ಉತ್ತಮ ಚೆಸ್ಪಟುಗೆ ಏಕಾಗ್ರತೆ ಅಗತ್ಯ
ಸಾಗರ, ಸೆ.1: ಯೋಚನೆ, ಮುಂದಾಲೋಚನೆ ಹಾಗೂ ಸವಾಲನ್ನು ಸಮರ್ಥವಾಗಿ ಸ್ವೀಕರಿಸುವವರು ಮಾತ್ರ ಉತ್ತಮ ಚದುರಂಗ ಪಟುಗಳಾಗಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಬಿ.ಎಸ್. ಶಿವಾನಂದ ಹೇಳಿದರು.
ಭಾನುವಾರ ನೂತನವಾಗಿ ಸ್ಥಾಪಿಸಲಾಗಿರುವ ತಾಲೂಕು ಚೆಸ್ ಅಸೋಸಿಯೇಷನ್ ಹಾಗೂ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಉದ್ಘಾಟಿಸಿ, ತಾಳ್ಮೆ ಹಾಗೂ ಏಕಾಗ್ರತೆ ಇಲ್ಲದವರು ಉತ್ತಮ ಚದುರಂಗಪಟು ಆಗುವುದಿಲ್ಲ. ತಾಳ್ಮೆ ಹಾಗೂ ಏಕಾಗ್ರತೆ ಚದುರಂಗ ಪಟುವಿಗೆ ಭೂಷಣ ಎಂದರು.
ಇಷ್ಟಪಟ್ಟು ಆಡಬೇಕು: ಚದುರಂಗವನ್ನು ಕಷ್ಟಪಟ್ಟು ಆಡುವುದಕ್ಕಿಂತ ಇಷ್ಟಪಟ್ಟು ಆಡಬೇಕು. ತಾಂತ್ರಿಕವಾಗಿ ಯೋಚಿಸುವ ಶಕ್ತಿ ಹಾಗೂ ತರ್ಕವನ್ನು ಚದುರಂಗದಿಂದ ಕಲಿತುಕೊಳ್ಳಬಹುದು. ನಮ್ಮಲ್ಲಿ ಚದುರಂಗ ಆಟ ಆಡುವವರಿಗೆ ಕೊರತೆ ಇಲ್ಲ. ಆದರೆ ಸೂಕ್ತ ಪ್ರೋತ್ಸಾಹವಿಲ್ಲದೆ ಆಟಗಾರರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಗತ್ತಿನ 200ಕ್ಕೂ ಹೆಚ್ಚು ದೇಶಗಳಲ್ಲಿ ಚದುರಂಗ ಜನಪ್ರಿಯತೆ ಹೊಂದಿದೆ. ಫುಟ್ಬಾಲ್ ಬಿಟ್ಟರೆ ಅತಿಹೆಚ್ಚು ಜನ ಇಷ್ಟಪಡುವ ಕ್ರೀಡೆ ಚದುರಂಗ. ಭಾರತದಲ್ಲಿ ವಿಶ್ವನಾಥನ್ ಆನಂದ್, ಶಶಿಕಿರಣ್, ಹರಿಕೃಷ್ಣರಂತಹ ಖ್ಯಾತನಾಮರು ಚೆಸ್ ಕ್ಷೇತ್ರದಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ. ಅವರನ್ನು ಹೊಸದಾಗಿ ಬರುವ ಆಟಗಾರರು ಆದರ್ಶವಾಗಿ ಇರಿಸಿಕೊಳ್ಳಬೇಕು ಎಂದರು.
ಅಸೋಸಿಯೇಷನ್ ವತಿಯಿಂದ ಬಿ.ಎಸ್.ಶಿವಾನಂದ ಅವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಚದುರಂಗ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಧೃವ ಚಿಪ್ಳಿ, ಶಶಾಂಕ್ ಎಚ್.ಎಸ್., ಚಿತ್ಕಲ ವಿ.ಭಟ್, ಮನಸ್ವಿನಿ ಮೊದಲಾದವರನ್ನು ಅಭಿನಂದಿಸಲಾಯಿತು.
ಸುರೇಶ್ ಸ್ವಾಗತಿಸಿದರು. ಅಖಿಲೇಶ್ ಚಿಪ್ಪಳ್ಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

