ಶಿವಮೊಗ್ಗ

ಲಾರಿ ಅಡ್ಡಗಟ್ಟಿ 2.20 ಲಕ್ಷ ನಗದು ಅಪಹರಣ

Published On :

ಸಾಗರ: ತಾಲೂಕಿನ ಸೊರಬ ರಸ್ತೆಯಲ್ಲಿನ ಗುಡ್ಡೇಕೌತಿ ಗ್ರಾಮದ ಸಮೀಪ ಸಕ್ಕರೆ ತುಂಬಿಕೊಂಡು ಸಾಗರ ಪಟ್ಟಣಕ್ಕೆ ಬರುತ್ತಿದ್ದ ಲಾರಿಯೊಂದನ್ನು ಅಡ್ಡಗಟ್ಟಿ ಚಾಲಕನ ಗಮನ ಬೇರೆಡೆಗೆ ಸೆಳೆದು ಕಾರದ ಪುಡಿ ಎರಚಿ ಸುಮಾರು 2.20 ಲಕ್ಷ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಭಾನುವಾರ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಸ್ಪ್ಲೆಂಡರ್ ಕಪ್ಪುಬಣ್ಣದ ಬೈಕಿನಲ್ಲಿ ಆಗಮಿಸಿದ ಇಬ್ಬರು ಲಾರಿ ಚಾಲಕ ಹಾಗೂ ಮಾಲೀಕನಾಗಿರುವ ನೆಹರೂ ನಗರದ ರಾಘು ಅವರನ್ನು ಕುರಿತು ಸಕ್ಕರೆ ಮೂಟೆ ಬೀಳುತ್ತಿವೆ ಎಂದು ಕೂಗಿದ್ದಾರಂತೆ. ವಿಷಯ ತಿಳಿದ ರಾಘು ಬಿನ್ ಗೋಪಾಲ ಅವರು ಲಾರಿ ನಿಲ್ಲಿಸಿ ಸಕ್ಕರೆ ಮೂಟೆ ಪರಿಶೀಲಿಸುತ್ತಿದ್ದಾಗ ಹಿಂದಿನಿಂದ ಬಂದ ಇಬ್ಬರು ಕಾರದಪುಡಿಯನ್ನು ಕಣ್ಣಿಗೆ ಎರಚಿ ಚಾಲಕನ ಬಟ್ಟೆ ಹರಿದು ರಂಪ ಮಾಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ದರೋಡೆಕೋರರು ಲಾರಿಯ ಕ್ಯಾಬಿನ್ ಒಳಗೆ ಭದ್ರವಗಿಟ್ಟಿದ್ದ 2.20 ಲಕ್ಷ ಹಣ ದೋಚಿಕೊಂಡು ಲಾರಿಯ ಎದುರಿನ ಎರಡು ಗಾಜು ಒಡೆದು ಪರಾರಿಯಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಘು ಪೊಲೀಸರ ಮುಂದೆ ಮಾಹಿತಿ ನೀಡಿದ್ದಾನೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.