್ತೆ ಶಿಕಾರಿಪುರ ನ.20
ಸದೃಢ ಸಹಕಾರಿ ಕ್ಷೇತ್ರದಿಂದ ಮಾತ್ರ ಜನಸಾಮಾನ್ಯ, ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದ್ದು ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಅತ್ಯುತ್ತಮ ಸಾಧನೆಯ ಮೂಲಕ ಸದೃಢವಾಗಿ ನೆಲೆಯೂರಿ ಸೇವೆ ಸಲ್ಲಿಸುತ್ತಿದೆ ಎಂದು ಸಂಸದ ರಾಘವೇಂದ್ರ ಶ್ಲಾಘಿಸಿದರು.
ಅವರು ಬುಧವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡದಿರು.
ದೆಹಲಿಗೆ ನಿಯೋಗ: ಜಿಲ್ಲೆಯ ಸಂಸದನಾಗಿ ಭದ್ರಾವತಿಯಲ್ಲಿರುವ ಸಾರ್ವಜನಿಕ ಸ್ವಾಮ್ಯದ ಏಕೈಕ ವಿಐಎಸ್ಎಸ್ ಕಾರ್ಖಾನೆಯ ಜೀರ್ಣೋದ್ಧಾರಕ್ಕಾಗಿ ಹಾಗೂ ಶಿಕಾರಿಪುರ ರಾಣೆಬೆನ್ನೂರು ಮಾರ್ಗದ ರೇಲ್ವೆ ಸಂಪರ್ಕಕ್ಕೆ ಬಜೆಟ್ನಲ್ಲಿ ಅನುಮೋದನೆಗೆ ಕೇಂದ್ರದ ಉಕ್ಕು ಮತ್ತು ಕಬ್ಬಿಣ ಸಚಿವರು ಹಾಗೂ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಅವರಿಗೆ ಮನವಿ ಸಲ್ಲಿಸಲು ಗುರುವಾರ ಬೆಳಿಗ್ಗೆ ದೆಹಲಿಗೆ ನಿಯೋಗದೊಂದಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಡಿ. ಭೂಕಾಂತ್ ವಹಿಸಿದ್ದರು.
ಶಿಮುಲ್ ಅಧ್ಯಕ್ಷ ಜಗದೀಶ್ವರ್, ಸದಸ್ಯ ಶಿವಶಂಕರ್, ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ಬಿ.ಎಂ ಪಾಲಾಕ್ಷಪ್ಪ, ರೇಖಾ, ಗಜೇಂದ್ರನಾಯ್ಕ, ಬೆಣ್ಣೆ ದೇವೇಂದ್ರಪ್ಪ, ಮಂಜಾಚಾರ್, ಅಂಗಡಿ ಜಗದೀಶ್, ವಸಂತ ಗೌಡ, ಹೂವಣ್ಣ, ಶಫಿ ಅಹ್ಮದ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

