ಶಿವಮೊಗ್ಗ

ದಾಸರಿಂದ ಸಮಾಜ ತಿದ್ದುವ ಪ್ರಯತ್ನ

Published On :

ಶಿರಾಳಕೊಪ್ಪ: ಸಮಾಜದ ಓರೆಕೋರೆ ತಿದ್ದುವ ಪ್ರಯತ್ನವನ್ನು ತಮ್ಮ ಸಾಹಿತ್ಯದ ಮೂಲಕ ಕನಕದಾಸರು 500 ವರ್ಷಗಳ ಹಿಂದೆ ಪ್ರಯತ್ನಿಸಿ ದಾಸಸಾಹಿತ್ಯ ಪರಂಪರೆಗೆ ನಾಂದಿ ಹಾಡಿದ ಮಹಾನ್ ವ್ಯಕ್ತಿಯಾಗಿ ಹೆಸರು ಪಡೆದರು ಎಂದು ಪಪಂ ಮುಖ್ಯಧಿಕಾರಿ ರಾಜ್‌ಕುಮಾರ್ ತಿಳಿಸಿದರು.
ಶಿರಾಳಕೊಪ್ಪ ಪಪಂನಲ್ಲಿ ಕನಕದಾಸರ 526ನೇ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಿ, ಅವರು ಅಂದು ದಾಸರ ಪರಂಪರೆಗೆ ಕನಕದಾಸರು ಮತ್ತು ಪುರಂದರದಾಸರು ನಾಂದಿ ಹಾಡಿದರೂ ಇಂದು ಅವರ ಸಾಹಿತ್ಯ ನಿತ್ಯ ವಿನೂತನವಾಗಿ ಅಚ್ಚಳಿಯದೇ ಉಳಿದಿವೆ ಎಂದರು.
ಕಂದಾಚಾರ ರೂಢಿ; ಇಂದು ನಾವು ಜಾತಿ ಮತ ಎಂಬ ಕಟ್ಟುಪಾಡಿಗೆ ಬಿದ್ದಿರುವ ನಾವು ಕಂದಾಚಾರ ರೂಢಿಸಿಕೊಂಡಿದ್ದೇವೆ. ಆದರೆ ಅಂದು ಕನಕದಾಸರು ಈ ಜಂಜಾಟಗಳನ್ನು ಅನುಭವಿಸಿ, ಭಕ್ತಿಮಾರ್ಗ ಅನುಸರಿಸಿ ದಾಸ ಸಾಹಿತ್ಯದ ಮುಖಾಂತರ ಜ್ಞಾನ ನೀಡಿದರು ಎಂದು ಅವರು ಹೇಳಿದರು.
ದಾಸರನ್ನು ಇಂದು ನೆನೆಯಬೇಕು. ಹಾಗೆಯೇ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಿದಾಗ ಶಾಂತಿ ದೊರಕಲು ಸಾಧ್ಯ ಎಂದರು. ಪಪಂ ಚುನಾಯಿತ ಪ್ರತಿನಿಧಿಗಳು ಪಪಂ ಸಿಬ್ಬಂದಿ ಮೊದಲಾದವರು ಇದ್ದರು.

ಒಂದು ಸಮಾಜಕ್ಕೆ ಸೀಮಿತವಲ್ಲ
ಸೊರಬ: ಕನಕದಾಸ ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಸಮಾಜದವರಿಗೂ ಬೇಕಾದವರಾಗಿದ್ದರು ಎಂದು ಸ.ಪ್ರ.ದ. ಕಾಲೇಜಿನ ಅತಿಥಿ ಉಪನ್ಯಾಸಕಿ ಪವಿತ್ರಾ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಹಾಗೂ ವಿವಿಧ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.
ಇದ್ದುದನ್ನು ಇದ್ದ  ಹಾಗೇಯೇ ಹೇಳಿದವರು ಕನಕದಾಸರು. ಜಾತಿ, ಕುಲ ಸಮಾಜದ ಅತ್ಯಂತ ಕೆಟ್ಟ ಪಿಡುಗು ಎಂದು 15 ನೇ ಶತಮಾನದಲ್ಲಿಯೇ ಹೇಳಿದ್ದರು. ಆದರೆ ಈ ವಿಷಯ ಇಂದಿಗೂ ಜೀವಂತವಿರುವುದು ಖೇದಕರ ಸಂಗತಿ ಎಂದರು.
ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಬಸವಲಿಂಗಪ್ಪ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ನೀಲಮ್ಮ ಸುರೇಶ್ ಉದ್ಘಾಟಿಸಿದರು. ತಾಪಂ ಸದಸ್ಯ ಜೈಶೀಲಪ್ಪ, ಸಹಾಯಕ ಕೃಷಿ ನಿರ್ದೇಶಕಿ ಜಿ. ಮಂಜುಳಾ, ಇಒ ಮೊಹಮ್ಮದ್ ಇಸ್ಮಾಯಿಲ್, ಕುರುಬ ಸಮಾಜದ ಅಧ್ಯಕ್ಷ ನಿಂಗಪ್ಪ, ಶಿರಸ್ತೇದಾರ್ ಶಶಿಕಲಾ, ಪಪಂ ಮುಖ್ಯಾಧಿಕಾರಿ ಸಂಗನ ಬಸವಯ್ಯ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಡಿ. ಹೊಳೆಲಿಂಗಪ್ಪ, ಗಂಗಮ್ಮಜ್ಜಿ, ಶಿವರಾಮ್  ನಾಯ್ಕ  ಹಾಗೂ ಶ್ರೀಕಾಂತ್ ಶೇಟ್ ಸೇರಿದಂತೆ ಪಟ್ಟಣದ ಹಲವು ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.