ಶಿವಮೊಗ್ಗ

ಡಾ. ವೀರೇಂದ್ರ ಹೆಗ್ಗಡೆಗೆ ಭಾರತ ರತ್ನ ನೀಡಲು ಆಗ್ರಹ

Published On :

ಕ.ಪ್ರ.ವಾರ್ತೆ, ಸಾಗರ, ನ. 24
ರಾಜ್ಯದಲ್ಲಿ ರೈತರಿಗೆ 11.5 ಕೋಟಿ ಸಹಾಯಧನ ಸೇರಿದಂತೆ ಸಾಲ, ಕೃಷಿ ಉಪಕರಣ ನೀಡಿರುವ ಧರ್ಮಸ್ಥಳ ಯೋಜನೆಯ ಹರಿಕಾರ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಭಾರತ ರತ್ನ ಸಮ್ಮಾನ ನೀಡಿ ಗೌರವಿಸಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ  ಆಗ್ರಹಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಗರ ವಲಯ ವಿವಿಧ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ತಾಲೂಕಿನ ಎಡಜಿಗಳೇ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣದಲ್ಲಿ ಅಳರು ಮಾತನಾಡಿದರು.
ಕಳವಳಕಾರಿ: ದೇಶದ ಶೇ. 26ರಷ್ಟು ಮಾತ್ರ ಕೃಷಿ ಆದಾಯ ಲಭ್ಯವಾಗುತ್ತಿದ್ದು, 1995ರ ನಂತರ 10 ಲಕ್ಷಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕಳವಳಕಾರಿ ವಿಚಾರ. ಇಂತಹ ವೇಳೆ ಸರ್ಕಾರ 1026 ಕೋಟಿ ಹಣವನ್ನು ವಿದರ್ಭ ಪ್ಯಾಕೇಜಿನಡಿ ಒದಗಿಸಿದರೆ ಅಧಿಕಾರಿಗಳು ಅದರ ಅಸಮರ್ಪಕ ಬಳಕೆ ಮೂಲಕ ರೈತರ ಗಾಯಕ್ಕೆ ಉಪ್ಪು ಹಚ್ಚಿದರು ಎಂದು ಅವರು ಟೀಕಿಸಿದರು.
 ಗ್ರಾಪಂ ಅಧ್ಯಕ್ಷೆ ಶಶಿಕಲಾ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಸದಸ್ಯರಾದ ರಾಮಚಂದ್ರ ಎಂ.ಡಿ., ಕೃಷ್ಣಮೂರ್ತಿ, ಹಾಲಿ ಸದಸ್ಯ ಶ್ರೀನಿವಾಸ ಶೇರಿಗಾರ್, ಪತ್ರಕರ್ತ ಹಿತಕರ ಜೈನ್  ಮೊದಲಾದವರು ಹಾಜರಿದ್ದರು.
 ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಅಶೋಕ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಕೆ.ತಿಮ್ಮಪ್ಪ, ಕೈಗಾರಿಕಾ ವಿಸ್ತರಣಾಧಿಕಾರಿ ವೆಂಕಟೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.