ಶಿವಮೊಗ್ಗ

ಏಕಾಗ್ರತೆ ಇದ್ದಾಗ ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯ

Published On :

ಸಾಗರ: ಸಂವೇದನಾಶೀಲ ಮನಸ್ಸು ಹಾಗೂ ಏಕಾಗ್ರತೆ ಇದ್ದಾಗ ಉತ್ತಮ ಛಾಯಾಚಿತ್ರಗಾರರಾಗಲು ಸಾಧ್ಯ ಎಂದು ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಹೇಳಿದರು.
 ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಸಾಹಿತ್ಯ ಮತ್ತು ಛಾಯಾಚಿತ್ರ ಕ್ಷೇತ್ರ ನವನವೋನ್ಮೇಶ ಶಾಲಿನಿ ಇದ್ದಂತೆ. ಸದಾ ಹೊಸದನ್ನು ಹುಡುಕುವ ಕೆಲಸ ಈ ಎರಡೂ ಕ್ಷೇತ್ರಗಳಲ್ಲಿ ನಡೆಯುತ್ತಿರುತ್ತದೆ ಎಂದು ಅಭಿಪ್ರಾಯಪಟ್ಟರು.
 ಪ್ರಸ್ತುತ ಛಾಯಾಚಿತ್ರ ಕ್ಷೇತ್ರದಲ್ಲಿ ವಿಫುಲ ಅವಕಾಶವಿದೆ. ಹೊಸಹೊಸ ತಂತ್ರಜ್ಞಾನಗಳ ಪ್ರವೇಶದ ಜೊತೆಗೆ ವಿದೇಶಿ ಕಂಪನಿಗಳು ಈ ಕ್ಷೇತ್ರವನ್ನು ಪ್ರವೇಶಿಸುತ್ತಿವೆ. ಇಂತಹ ಸಂದರ್ಭದಲ್ಲಿ ಛಾಯಾಚಿತ್ರಗ್ರಾಹಕರು ಹೆಚ್ಚು ಆಸಕ್ತಿಯಿಂದ ತಮ್ಮ ವೃತ್ತಿಯನ್ನು ಮುಂದುವರೆಸಬೇಕು. ಛಾಯಾಚಿತ್ರ ಕ್ಷೇತ್ರವನ್ನು ಒಂದು ಕಸುಬು ಎಂದು ತಿಳಿದುಕೊಳ್ಳದೆ ಅದನ್ನು ಆಧ್ಯಾತ್ಮ ಎಂಬ ಮನೋಭೂಮಿಕೆ ನಿಮ್ಮಲ್ಲಿ ಸಿದ್ದವಾಗಬೇಕು ಎಂದರು.
 ಜಿಪಂ ಮಾಜಿ ಸದಸ್ಯ ಕಾಗೋಡು ಅಣ್ಣಪ್ಪ , ತಾಳ್ಮೆ ಹಾಗೂ ದೃಢತೆ ಇರುವ ವ್ಯಕ್ತಿ ಉತ್ತಮ ಛಾಯಾಗ್ರಾಹಕನಾಗಬಹುದು. ಪ್ರತಿ ಕ್ಷೇತ್ರದಲ್ಲಿ ಸವಾಲು ಇದ್ದಂತೆ ಫೋಟೋಗ್ರಫಿ ಕ್ಷೇತ್ರದಲ್ಲೂ ಸವಾಲು ಇದೆ. ಹೊಸಬರು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಬದಲಾವಣೆ ಆಗಿದೆ. ಫೋಟೋಗ್ರಫಿಯ ಆಳ ಮತ್ತು ವಿಸ್ತೀರ್ಣವನ್ನು ಅರಿತುಕೊಂಡಾಗ ನಿಮ್ಮಲ್ಲಿರುವ ಕಲಾವಿದನನ್ನು ಜಾಗೃತಿಗೊಳಿಸಲು ಸಾಧ್ಯವಾಗುತ್ತದೆ ಎಂದರು.
 ಕಾರ್ಯಕ್ರಮದಲ್ಲಿ ಪರಿಸರ ವಿಭಾಗದಲ್ಲಿ ಅಂತರಾಷ್ಟ್ರೀಯ ಛಾಯಾಯಾಗ್ರಹಣ ಪ್ರಶಸ್ತಿ ಪಡೆದ ಆರ್. ಸತೀಶ್ ಅವರನ್ನು ಅಭಿನಂದಿಸಲಾಯಿತು. ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸಿಕೊಂಡ ಸಂಘದ ಅಧ್ಯಕ್ಷ ಎಂ.ಅನಿಲಕುಮಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಂ. ಅನಿಲಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದಾನಿ ರಘುಪತಿರಾವ್ ಮತ್ತಿಕೊಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.