ಶಿವಮೊಗ್ಗ

ಇಂದು ಕೃಷ್ಣ ಸಂಧಾನ ನಾಟಕ ಪ್ರದರ್ಶನ

Published On :

ಶಿವಮೊಗ್ಗ: ಭಾರತೀಯ ಜೀವ ವಿಮಾ ನಿಗಮ ಸೆ.4ರಂದು ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಕೃಷ್ಣಸಂಧಾನ ಎಂಬ ಹಾಸ್ಯ ನಾಟಕ ಪ್ರದರ್ಶನ ಆಯೋಜಿಸಿದೆ. ಶಿವಮೊಗ್ಗದ ಹೊಂಗಿರಣ ತಂಡದ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದು, ಚಂದ್ರಶೇಖರ್ ಹಿರೇಗೋಣಿಗೆರೆ ನಿರ್ದೇಶಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಚೇರಿಯ ಹಿರಿಯ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಚಿಂತನ- ಮಂಥನ
ಶಿವಮೊಗ್ಗ: ಧಾರ್ಮಿಕ ಸಂಸ್ಕಾರ ಸಂವರ್ಧನಾ ಸಮಿತಿ ಸೆ.6ರಂದು ಸಂಜೆ 4.30ಕ್ಕೆ ರವೀಂದ್ರನಗರದ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದ ವೈಶಿಷ್ಟ್ಯ ಕುರಿತು ಚಿಂತನ-ಮಂಥನ ಕಾರ್ಯಕ್ರಮ ಏರ್ಪಡಿಸಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಆರ್‌ಎಸ್‌ಎಸ್ ವಿಶೇಷ ವಿಭಾಗದ ಪ್ರಚಾರಕ ಆದಿಗಲ್ ಲಕ್ಷ್ಮೀನಾರಾಯಣ, ಮುಖಂಡ ಪಟ್ಟಾಭಿರಾಮ್ ಆಗಮಿಸಲಿದ್ದಾರೆ. ಸಾರ್ವಜನಿಕರು ಭಾಗವಹಿಸಬೇಕು ಎಂದು ಸಮಿತಿ ಸಂಚಾಲಕ ಕೆ.ಟಿ. ಶ್ರೀನಿವಾಸರಾವ್ ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಶ್ರೀಸಮೀರ ವಿವಿದೋದ್ದೇಶ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸೆ.29ರಂದು ಅಂಬೇಡ್ಕರ್ ಭವನದಲ್ಲಿ ಸಂಘದ ಸರ್ವ ಸದಸ್ಯರ ಸಭೆ ಏರ್ಪಡಿಸಿದೆ. ಇದೇ ವೇಳೆ ಸದಸ್ಯರ ಮಕ್ಕಳಿಗೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕಪಡೆದ ಹಾಗೂ ಪದವಿ ಪರೀಕ್ಷೆಯಲ್ಲಿ ಶೆ.75ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
 ಆಸಕ್ತರು ಕೈ ಬರಹದಲ್ಲಿ ಅರ್ಜಿ ಬರೆದು, ಅಂಕಪಟ್ಟಿ ಸಲ್ಲಿಸಬೇಕು.ಅರ್ಜಿಯಲ್ಲಿ ಸಂಘದ ಸದಸ್ಯರ ಸದಸ್ಯತ್ವ ಸಂಖ್ಯೆ, ಹೆಸರು, ತಂದೆ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಬರೆದು ಸೆ.15ರಂದು ಬೆಳಿಗ್ಗೆ 11 ಗಂಟೆಯೊಳಗೆ ಸಂಘದ ಕಾರ್ಯಾಲಕ್ಕೆ ಕಳುಹಿಸಿಕೊಡಬಹುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ತಪಾಸಣಾ ಶಿಬಿರ
ಶಿವಮೊಗ್ಗ: ಮೈಕ್ರೋ ಲ್ಯಾಬ್ ಮತ್ತು ಜಯನಗರದ ಡಾ. ಜೈನ್ಸ್ ಹೆಲ್ತ್ ಸೆಂಟರ್‌ನಲ್ಲಿ ಸೆ.4ರಂದು ಉಚಿತ ಇಸಿಜಿ ಪರೀಕ್ಷೆ ಮುಖಾಂತರ ಹೃದಯಾ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಕಂಪ್ಯೂಟರೈಸಡ್, ಸ್ಪೈರೋಮೆಟ್ರಿ ಮುಖಾಂತರ ಶ್ವಾಸಕೋಶ ಪರೀಕ್ಷೆ ಮತ್ತು ಆಯುರ್ವೇದ ತಪಾಸಣೆ ನಡೆಸಲಾಗುವುದು.
