ಮೌಢ್ಯ ಸಂಪ್ರದಾಯ ಸಮಾಜಕ್ಕೆ ಶಾಪ
ಸಾಗರ: ಸಮಾಜದಲ್ಲಿ ಮೌಢ್ಯವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಕನಕದಾಸರ ಕೊಡುಗೆ ಅನನ್ಯವಾದುದು ಎಂದು ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ ಹೇಳಿದರು.
ತಾಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದಲ್ಲಿನ ಮೌಢ್ಯ ಕಳೆಯಲು ಕನಕದಾಸರು ಕವಿಯಾಗಿ, ಸಮಾಜ ಸುಧಾರಕರಾಗಿ ಅವಿರತವಾಗಿ ಶ್ರಮಿಸಿದ್ದಾರೆ ಎಂದರು.
ಸಾಮಾಜಿಕ ಪ್ರಬುದ್ಧತೆ: ಸಮಾಜ ಅಧಃಪತನಕ್ಕೆ ಹೋದಾಗಲೆಲ್ಲಾ ಒಬ್ಬೊಬ್ಬ ಮಹಾಪುರುಷರು ಜನ್ಮ ತೆಳೆದು, ಮೌಢ್ಯದ ಕೊಳೆಯನ್ನು ತೊಳೆಯುವ ಕೆಲಸ ಮಾಡಿದ್ದಾರೆ. ಬುದ್ದ, ಮಹಾವೀರ, ಬಸವಣ್ಣ, ಕನಕದಾಸರು, ಗಾಂಧೀಜಿ, ಅಂಬೇಡ್ಕರ್ ಅವರ ಜೀವನಶೈಲಿಯನ್ನೊಮ್ಮೆ ಪರಿಶೀಲಿಸಿದಾಗ ಅವರ ಸಮಾಜಮುಖಿ ಚಿಂತನೆ ನಮಗೆ ಅರ್ಥವಾಗುತ್ತದೆ. ಇವರೆಲ್ಲರ ಪ್ರಯತ್ನದ ಫಲವಾಗಿ ಸಾಮಾಜಿಕ ಪ್ರಬುದ್ಧತೆ ಸ್ಥಾಪಿಸಲು ಸಾಧ್ಯವಾಗಿದೆ ಎಂದರು.
16ನೇ ಶತಮಾನದಲ್ಲಿ ಕನಕದಾಸರು ಜಾತಿ ಧರ್ಮ ಹಾಗೂ ಮೌಢ್ಯ ಸಂಪ್ರದಾಯವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ದೇಶದಾದ್ಯಂತ ಸಂಚರಿಸಿ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ನಾವು 21ನೇ ಶತಮಾನದಲ್ಲಿದ್ದೇವೆ. ಇಂದಿಗೂ ನಮ್ಮ ನಡುವೆ ಕೆಲವು ಮೌಢ್ಯ ಸಂಪ್ರದಾಯಗಳು ಸಮಾಜಕ್ಕೆ ಶಾಪವಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ಗಮನ ಹರಿಸಿದಾಗ ಇಂತಹ ಆಚರಣೆಗಳು ಅರ್ಥಪೂರ್ಣವಾಗುತ್ತದೆ ಎಂದರು.
ಒಂಟಿ ಹೋರಾಟ: ಕನಕದಾಸರ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಸಫ್ರಾಜ್ ಚಂದ್ರಗುತ್ತಿ, ಕನಕದಾಸರದ್ದು ಒಂಟಿ ಹೋರಾಟ. ಕನಕದಾಸರು ಸೇರಿದಂತೆ ವಿವೇಕಾನಂದರು, ಕುವೆಂಪು ಇನ್ನಿತರರು ಹಿಂದೂಧರ್ಮದ ವಿರುದ್ಧ ಧ್ವನಿ ಎತ್ತಿದವರಲ್ಲ. ಹಿಂದೂ ಧರ್ಮದೊಳಗಿನ ಕೆಲವು ಆಚರಣೆಗಳನ್ನು ವಿರೋಧಿಸಿಕೊಂಡು ಬಂದವರು. ಕನಕದಾಸರು ಹಕ್ಕಿಗಾಗಿ ಒತ್ತಾಯ ಮಾಡಿದ ಮೊದಲ ಸತ್ಯಾಗ್ರಹಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ ಎಂದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಗಂಟೆ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಸಜಿದ್ ಅಹ್ಮದ್ ಮುಲ್ಲಾ, ಕುರುಬ ಸಮಾಜದ ಕಾರ್ಯದರ್ಶಿ ಉಮೇಶ್ ಚಟಗಿ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆ.ಬಿ.ಕೆಂಚಳ್ಳಿ, ನಗರಸಭೆ ಪ್ರಭಾರಿ ಪೌರಯುಕ್ತ ಪೂವಯ್ಯ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

