ಶಿವಮೊಗ್ಗ

ಭಾಗವತ ಕಲಾವಿದ ಸುರೇಶ್‌ಗೆ ಸನ್ಮಾನ

Published On :

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ  ಭಾನುವಾರ ಸಂಜೆ ನಡೆದ ಯಕ್ಷಗಾನ ಮಾರುತಿ ಪ್ರತಾಪ, ಭೀಷ್ಮಪರ್ವ ಪ್ರದರ್ಶನದ ವೇಳೆ ಕಲಾಭಿಮಾನಿಗಳು ಖ್ಯಾತ ಭಾಗವತ ಕಲಾವಿದ ಸುರೇಶ್ ಶೆಟ್ಟಿಯವರನ್ನು ಆತ್ಮೀಯವಾಗಿ ಗೌರವಿಸಿದರು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ್ ಶೆಟ್ಟಿಯವರು, ಕಲಾವಿದರಿಗೆ ಕಲಾಭಿಮಾನಿಗಳೇ ಶ್ರೀರಕ್ಷೆ ಎಂದರು. ಕಲೆಗೆ ಹಾಗೂ ಕಲಾವಿದರಿಗೆ ಸಮಾಜ ಪ್ರೋತ್ಸಾಹ ಅಗತ್ಯ ಈ ನಿಟ್ಟಿನಲ್ಲಿ ನನ್ನ ಯಕ್ಷಗಾನದ ಬದುಕಿನಲ್ಲಿ ಅಭಿಮಾನಿಗಳ ಋಣ ತೀರಿಸಲಾರೆ, ಕೇವಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಯಕ್ಷಗಾನದಂತಹ ಶ್ರೇಷ್ಠ ಕಲೆಯ ಬೆಲೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ-ಪ್ರಸಾರ ಮಾಡುವ ಕಾರ್ರ್ಯ ಆಗಬೇಕು ಎಂದು ಹೇಳಿದರು.  ಉಪನ್ಯಾಸಕ, ಯಕ್ಷಗಾನ ಕಲಾವಿದ ವಿದ್ವಾನ್ ದತ್ತಮೂರ್ತಿ ನಿರೂಪಿಸಿದರು. ಶಿವಮೊಗ್ಗ ನಗರದ ಸರ್ಕಲ್ ಇನ್‌ಸ್ಪೆಕ್ಟರ್ ಜಯರಾಜ್, ಹವ್ಯಕ ಸಂಘದ ಅಧ್ಯಕ್ಷ ಅಶೋಕ ಭಟ್, ಯಕ್ಷಗುರು ಪರಮೇಶ್ವರ ಹೆಗಡೆ, ಆನಂದ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಪುರೋಹಿತ ಯೋಗೀಶ್ ಉಡುಪ ಮತ್ತು ಕುಶಲ್ ಸೆಟ್ಟಿ ಮುಂತಾದವರು ಹಾಜರಿದ್ದರು. ಕಲಾಭಿಮಾನಿಗಳಿಂದ ಸಂಗ್ರಹಿಸಲ್ಪಟ್ಟ ಕಲಾಕಾಣಿಕೆಯನ್ನು ಇದೇ ವೇಳೆ ಸುರೇಶ್ ಶೆಟ್ಟಿಯವರಿಗೆ ಅರ್ಪಿಶಲಾಯಿತು.
ಪ್ರತ್ಯೇಕ ಮಸೂದೆ ಜಾರಿಯಾಗಲಿ
ಸೊರಬ: ಕಾರ್ಮಿಕರಿಗಾಗಿ ಪ್ರತ್ಯೇಕ ಮಸೂದೆಯೇ ಜಾರಿಯಾಗಬೇಕು ಎಂದು ಕೆಎಸ್ಸಿಡಬ್ಲ್ಯೂಸಿ  ರಾಜ್ಯ ಸಂಘಟನಾ ಕಾರ್ಯದರ್ಶಿ ಧನಶೇಖರ್ ಆಗ್ರಹಿಸಿದ್ದಾರೆ. ತಾಲೂಕು ಆನವಟ್ಟಿ ಸಪಪೂ ಕಾಲೇಜು ಸಭಾಂಗಣದಲ್ಲಿ ರಾಜ್ಯ ಕನ್ಟ್ರ್ಸ್‌ಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ವತಿಯಿಂದ ನಡೆದ ಕಟ್ಟಡ ಕಾರ್ಮಿಕರ ಸಂಘ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ವಲಯದಲ್ಲಿ ಶ್ರಮ ಹಾಗೂ ಕೌಶಲ್ಯ ಹೊಂದಿರುವ ರಂಗಗಳಲ್ಲಿ ಕೃಷಿ, ಕಟ್ಟಡ ನಿರ್ಮಾಣ ಪ್ರಮುಖವಾಗಿದೆ.  ಇಲ್ಲಿ ಶ್ರಮಜೀವಿಗಳೇ ಹೆಚ್ಚಾಗಿ ದುಡಿಯುತ್ತಾರೆ. ಕಾರ್ಮಿಕರಲ್ಲಿ ಶೇ.7 ಸಂಘಟಿತ ಹಾಗೂ ಶೇ.93 ಅಸಂಘಟಿತರಾಗಿದ್ದು, ಬೋನಸ್, ವೇತನ, ನಿವೃತ್ತಿ ವೇತನ, ಬಡ್ತಿ, ರಜೆ, ಪಂಚಣಿ ಮುಂತಾದವುಗಳನ್ನು ಸಂಘಟಿತರೇ  ಬಹುತೇಕ ಪಡೆಯುತ್ತಿದೆ. ಅಸಂಘಟಿತರು ಆರ್ಥಿಕ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು. ಕಾರ್ಮಿಕರಿಗಾಗಿ 1,670 ಕಾನೂನುಗಳಿದ್ದರೂ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲ. ಈ ಎಲ್ಲ ನಿಟ್ಟಿನಲ್ಲಿ ಸಂಘಟಿತರಾಗುವ ಮೂಲಕ ಸೌಲಭ್ಯ ಪಡೆಯಬೇಕು ಎಂದರು.  ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಟೀಲ್, ಜೆ. ಚಂದ್ರಶೇಖರಪ್ಪ, ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.