 ಅಧಿಕ ತೂಕ, ಸಕ್ಕರೆ ಕಾಯಿಲೆ, ಕೆಮ್ಮು, ಧಮ್ಮು, ಉಬ್ಬಸ, ಅಸ್ತಮ, ಅಲರ್ಜಿ, ಎದೆ ನೋವು ಸಮಸ್ಯೆ ಇರುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಸೆಂಟರ್‌ನ ವೈದ್ಯರು ತಿಳಿಸಿದ್ದಾರೆ. ವಿವರಗಳಿಗಾಗಿ- 08182-402681.
ನೋಂದಣಿ ಕಾರ್ಯ
ಶಿವಮೊಗ್ಗ: ಗುರುಸಿದ್ದರಾಮೇಶ್ವರ ಜಿಲ್ಲಾ ಭೋವಿ ವಿವಿದ್ದೋದೇಶ ಸಹಕಾರ ಸಂಘ ನಿಯಮಿತ ಯಶಸ್ವಿನಿ ಯೋಜನೆಯ ಮುಖಾಂತರ ಫಲಾನುಭವಿಗಳನ್ನು ನೋಂದಾಯಿಸುತ್ತಿದ್ದು, ಈ ಯೋಜನೆಯ ಸದುಪಯೋಗವನ್ನು ಷೇರುದಾರರು ಮತ್ತು ಅವರ ಕುಟುಂಬದವರು ಪಡೆದುಕೊಳ್ಳುವಂತೆ ಸಂಘದ ಕಾರ್ಯದರ್ಶಿ ಟಿ.ಸೌಭಾಗ್ಯಲಕ್ಷ್ಮೀ ತಿಳಿಸಿದ್ದಾರೆ. ವಿವರಗಳಿಗಾಗಿ- 08182-403730.
ಮನವಿ ಅರ್ಪಣೆ
ಶಿವಮೊಗ್ಗ: ಇದೇ ಮೊದಲ ಬಾರಿಗೆ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.5ರಂದು ನಗರಕ್ಕೆ ಆಗಮಿಸುತ್ತಿದ್ದು, ಅವರಿಗೆ ತಾಲೂಕು ಆಟೋ ಚಾಲಕರ ಸಂಘ ಸ್ವಾಗತ ಕೋರಿದೆ. ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಟೋ ಚಾಲಕರ ಸಂಘದಿಂದ ಮನವಿ ಅರ್ಪಿಸಲಾಗುವುದು. ಹಾಗಾಗಿ ಆಟೋ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಧ್ಯಕ್ಷ ಎಂ. ಪಾಲಪ್ಪ ತಿಳಿಸಿದ್ದಾರೆ.
ಪಂಚಾಮೃತ ಅಭಿಷೇಕ
ಶಿವಮೊಗ್ಗ: ಶ್ರೀಶನೈಶ್ಚರ ಸೇವಾ ಸಮಿತಿ ಟ್ರಸ್ಟ್ ಸೆ.5ರಂದು ಅಮವಾಸ್ಯೆ ಪ್ರಯುಕ್ತ ಶ್ರೀ ಸನ್ನಿಧಿಯಲ್ಲಿ ಬೆಳಿಗ್ಗೆ 6.30ರಿಂದ 7.30ರವರೆಗೆ ನವಗ್ರಹ ಮೂಲಬಿಂಬಕ್ಕೆ ಪಂಚಾಮೃತ ಅಭಿಷೇಕ ಏರ್ಪಡಿಸಿದೆ ಎಂದು ರಮೇಶ ಭಟ್ಟ ತಿಳಿಸಿದ್ದಾರೆ. ವಿವರಗಳಿಗಾಗಿ- 9449699584.
ಭಾವಗೀತೆ ಸ್ಪರ್ಧೆ
ಶಿವಮೊಗ್ಗ: ಹೊಸಹಳ್ಳಿ ಗೆಳೆಯರ ಬಳಗ ಸೆ.15ರಂದು ಹೊಸಹಳ್ಳಿಯ ಗಮಕ ಭನದಲ್ಲಿ ದಿ. ರಘುಪತಿ ಸ್ಮಾರಕ ಭಾವಗೀತೆ ಸ್ಪರ್ಧೆ ಏರ್ಪಡಿಸಿದೆ. 16ರಿಂದ 30 ವರ್ಷ ವಯೋವುತಿಯವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1 ಸಾವಿರ ರುಪಾಯಿ, ದ್ವಿತೀಯ 750 ರುಪಾಯಿ, ತೃತೀಯ 500ರುಪಾಯಿ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವರು 100 ರುಪಾಯಿ ಪ್ರವೇಶ ಶುಲ್ಕವನ್ನು ಪಾವತಿಸಿ ಸೆ.12ರೊಳಗೆ ತಮ್ಮ ಹೆಸರು ನೋಂದಾಯಿಸುವಂತೆ ಬಳಗ ತಿಳಿಸಿದೆ. ವಿವರಗಳಿಗಾಗಿ- 9448394214.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.